BengaluruCrime

ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ ವಿಚಾರ; ಏಳು ಅಧಿಕಾರಿಗಳು ಸಸ್ಪೆಂಡ್‌

ಬೆಂಗಳೂರು; ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರೌಡಿ ಶೀಟರ್‌ಗಳ ಜೊತೆ ಆರಾಮಾಗಿ ಕಾಫಿ ಕುಡಿಯುತ್ತಾ, ಸಿಗರೇಟ್‌ ಸೇದುತ್ತಾ ಇರುವ ಫೋಟೋ ವೈರಲ್‌ ಆಗಿದೆ.. ಇದರ ಜೊತೆಗೆ ರೌಡಿ ಶೀಟರ್‌ ಒಬ್ಬನ ಸಹೋದರನ ಜೊತೆ ವಿಡಿಯೋ ಕಾಲ್‌ನಲ್ಲಿ ದರ್ಶನ್‌ ಮಾತನಾಡಿರುವ ವಿಡಿಯೋ ಕೂಡಾ ಈಗ ವೈರಲ್‌ ಆಗಿದೆ.. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.. ಈ ಸಂಬಂಧ ಜೈಲಿನ ಏಳು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ..

ಇದನ್ನೂ ಓದಿ; ಆಗಸ್ಟ್‌ 29ರತ್ತ ಎಲ್ಲರ ಚಿತ್ತ!; ಏನಾಗುತ್ತೆ ಮುಡಾ ಕೇಸ್‌..?

ಶರಣಬಸವ ಅಮೀನ್​​ಗಢ, ಖಂಡೇವಾಲ್, ಪುಟ್ಟಸ್ವಾಮಿ, ಶ್ರೀಕಾಂತ್​ ತಲವಾರ್​, ವೆಂಕಪ್ಪ, ಸಂಪತ್, ವಾರ್ಡರ್​​​ ಬಸಪ್ಪ ಅಮಾನತಾದವರು. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಘಟನೆ ಬಗ್ಗೆ ನಾನು ವರದಿ ಕೇಳಿದ್ದೇನೆ.. ಈಗಾಗಲೇ ಏಳು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ದೇವೆ.. ಇಂತಹ ಸನ್ನಿವೇಶಗಳು ಮುಂದುವರೆದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್‌ ಹೇಳಿದ್ದಾರೆ..

ಇದನ್ನೂ ಓದಿ; ಮಗಳೇ ಎನ್ನುತ್ತಲೇ ಕಿರುಕುಳ ಕೊಟ್ಟರು!; ಹಿರಿಯ ನಟನ ವಿರುದ್ಧ ಆರೋಪ!

ಮೇಲಧಿಕಾರಿಗಳನ್ನು ಜೈಲಿನಿಂದ ಬೇರೆ ಕಡೆಗೆ ಟ್ರಾನ್ಸ್‌ಫರ್‌ ಮಾಡುತ್ತೇವೆ.. ಸಿಸಿಟಿವಿಗಳನ್ನು ಹೆಚ್ಚಿಸಲಾಗುತ್ತಿದ್ದು, ಜಾಮರ್‌ ಕೂಡಾ ಹಾಕಲಾಗುತ್ತಿದೆ. ಹೀಗಿದ್ದರೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share Post