ಪ್ರಾಸಿಕ್ಯೂಷನ್ ವಿಚಾರ; ಪ್ರತಿಭಟನೆಗಳಿಂದ ಕಳಂಕ ದೂರವಾಗುತ್ತಾ..?
ಬೆಂಗಳೂರು; ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.. ಆದ್ರೆ, ನಾನು ಯಾವುದೇ ತಪ್ಪು ಮಾಡಿಲ್ಲ.. ಆದರೂ ರಾಜ್ಯಪಾಲರು ರಾಜಕೀಯ ಒತ್ತಡಕ್ಕೆ ಮಣಿದು ಈ ಆದೇಶ ಹೊರಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.. ಇನ್ನು ರಾಜ್ಯಪಾಲರ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವ ಅವಕಾಶವೂ ಅವರಿಗಿದೆ.. ಇದಕ್ಕಾಗಿ ಸಿದ್ಧತೆಯೂ ನಡೆದಿದೆ.. ಇದರ ನಡುವೆ ರಾಜ್ಯಾದ್ಯಂತ ಹೋರಾಟಕ್ಕೂ ಕಾಂಗ್ರೆಸ್ ಸಿದ್ಧವಾಗುತ್ತಿದೆ.. ಆದ್ರೆ ಹೋರಾಟ ಮಾಡುವುದರಿಂದ ಕಳಂಕದಿಂದ ಹೊರಬರೋದಕ್ಕೆ ಸಾಧ್ಯವೇ ಅನ್ನೋ ಪ್ರಶ್ನೆ ಮೂಡಿದೆ..
ಇದನ್ನೂ ಓದಿ; ಇದು ಷಡ್ಯಂತ್ರ, ಯಾವ ಕಾರಣಕ್ಕೂ ರಾಜೀನಾಮೆ ಕೊಡಲ್ಲ; ಸಿದ್ದರಾಮಯ್ಯ
ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿದ್ದರು.. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಸಭೆಗಳನ್ನು ನಡೆಸಿತ್ತು.. ಒಂದು ಕಡೆ ಬಿಜೆಪಿಯವರು ಸಿದ್ದರಾಮಯ್ಯ ಅವರು ಸೈಟು ಹಂಚಿಕೆ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್ ನವರು ಸಿದ್ದರಾಮಯ್ಯ ಅವರದ್ದು ಯಾವ ತಪ್ಪೂ ಇಲ್ಲ.. ಮುಡಾದವರು ಸಿದ್ದರಾಮಯ್ಯ ಅವರ ಪತ್ನಿಯ ಜಮೀನನ್ನು ವಶಪಡಿಸಿಕೊಂಡಿದ್ದರು.. ಅದಕ್ಕೆ ಪರಿಹಾರವಾಗಿ 14 ಸೈಟು ನೀಡಿದ್ದಾರೆ.. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುತ್ತಾ ಬಂದಿದ್ದಾರೆ.. ಬಿಜೆಪಿ ಪಾದಯಾತ್ರೆಯಿಂದಾಗಲೀ, ಕಾಂಗ್ರೆಸ್ ಸಭೆಗಳಿಂದಾಗಲೂ ಸಮಸ್ಯೆಗೆ ಪರಿಹಾರ ಸಿಗೋದಿಲ್ಲ… ತನಿಖೆಯಿಂದಷ್ಟೇ ಪರಿಹಾರ ಸಿಗೋದು.. ಇನ್ನು ಸದ್ಯದಲ್ಲಿ ಯಾವುದೇ ಚುನಾವಣೆಗಳೂ ಇಲ್ಲದಿರುವುದರಿಂದ ಈ ಹೋರಾಟಗಳಿಂದ ಯಾವ ಪಕ್ಷಕ್ಕೂ ಲಾಭವೇನೂ ಆಗುವುದಿಲ್ಲ.. ಆದರೂ ಅದ್ಯಾಕೆ ಈ ಹೋರಾಟದ ಹಾದಿ ಹಿಡಿಯುತ್ತಿದ್ದಾರೂ ಅರ್ಥವಾಗುತ್ತಿಲ್ಲ..
ಇದನ್ನೂ ಓದಿ; ಮುಡಾ ಹಗರಣ; ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದೇನು..?
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದಾಗಿ ಕಾಂಗ್ರೆಸ್ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಮುಂದಾಗಿದೆ.. ಈ ಪ್ರತಿಭಟನೆಯ ಉದ್ದೇಶ, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಅನ್ನೋದನ್ನು ಜನತೆಗೆ ಮನವರಿಕೆ ಮಾಡಿಕೊಡೋದು.. ಆದ್ರೆ ಇಲ್ಲಿ ಪ್ರಶ್ನೆ ಏನು ಅಂದ್ರೆ, ಸಿದ್ದರಾಮಯ್ಯ ಪರವಾದ ವಾದ ಕೇಳಿದಾಗ ಅವರ ವಾದ ಸರಿ ಇದೆ ಎನಿಸುತ್ತದೆ.. ಬಿಜೆಪಿಯವರ ವಾದ ಕೇಳಿದರೆ ಅದೂ ಸರಿ ಇದೆ ಎನಿಸುತ್ತದೆ.. ಕೊನೆಗೆ ವಿಚಾರಣೆಯ ನಂತರವೇ ನಿಜ ಏನು ಅನ್ನೋದು ಗೊತ್ತಾಗೋದು.. ಹೀಗಾಗಿ ಕಾನೂನಿನ ಮೂಲಕವೇ ಇದಕ್ಕೆ ಉತ್ತರ ದೊರಕಬೇಕು.. ಹೋರಾಟದಿಂದ ಯಾವ ಪ್ರಯೋಜನವೂ ಆಗಲಾರದು..
ಇದನ್ನೂ ಓದಿ; ಮುಡಾ ಪ್ರಕರಣ; ಸಿಎಂ ವಿರುದ್ಧ ತನಿಖೆ ಹೇಗೆ ನಡೆಯುತ್ತೆ..?
ಇನ್ನು ಜನರು ಮುಂದೆ ನನ್ನ ತಪ್ಪಿಲ್ಲ ಎಂದು ಎಷ್ಟು ಹೇಳಿದರೂ ಯಾರೂ ಕೂಡಾ ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳೋದಿಲ್ಲ.. ಯಾಕಂದ್ರೆ, ಬಹುತೇಕ ಜನರಿಗೆ ರಾಜಕಾರಣಿಗಳೆಂದರೆ ನಿರ್ಲಕ್ಷ್ಯ ಭಾವನೆ ಇದೆ.. ಎಲ್ಲಾ ರಾಜಕಾರಣಿಗಳೂ ಒಂದೇ, ಯಾರೇನೂ ಕಡಿಮೆ ಇಲ್ಲ ಅನ್ನೋ ಅಭಿಪ್ರಾಯ ಈಗ ಸಾರ್ವತ್ರಿಕವಾಗಿದೆ.. ಹೀಗಾಗಿ ರಾಜಕಾರಣಿ ನಿಜವಾಗಿಯೂ ಪ್ರಾಮಾಣಿಕನಾಗಿದ್ದರೂ ಬಹುತೇಕ ಜನ ಅದನ್ನು ಒಪ್ಪೋ ಸ್ಥಿತಿಯಲ್ಲಿ ಇಲ್ಲ.. ಹೀಗಾಗಿ ಪ್ರತಿಭಟನೆ ವ್ಯರ್ಥ.. ಇದರಿಂದ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆಯಾಗುತ್ತದೆಯೋ ಹೊರತು ಯಾವ ಪ್ರಯೋಜನವೂ ಆಗೋದಿಲ್ಲ.. ಕಾನೂನು ಪ್ರಕಾರವೇ ಪರಿಹಾರ ಕಂಡುಕೊಳ್ಳೋದು ಒಳ್ಳೆಯದು..
ಇದನ್ನೂ ಓದಿ; ಮದುವೆ 2 ದಿನ ಇದ್ದಾಗ ವರ ಆತ್ಮಹತ್ಯೆ!; ಕಾರಣವೇ ವಿಚಿತ್ರ!