BengaluruCinema

ನವೆಂಬರ್‌ನಲ್ಲಿ ಮೋಹಕತಾರೆ ರಮ್ಯಾ ಮದುವೆ?; ಈ ಸುದ್ದಿ ನಿಜವೇ..?

ಬೆಂಗಳೂರು; ಸ್ಯಾಂಡಲ್‌ವುಡ್‌ ಕ್ವೀನ್‌ ಹಾಗೂ ಮಾಜಿ ಸಂಸದೆ ರಮ್ಯಾಗೆ ಈಗ 41 ವರ್ಷ ವಯಸ್ಸು.. ಆದ್ರೆ ಇನ್ನೂ ಮದುವೆಯಾಗಿಲ್ಲ.. ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಇದ್ದೇ ಇದೆ.. ಇದಕ್ಕೆ ಈಗ ಉತ್ತರ ಸಿಕ್ಕಿದೆ.. ರಮ್ಯಾ ಅವರು ಇದೇ ನವೆಂಬರ್‌ನಲ್ಲಿ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ನವೆಂಬರ್‌ನಲ್ಲಿ ರಮ್ಯಾ ಹುಟ್ಟುಹಬ್ಬವಿದ್ದು, ಹುಟ್ಟುಹಬ್ಬದ ದಿನವೇ ರಮ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..
ರಾಜಕೀಯಕ್ಕೆ ಬಂದ ಮೇಲೆ ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ.. ಆದರೂ ಕೂಡಾ ರಮ್ಯಾ ಫ್ಯಾನ್‌ ಫಾಲೋಯಿಂಗ್‌ ಮಾತ್ರ ಕಡಿಮೆಯಾಗಿಲ್ಲ.. ಆದ್ರೆ ಮದುವೆ ವಿಚಾರ ಕೇಳಿದಾಗಲೆಲ್ಲಾ ಏನೋ ಒಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.. ಆದ್ರೆ ಈಗ ರಮ್ಯಾ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಮುಂದಿನ ತಿಂಗಳೇ ನಿಶ್ಚಿತಾರ್ಥವಿದ್ದು, ನವೆಂಬರ್‌ ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ..
ಈ ರೀತಿಯ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.. ಆದ್ರೆ ಇದು ನಿಜವೋ ಸುಳ್ಳೋ ಗೊತ್ತಿಲ್ಲ.. ಯಾಕಂದ್ರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.. ರಮ್ಯಾ ಕೂಡಾ ಈ ಬಗ್ಗೆ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.. ಖಾಸಗಿ ಮಾಧ್ಯಮವೊಂದು ಸಂಪರ್ಕ ಮಾಡಿದಾಗ ರಮ್ಯಾ ಅವರು ಇದೊಂದು ರೂಮರ್‌ ಎಂದೇ ಹೇಳಿದ್ದಾರೆ..

Share Post