CrimePolitics

ಕಾಂಗ್ರೆಸ್‌ ಅರ್ಜಿಗೂ ಮೊದಲೇ ಕೇವಿಯಟ್‌ ಸಲ್ಲಿಕೆ; ಸಿದ್ದರಾಮಯ್ಯಗೆ ಸಂಕಷ್ಟ ಫಿಕ್ಸ್‌?

ಬೆಂಗಳೂರು; ಸಿಎಂ ಸಿದ್ದರಾಮಯ್ಯಗೆ ಕಾನೂನು ಸಂಕಷ್ಟ ಎದುರಾಗೋದು ಬಹುತೇಕ ಫಿಕ್ಸ್‌ ಆಗಿದೆ.. ಒಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಇತರ ಸಚಿವರು ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿದ್ದರು.. ಆದ್ರೆ ರಾಜ್ಯಪಾಲರು ಇದಕ್ಕೆ ಅನುಮತಿ ಕೊಟ್ಟಿಲ್ಲ.. ಇತ್ತು ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್‌ಗೆ ಹೋಗಲು ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಸಿದ್ಧತೆ ನಡೆಸಲಾಗುತ್ತಿದೆ.. ಹೀಗಿರುವಾಗಲೇ ಇದರ ವಿರುದ್ಧ ಕೇವಿಯಟ್‌ ಸಲ್ಲಿಕೆ ಮಾಡಲಾಗಿದೆ..

ಇದನ್ನೂ ಓದಿ; ಮುಡಾ ಹಗರಣ; ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದ್ದೇನು..?

ಪ್ರಾಸಿಕ್ಯೂಷನ್‌ನಿಂದ ಬಚಾವಾಗಬೇಕಾದರೆ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ತರಬೇಕಾಗುತ್ತದೆ.. ಇದಕ್ಕಾಗಿ ಈಗಾಗಲೇ ಕಾಂಗ್ರೆಸ್‌ನ ಲೀಗಲ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ.. ಸೋಮವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ.. ಆದ್ರೆ ಈ ರಿಟ್‌ ಅರ್ಜಿಗೂ ಮೊದಲೇ ದೂರುದಾರ ಪ್ರದೀಪ್‌ ಕುಮಾರ್‌ ಅವರು ಹೈಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ರಿಟ್‌ ಅರ್ಜಿ ಸಲ್ಲಿಸಿದರೆ ನಮ್ಮ ವಾದವನ್ನು ಕೂಡಾ ಕೇಳಬೇಕು. ನಮ್ಮ ವಾದ ಆಲಿಸಿದ ನಂತರ ಆ ಅರ್ಜಿಯ ಮೇಲೆ ತೀರ್ಪು ಕೊಡಬೇಕು ಎಂದು ಕೇವಿಯೆಟ್‌ ಹಾಕಲಾಗಿದೆ..

ಇದನ್ನೂ ಓದಿ; ಮುಡಾ ಪ್ರಕರಣ; ಸಿಎಂ ವಿರುದ್ಧ ತನಿಖೆ ಹೇಗೆ ನಡೆಯುತ್ತೆ..?

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಹಾಕಿದರೂ ಬೇಗ ಮಧ್ಯಂತರ ತಡೆಯಾಜ್ಞೆ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.. ಒಂದು ವೇಳೆ ಹೈಕೋರ್ಟ್‌ ಆದೇಶ ತಡವಾದರೆ ಆಗಸ್ಟ್‌ 20ಕ್ಕೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಕೇಸ್‌ ವಿಚಾರಣೆಗೆ ಬರುತ್ತದೆ.. ಈಗಾಗಲೇ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಜನಪ್ರತಿನಿಧಿಗಳ ನ್ಯಾಯಾಲಯ ಇದನ್ನು ಪರಿಗಣಿಸಿ ಸಿಎಂ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದರೆ ಸಿದ್ದರಾಮಯ್ಯ ಕಾನೂನು ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ..

ಇದನ್ನೂ ಓದಿ; ಮುಡಾ ಹಗರಣ; ನಾಯಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದ್ದೇನು..?

Share Post