Districts

ಹಸುವಿನ ಕರುವಿಗೆ ತೊಟ್ಟಿಲು ಶಾಸ್ತ್ರ

ಕಲಬುರಗಿ : ಮಕ್ಕಳ ತೊಟ್ಟಿಲು ಶಾಸ್ತ್ರವನ್ನು ಅದ್ದೂರಿಯಾಗಿ ಮಾಡುವವರನ್ನು ನೀವು ನೋಡಿಯೇ ಇರ್ತೀರಾ. ಆದರೆ ಇದು ಸ್ವಲ್ಪ ಡಿಫರೆಂಟ್‌ ಸ್ಟೋರಿ. ಕಲಬುರಗಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ತಾವು ಸಾಕಿದ ಹಸುವಿನ ಕರುವಿಗೆ ತೊಟ್ಟಿಲು ಶಾಸ್ತ್ರಮಾಡುವ ಮೂಲಕ  ಗೋ ಪ್ರೇಮ ಮೆರೆದಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್‌ ಠಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಶೋಧ ಕಟಕೆ ಅವರು ಸಾಕಿರುವ ಹಸು ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿತ್ತು. ತಮ್ಮ ಮನೆಯ ಮಗುವಿನಂತೆ ಕರುವಿಗೆ ರಾಧಾ ಎಂದು ನಾಮಕರಣ ಮಾಡಿದ್ದಾರೆ.

Share Post