ಅಂಬಾನಿ ಮಗನ ಮದುವೆ ಜಗತ್ತಿನ ಅತ್ಯಂತ ಕಂಜೂಸ್ ಮದುವೆಯಂತೆ ಹೌದಾ..?
ಬೆಂಗಳೂರು; ನಿನ್ನೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯವರ ಮದುವೆ ಅದ್ದೂರಿಯಾಗಿ ನಡೆಯಿತು.. ಸುಮಾರು ಒಂದು ತಿಂಗಳಿಂದ ಮದುವೆ ಕಾರ್ಯಕ್ರಮಗಳು ನಡೆದಿದ್ದವು.. ಇದಕ್ಕಾಗಿ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಮಾತುಗಳು ಕೇಳಿಬರುತ್ತಿವೆ.. ಇದನ್ನು ಕೇಳಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.. ಆದ್ರೆ, ಕೆಲವರು ಮಾತ್ರ ಇದು ಜಗತ್ತಿನ ಅತ್ಯಂತ ಕಂಜೂಸ್ ಮದುವೆ ಎಂದು ಕರೆಯುತ್ತಿದ್ದಾರೆ.. ಅದಕ್ಕೆ ಸಮರ್ಥ ವಾದ ಕೂಡಾ ಮಂಡಿಸುತ್ತಿದ್ದಾರೆ..
ಇದನ್ನೂ ಓದಿ; ಅಂಬಾನಿ ಪುತ್ರನ ಮದುವೆಯಲ್ಲಿ ಹೊಸ ಲುಕ್ನಲ್ಲಿ ಕಂಡ ನಟ ಯಶ್
ಸಾಮಾನ್ಯ ವ್ಯಕ್ತಿಗಳ ತಮ್ಮ ಮಕ್ಕಳ ಮದುವೆ ಮಾಡುವುದಕ್ಕೆ ತಮ್ಮ ಆಸ್ತಿಯಲ್ಲಿ ಅರ್ಧಕ್ಕೂ ಹೆಚ್ಚು ಮೌಲ್ಯದಷ್ಟು ಖರ್ಚು ಮಾಡುತ್ತಾರೆ.. ಕೆಲವರಂತೂ ಆಸ್ತಿಗೂ ಮೀರಿ ಮದುವೆಗೆ ಖರ್ಚು ಮಾಡುತ್ತಾರೆ.. ಆದ್ರೆ ಮುಖೇಶ್ ಅಂಬಾನಿ ತಮ್ಮ ಪುತ್ರನ ಮದುವೆಗೆ 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿರುವುದು ನಿಜ.. ಆದ್ರೆ ಅದು ಅವರ ಆಸ್ತಿಯ ಶೇಕಡಾ 1ರಷ್ಟೂ ಅಲ್ಲ.. ಹೀಗಾಗಿ ಇದು ಜಗತ್ತಿನ ಅತ್ಯಂತ ಕಂಜೂಸ್ ಮದುವೆ ಎಂದು ಕೆಲವರು ವಾದ ಮಾಡುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ..
ಇದನ್ನೂ ಓದಿ; ಡೆತ್ ನೋಟ್ ಬರೆದ ತೆಲುಗು ನಟ ರಾಜ್ ತರುಣ್ ಪ್ರೇಯಸಿ!; ಮುಂದೇನಾಯ್ತು..?
ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಪ್ರಚಾರವೇನು..?
ಈ ಕೆಳಗಿನಂತೆ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಬರೆದುಕೊಂಡು ಇದು ಜಗತ್ತಿನ ಅತ್ಯಂತ ಕಂಜೂಸ್ ಮದುವೆ ಎಂದು ಹೇಳಿಕೊಂಡಿದ್ದಾರೆ. ಅದರ ಯಥಾವತ್ ಮಾಹಿತಿ ಇಲ್ಲಿದೆ..
ಅದ್ದೂರಿ, ಆಡಂಬರದ ಮದುವೆಯಲ್ಲ, ಇದು ಜಗತ್ತಿನ ಅತ್ಯಂತ ಕಂಜೂಸ್ ಮದುವೆ!
ಹೌದು, 100 ಏರೋಪ್ಲೇನ್ ಗಳನ್ನ ಬಾಡಿಗೆಗೆ ಪಡೆದು, Justin Bieber ನ ಕರೆಸಿ ಅವನಿಗೆ 83 ಕೋಟಿ ಕೊಟ್ಟು, ಎಲ್ಲೆಡೆ ಕಣ್ಸೆಳೆಯುವ ಮೆಗಾ ಅಲಂಕಾರಗಳನ್ನು ಮಾಡಿಸಿ, ಗೋಲ್ಡ್ ಸೂಟ್ ಧರಿಸಿ, ಸಾವಿರ ಕೋಟಿ ನಿಶ್ಚಿತಾರ್ಥಕ್ಕೇ ಖರ್ಚು ಮಾಡಿದರೂ ಅಂಬಾನಿ ಮಗನಿಗೆ ಮದುವೆ ಮಾಡಲು ಖರ್ಚು ಮಾಡುತ್ತಿರುವುದು ಕೇವಲ 4500 – 5000 ಕೋಟಿ ಎಂದು ಅಂದಾಜಿಸಲಾಗಿದೆ.
ಅಂಬಾನಿಯ ಒಟ್ಟು ಆಸ್ತಿಯೆಷ್ಟು ಗೊತ್ತೇ?
10 ಲಕ್ಷ ಕೋಟಿಗೂ ಅಧಿಕ!! ಮದುವೆಯ ಖರ್ಚು 5 ಸಾವಿರ ಕೋಟಿಯೆಂದು ಪರಿಗಣಿಸಿದರೂ ಇದು ಮುಖೇಶ್ ಅಂಬಾನಿ ಆಸ್ತಿಯ ಕೇವಲ 0.5%.
1% ಕೂಡ ಅಲ್ಲ!!
ಇದನ್ನೇ ಕೆಲವು ಎಡ ಮಿತ್ರರು ಈ ಆಡಂಬರದ ಮದುವೆ ಬಡ ಭಾರತದಲ್ಲಿ ಅವಶ್ಯಕತೆ ಇತ್ತೇ?! ಇಷ್ಟು ಕೋಟಿ ಜನಕ್ಕೆ ಊಟ ಕೊಡಬಹುದಿತ್ತು, ಅಷ್ಟು ಕೋಟಿ ಜನಕ್ಕೆ ಮನೆ ಕಟ್ಟಿಸಬಹುದಿತ್ತು, ಅಂಬಾನಿಯ ಆಡಂಬರ ವಾಕರಿಕೆ ಬರಿಸುತ್ತಿದೆ. ಅದೂ ಇದೂ ಅಂತ ಊಳಿಡುತ್ತಿರುವುದು ನಿಜಕ್ಕೂ ನಗು ಬರುತ್ತಿದೆ!
ಅಂಬಾನಿ ಸ್ಟೇಟಸ್ ಗೆ, ಇನ್ನೂ ಹೆಚ್ಚು ಆಡಂಬರದಿಂದ ಮದುವೆ ಮಾಡಬೇಕಿತ್ತು. ಕನಿಷ್ಟ ಆದಾಯದ 10% ಖರ್ಚು ಮಾಡಿದ್ದರೆ 1 ಲಕ್ಷ ಕೋಟಿಯಾದರೂ ಹಣ ಸಮಾಜದಲ್ಲಿ ಹಂಚಿಕೆಯಾಗುತ್ತಿತ್ತು!
Actually ಅಂಬಾನಿ ಕೆಳ ಹಾಗೂ ಮಧ್ಯಮವರ್ಗದ ಜನರಿಗೆ ಮೆಸೇಜ್ ಕೊಡುತ್ತಿದ್ದಾರೆ. ಭಾರತದಲ್ಲಿ ಬಹಳಷ್ಟು ಜನ ಮದುವೆಗಾಗಿ 30 ವರ್ಷದ ಸೇವಿಂಗ್ಸನ್ನು 3 ದಿನದ ಮದುವೆಗೆ ಖರ್ಚು ಮಾಡಿ, ಸಾಲದ ಹೊರೆಯೂ ಹೊತ್ತುಕೊಳ್ಳುತ್ತಾರೆ. ಇನ್ನಾದರೂ ಆಡಂಬರದ ಮದುವೆಗಳನ್ನು ಬಿಟ್ಟು ಅಂಬಾನಿಯ ತರಹ ಯೋಚಿಸಿ, ನಿಮ್ಮ ಒಟ್ಟು ಆಸ್ತಿಯ ಕೇವಲ 0.5% ಮೊತ್ತವನ್ನು ಬಳಸಿ ಮದುವೆ ಮಾಡಿ!
ಹಾಗಾದರೆ ಅಂಬಾನಿ ಸಮಾಜಮುಖಿ ಕೆಲಸಗಳೇನು ಮಾಡುತ್ತಿಲ್ಲವೇ?
Reliance Foundation, ನೀತಾ ಅಂಬಾನಿಯ NGO ಹಾಗೂ ಇತರ ಸಂಸ್ಥೆಗಳ ಮೂಲಕ ಶೈಕ್ಷಣಿಕ, ಆರೋಗ್ಯ, ವೈಲ್ಡ್ ಲೈಫ್ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ನಮ್ಮ ಊಹೆಗೂ ಮೀರಿದ ಸಾಮಾಜಿಕ ಕೆಲಸಗಳು ನಡೆಯುತ್ತಿವೆ.
ಅಷ್ಟೇಕೆ, ಈಗ ಮದುವೆಯಾಗಿತ್ತಿರುವ ಅನಂತ್ ಅಂಬಾನಿ ಜೋಡಿಗೆ ಎಲ್ಲರ ಆಶೀರ್ವಾದವಿರಬೇಕೆಂದು, ಕೆಲವು ದಿನಗಳ ಹಿಂದೆ ಬಡವರ್ಗದ 50 ಜೋಡಿಗೆ ಅದ್ದೂರಿಯಾಗಿ ಸಾಮೂಹಿಕ ವಿವಾಹ ಮಾಡಿದ್ದಾರೆ. ತಮ್ಮ ಆತ್ಮತೃಪ್ತಿಗಾಗಿ ಅನೇಕ ಸಾಮಾಜಿಕ ಕೆಲಸಗಳನ್ನು ಪ್ರಚಾರ ಮಾಡದೇ ಆ ಕುಟುಂಬ ಮಾಡುತ್ತಿದೆ.
ಕಡೆಯ ಮಾತು, ಭಾರತದಲ್ಲಿರುವ ಬಡತನಕ್ಕೂ ಅಂಬಾನಿ ಫ್ಯಾಮಿಲಿಗೂ ಯಾವ ಸಂಬಂಧ? ಭಾರತದಲ್ಲಿ ಇನ್ನೂ ದಾರಿದ್ರ್ಯ ಕಾಣಿಸುತ್ತಿದೆಯೆಂದರೆ ಕಾರಣ ಆಳಿದ ಸರ್ಕಾರಗಳೇ ಹೊರತು ಅಂಬಾನಿಯಲ್ಲ! ಇನ್ನಾದರೂ ಅಂಬಾನಿಯಿಂದ ಪಾಠ ಕಲಿತು ತೋರ್ಪಡಿಕೆಗಾಗಿ ಅದ್ದೂರಿ ಮದುವೆ ಮಾಡಿ ಹಣ ಪೋಲು ಮಾಡಿಕೊಳ್ಳದೇ, ಈತರಹದ ಕಂಜೂಸ್ ಮದುವೆ ಮಾಡಿ, ಜೀವನದಲ್ಲಿ ಉದ್ಧಾರ ಆಗಿ!!