CrimeNational

ಬೆಡ್‌ರೂಮ್‌ನಲ್ಲಿ ಮೈದುನನ ಖಾಸಗಿ ಅಂಗ ಕತ್ತರಿಸಿ ಎಸೆದ ಅತ್ತಿಗೆ!

ನವದೆಹಲಿ; ಅತ್ತಿಗೆಯೊಬ್ಬಳು ತನ್ನ ಮೈದುನನನ್ನು ಪ್ರೀತಿಯಿಂದ ರಾತ್ರಿ ಮನೆಗೆ ಬರುವಂತೆ ಕರೆದಿದ್ದಾಳೆ.. ರಾತ್ರಿ ಮೈದುನ ಬರುತ್ತಿದ್ದಂತೆ ಆತನಿಗೆ ಉಪಚರಿಸಿ ತನ್ನ ಬೆಡ್‌ರೂಮ್‌ಗೆ ಕರೆದುಕೊಂಡು ಹೋಗಿದ್ದಾಳೆ.. ಆತ ಅದೇನು ಆಸೆಯಿಂದ ಹೋಗಿದ್ದನೋ ಏನೋ ಆದ್ರೆ ಅಲ್ಲಿ ಆಗಿದ್ದೇ ಬೇರೆ.. ಮೈಮಾಟ ಪ್ರದರ್ಶಿಸಿ ಮನೆಗೆ ಕರೆಸಿಕೊಂಡಿದ್ದ ಅತ್ತಿಗೆ, ತನ್ನ ಮೈದುನನ್ನು ಬೆಡ್‌ರೂಮ್‌ವರೆಗೂ ಕರೆದುಕೊಂಡು ಹೋಗಿ ಅಲ್ಲಿ ಮಾಡಬಾರದ ಕೆಲಸ ಮಾಡಿದ್ದಾಳೆ.. ಮೈದುನನ ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದ್ದಾಳೆ.. ಮಧ್ಯಪ್ರದೇಶದ ಸಿಂಧಿ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ವನಂಚಲ್‌ ಕುಸ್ಮಿಯಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕ ಅತ್ಯಾಚಾರ!

ಭಾಬಿ ಎಂಬಾಕೆಯೇ ಈ ಕೃತ್ಯ ಎಸಗಿರುವಾಕೆ.. ತೀವ್ರವಾಗಿ ರಕ್ತಸ್ರಾವವಾಗಿ ನಿತ್ರಾಣನಾಗಿರುವ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಆತ ನೀಡಿದ ದೂರಿನ ಮೇರೆಗೆ ಆರೋಪಿ ಅತ್ತಿಗೆ ಭಾಬಿಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.. ಯುವಕನ ಅತ್ತಿಗೆ ಭಾಬಿ ಹಾಗೂ ಯುವಕ ನಡುವೆ ಜಮೀನು ವಿವಾದವಿತ್ತು.. ಆಸ್ತಿ ಹಂಚಿಕೆ ವಿಚಾರದಲ್ಲಿ ಮನಸ್ತಾಪವೇರ್ಪಟ್ಟಿತ್ತು.. ಈ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸಿಎಂ ಸಿದ್ದರಾಮಯ್ಯ ಪರವಾಗಿ ಬರುತ್ತಾ ತೀರ್ಪು..?

Share Post