ಇದು ಷಡ್ಯಂತ್ರ, ಯಾವ ಕಾರಣಕ್ಕೂ ರಾಜೀನಾಮೆ ಕೊಡಲ್ಲ; ಸಿದ್ದರಾಮಯ್ಯ
ಬೆಂಗಳೂರು; ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸಿವೆ.. ರಾಜಭವನವನ್ನು ಅವರು ರಾಜಕೀಯ ದಾಳವನ್ನಾಗಿ ಬಳಸಿಕೊಂಡಿದ್ದಾರೆ.. ಆದ್ರೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ರಾಜೀನಾಮೆ ನೀಡೋದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಖಂಡತುಂಡವಾಗಿ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಸರ್ಕಾರಿ ನೌಕರರ ಕಾರ್ಯಕ್ರಮ ಮುಗಿದ ಮೇಲೆ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಟ್ಟರು. ಶಾಸಕರು, ಸಚಿವರು ಹಾಗೂ ಪಕ್ಷ ನನ್ನ ಪರವಾಗಿ ನಿಂತಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ರಾಜೀನಾಮೆಯ ಪ್ರಶ್ನೆಯೇ ಬರೋದಿಲ್ಲ ಎಂದು ಅವರು ಹೇಳಿದರು..
ಇದನ್ನೂ ಓದಿ; ಮುಡಾ ಹಗರಣ; ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದೇನು..?
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಮೊದಲ ರಿಯಾಕ್ಷನ್ ಇದು.. ರಾಜ್ಯಪಾಲ ಥಾವರ್ ಚಂದ್ ಅವರಿಂದ ಇಂತಹ ನಡೆಯನ್ನು ನಾನು ನಿರೀಕ್ಷೆ ಮಾಡಿಯೇ ಇರಲಿಲ್ಲ. ಆದ್ರೆ ನನಗೆ ಯಾವಾಗ ಶೋಕಾಸ್ ನೋಟಿಸ್ ಕೊಟ್ಟರೆ ಆಗ ಇದನ್ನು ನಿರೀಕ್ಷೆ ಮಾಡಿದ್ದೆ. ನಿರಾಣಿ, ಜನಾರ್ದನರೆಡ್ಡಿ, ಹೆಚ್‌ಡಿಕೆ ವಿರುದ್ಧದ ಪ್ರಕರಣಗಳು ಬಾಕಿ ಇವೆ. ಅವರನ್ನು ಬಿಟ್ಟು ನನ್ನ ಕೇಸ್ ಒಂದನ್ನು ಮಾತ್ರ ಕೊಟ್ಟಿದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಇದನ್ನೂ ಓದಿ; ಮುಡಾ ಪ್ರಕರಣ; ಸಿಎಂ ವಿರುದ್ಧ ತನಿಖೆ ಹೇಗೆ ನಡೆಯುತ್ತೆ..?
ಬಿಜೆಪಿಯಿಂದ ಅನೇಕ ರಾಜ್ಯಗಳಲ್ಲಿ ಸರ್ಕಾರ ತೆಗೆಯುವ ಪ್ರಯತ್ನಗಳು ನಡೆದಿವೆ.. ಕರ್ನಾಟಕದಲ್ಲೂ ಅದೇ ಪ್ರಯತ್ನ ಮಾಡುತ್ತಿದ್ದಾರೆ.. ಸಂವಿಧಾನ ಬಾಹಿರವಾಗಿ ಷಡ್ಯಂತ್ರ ನಡೆಯುತ್ತಿದೆ.. ಹೀಗಾಗಿ ರಾಜ್ಯಪಾಲರ ನಿರ್ಧಾರವನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇವೆ. ನಾನು ರಾಜೀನಾಮೆ ಕೊಡುವಂತಹ ಯಾವ ತಪ್ಪೂ ಮಾಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ; ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟರೆ ಮುಂದಿನ ಸಿಎಂ ಯಾರು..?