BengaluruCrime

ಜಪ್ತಿ ಮಾಡಿದ್ದ 72 ಲಕ್ಷ ರೂ. ದುರ್ಬಳಕೆಮಾಡಿಕೊಂಡ ಪೊಲೀಸಪ್ಪ!

ಬೆಂಗಳೂರು; ಕಳ್ಳತನ ಪ್ರಕರಣದಲ್ಲಿ 72 ಲಕ್ಷ ರೂಪಾಯಿ ಹಣವನ್ನು ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ದುರ್ಬಳಕೆ ಮಾಡಿಕೊಂಡಿದ್ದು, ಯಾರ ಕೈಗೂ ಸಿಗದೇ ನಾಪತ್ತೆಯಾಗಿದ್ದಾರೆ.. ಸಿಸಿಬಿ ಪೊಲೀಸರು ನಾಪತ್ತೆಯಾಗಿರುವ ಇನ್ಸ್‌ಪೆಕ್ಟರ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.. ಬಿಡದಿ ಠಾಣೆಯ ಇನ್ಸ್‌ಪೆಕ್ಟರ್‌ ಶಂಕರ್‌ ನಾಯ್ಕ್‌ ಎಂಬುವವರೇ ಬಂಧನ ಭೀತಿಯಿಂದ ತಲೆಮರೆಸಿಕೊಂಡವರು.
ಇನ್ಸ್‌ಪೆಕ್ಟರ್‌ ಶಂಕರ್‌ ನಾಯ್ಕ್‌ ಅವರು ಹತ್ತು ದಿನಗಳಿಂದ ನಾಪತ್ತೆಯಾಗಿದ್ದು, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಕಳೆದ ವರ್ಷ ಕಳ್ಳತನ ಪ್ರಕರಣವೊಂದರಲ್ಲಿ ಇನ್ಸ್‌ಪೆಕ್ಟರ್‌ ಶಂಕರ್‌ ನಾಯ್ಕ್‌ ಅವರು ಸುಮಾರು 72 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದ್ದರು. ಆದ್ರೆ ಆ ಹಣವನ್ನು ಸರ್ಕಾರದ ಖಜಾನೆಗಾಗಲೀ, ಠಾಣೆಯ ಸುಪರ್ದಿಗಾಗಲೀ ನೀಡಿರಲಿಲ್ಲ.. ಅದನ್ನು ಸ್ವಂತ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ..
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ 2023ರ ನವೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು.. ಶಂಕರ್‌ ಹಾಗೂ ಮಧ್ಯವರ್ತಿ ಲೋಕನಾಥ್‌ ವಿರುದ್ಧ ಕೇಸ್‌ ದಾಖಲಾಗಿತ್ತು.. ಆದ್ರೆ ಪ್ರಕರಣ ರದ್ದು ಕೋರಿ ಶಂಕರ್‌ ನಾಯ್ಕ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿ, ಪ್ರಕರಣದ ವಿಚಾರಣೆಗೆ ತಡೆ ತಂದಿದ್ದರು.. ಆದ್ರೆ ಇತ್ತೀಚೆಗೆ ತಡೆಯಾಜ್ಞೆ ತೆರವು ಮಾಡಲಾಗಿದೆ.. ಈಗ ಸಿಸಿಬಿಯವರು ಶಂಕರ್‌ ನಾಯ್ಕ್‌ರನ್ನು ಬಂಧಿಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಶಂಕರ್‌ ನಾಯ್ಕ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

Share Post