BengaluruPolitics

ಮುಖ್ಯಮಂತ್ರಿಗಳ ಮನೆಯಿಂದಲೇ ನನಗೆ ಮಾಹಿತಿ ರವಾನೆಯಾಗುತ್ತೆ; ಕುಮಾರಸ್ವಾಮಿ

ಬೆಂಗಳೂರು; ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.. ಈ ಹಿನ್ನೆಲೆಯಲ್ಲಿ ಇಂದು ಕುಮಾರಸ್ವಾಮಿಯವರು ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.. ನನಗೆ ಮುಖ್ಯಮಂತ್ರಿಗಳ ಮನೆಯಿಂದಲೇ ಮಾಹಿತಿ ರವಾನೆಯಾಗುತ್ತೆ ಎನ್ನುವ ಮೂಲಕ ಹೊಸ ಬಾಂಬ್‌ ಸಿಡಿಸಿದರು..

ಇದನ್ನೂ ಓದಿ; ಸಿಎಂ ಪತ್ನಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದರಾ..?

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನೀವೊಬ್ಬರೇ ಅಲ್ಲ ಕಾನೂನು ತಜ್ಞರು. ಎಸ್​ಐಟಿ ಅಧಿಕಾರಿಗಳ ಬಳಿ ಪ್ರಕರಣದ ದಾಖಲೆಗಳು ಇದೆಯೋ ಇಲ್ವೋ ಗೊತ್ತಿಲ್ಲ. ನಾನು ಸಾಯಿ ವೆಂಕಟೇಶ್ವರ ಪ್ರಕರಣದ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.. ನಾನು ಮನಸ್ಸು ಮಾಡಿದ್ದರೆ ನಾನು ಸಿಎಂ ಆಗಿದ್ದಾಗಲೇ ಕೇಸ್‌ ಮುಚ್ಚಿ ಹಾಕಬಹುದಿತ್ತು.. ಆದ್ರೆ ನಾನು ಹಾಗೆ ಮಾಡಲಿಲ್ಲ.. ಕಾಂಗ್ರೆಸ್‌ ನನ್ನ ವಿರುದ್ಧ ಪಿತೂರಿ ಮಾಡಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ; ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!

ಸಿದ್ದರಾಮಯ್ಯ ಅವರು ನಾನು ತೆರೆದ ಪುಸ್ತಕ ಎಂದು ಹೇಳಿಕೊಳ್ಳುತ್ತಾರೆ.. ಒಂದೇ ಒಂದು ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುತ್ತಾರೆ.. ಆದ್ರೆ ಲೋಕಾಯುಕ್ತದಲ್ಲಿ ಅವರ ವಿರುದ್ಧ 61 ಕೇಸ್‌ಗಳು ಇವೆಯಂತೆ.. ಇದರಲ್ಲಿ 50 ಕೇಸ್‌ಗಳು ತನಿಖೆಯಾಗದೇ ಹಾಗೆಯೇ ಉಳಿದಿವೆ. ಅವರು ಸರಿಯಿದ್ದಿದ್ದರೆ ವಿರೋಧ ಪಕ್ಷದವರು ಏನು ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ..

Share Post