CrimeDistricts

ಪ್ರೇಯಸಿ ಜೊತೆ ಜಗಳ; ಅರ್ಧದಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!

ಉಡುಪಿ; ಪ್ರೇಯಸಿ ಜೊತೆಗಿನ ಜಗಳದಿಂದ ಬಸ್ ಚಾಲಕನೊಬ್ಬ ಬಸ್ಸನ್ನು ಅರ್ಧದಲ್ಲೇ ನಿಲ್ಲಿಸಿಹೋಗಿದ್ದು, ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.. ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ..

  ಬಸ್ ಚಾಲಕನ ಪ್ರೇಯಸಿ ನಿತ್ತೂರಿನಲ್ಲಿ ಬಸ್ ಹತ್ತಿದ್ದಳು.. ಇದೇ ವೇಳೆ ಪ್ರೇಯಸಿ ಚಾಲಕನೊಂದಿಗೆ ಜಗಳ ಕಾಯುತ್ತಿದ್ದಳು.. ಜಗಳವಡುತ್ತಲೇ ಬಸ್ ಓಡಿಸುತ್ತಿದ್ದ ಚಾಲಕನ ಪಿತ್ತ ನೆತ್ತಿಗೆರಿತ್ತು.. ಇದನ್ನು ತಿಳಿದ ನಿರ್ವಾಹಕ ಜಗಳ ಬಿಡಿಸಲು ಬಂದಿದ್ದಾರೆ.. ಆದರೂ ಪ್ರೇಯಸಿ ಕೇಳಿಲ್ಲ.. ಹೀಗಾಗಿ ಬಸ್ ಚಾಲಕ ಬಸ್ಸನ್ನು ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಪ್ರೇಯಸಿ ಕೂಡಾ ಆತನ ಬೆನ್ನಲ್ಲೇ ಬಸ್ಸಿನಿಂದ ಇಳಿದು ಹೋಗಿದ್ದಾಳೆ. ಬಸ್ಸನ್ನು ಅರ್ಧಲ್ಲೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡಿದ್ದು, ಸ್ವಲ್ಪ ಸಮಯದ ನಂತರ ಕಂಡಕ್ಟರ್ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

Share Post