CrimeDistrictsHealth

ಕಾರವಾರದ ಬಳಿ ಭಾರಿ ದುರಂತ; ಗುಡ್ಡ ಕುಸಿದು 9 ಮಂದಿ ನಾಪತ್ತೆ!

ಕಾರವಾರ; ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ದುರಂತ ಸಂಭವಿಸಿದೆ.. ಭಾರೀ ಮಣ್ಣಿನ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದುಬಿದ್ದಿದ್ದು, 9 ಮಂದಿ ಮಣ್ಣಿನಡಿ ಸಿಲುಕಿರುವುದಾಗಿ ಶಂಕಿಸಲಾಗಿದೆ.. ಇದರಲ್ಲಿ ಒಂದೇ ಕುಟುಂಬದ ಐದು ಮಂದಿ ಇದ್ದಾರೆ ಎಂದು ಹೇಳಲಾಗಿದೆ.. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ..

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಟ್ಯಾಂಕರ್‌ ಒಂದನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಚಾಲಕ ಹಾಗೂ ಕ್ಲೀನರ್‌ ಟೀ ಕುಡಿಯುತ್ತಿದ್ದರು. ಇದೇ ಸಮಯದಲ್ಲಿ ದೊಡ್ಡ ಗುಡ್ಡವೊಂದು ಕುಸಿದುಬಿದ್ದಿದ್ದು, ಇದರಿಂದಾಗಿ ಆ ಗ್ಯಾಸ್‌ ಟ್ಯಾಂಕರ್‌ ಪಕ್ಕದ ಹೊಳೆಗೆ ಬಿದ್ದಿದೆ ಎಂದು ತಿಳಿದುಬಂದಿದೆ.. ಇನ್ನು ಗ್ಯಾಸ್‌ ಟ್ಯಾಂಕರ್‌ ಚಾಲಕ ಹಾಗೂ ಕ್ಲೀನರ್‌ ಕೂಡಾ ಮಣ್ಣಿನಡಿ ಸಿಲುಕಿದ್ದಾರೆ. ಇದರ ಜೊತೆಗೆ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಷನ್​, ಆವಂತಿಕಾ, ಜಗನ್ನಾಥ ಎಂಬ ಒಂದೇ ಕುಟುಂಬದ ಐದು ಮಂದಿ ಕೂಡಾ ಮಣ್ಣಿನಡಿ ಸಿಲುಕಿದ್ದಾರೆ.

ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್‌ ಡೆಲಿವರಿ ಬಾಯ್‌ ಮನೆಯಲ್ಲಿ ಅನುಮಾನಾಸ್ಪದ ಸಾವು!

ಇವರ ಜೊತೆಗೆ ಇನ್ನೂ ಇಬ್ಬರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ.. ಎಲ್ಲರೂ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.. ಗುಡ್ಡ ಕುಸಿತದಿಂದ ವಾಹನ ಸಂಚಾರ ಕೂಡಾ ಅಸ್ತವ್ಯಸ್ತವಾಗಿದೆ..

Share Post