BusinessEconomyPolitics

Central Budget-2024; 1 ಕೋಟಿ ನಿರುದ್ಯೋಗಿಗಳಿಗೆ ಇಂಟರ್ನ್‌ಶಿಪ್‌ಗೆ ಅವಕಾಶ

ನವದೆಹಲಿ; ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.. ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.. ಇದ್ರಲ್ಲಿ, ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ಸಲುವಾಗಿ ಹಲವು ಯೋಜನೆಗಳ ಪ್ರಸ್ತಾಪ ಮಾಡಿದ್ದಾರೆ.. ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಟಾಪ್‌ 500 ಕಂಪನಿಗಳಲ್ಲಿ 1 ಕೋಟಿ ನಿರುದ್ಯೋಗಿ ವಿದ್ಯಾವಂತವರಿಗೆ ಇಂಟರ್ನ್‌ಶಿಪ್‌ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ..
ಸುಮಾರು 1 ವರ್ಷದ ಕಾಲ ಇಂಟರ್ನ್‌ಶಿಪ್‌ ವ್ಯವಸ್ಥೆ ಮಾಡಲಾಗುತ್ತದೆ.. ಈ ವೇಳೆ ಮಾಸಿನ 5 ಸಾವಿರ ರೂಪಾಯಿ ಸಹಯಾಧನ ನೀಡಲಾಗುತ್ತದೆ.. ಇದರ ಜೊತೆಗೆ ನಿರುದ್ಯೋಗಿ ಯುವಕರಿಗೆ 5 ರಿಂದ 6 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತದೆ.. ಇದರ ಜೊತೆ ಹೊಸ ವ್ಯಾಪಾರ ಆರಂಭಿಸುವವರಿಗೆ ಮುದ್ರಾ ಯೋಜನೆಯ ಸಾಲ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ..

Share Post