ಆಸ್ತಿಗಾಗಿ ಠಾಣೆ ಮೆಟ್ಟಿಲೇರಿದ ವಿಜಯ ಸಂಕೇಶರ್ ಪುತ್ರಿ; ಮಾಟ-ಮಂತ್ರದಿಂದ ಸಾವನ್ನಪ್ಪಿದರಾ ದೀಪಾ ಪತಿ..?
ಬೆಳಗಾವಿ; ಆಸ್ತಿ ಲಪಟಾಯಿಸಲು ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.. ಮಾಜಿ ಸಂಸದ ಎಸ್.ಬಿ ಸಿದ್ನಾಳರ ಕಿರಿಯ ಸೊಸೆಯಾಗಿರುವ ದೀಪಾ ಸಿದ್ನಾಳ ಅವರು, ತಮ್ಮ ಅಧೀನದಲ್ಲಿರುವ ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ..
ನನ್ನ ಪತಿ ಶಿವಕಾಂತ ಸಿದ್ನಾಳ ಅವರ ಸಹೋದರ ಶಶಿಕಾಂತ್ ಸಿದ್ನಾಳ ಅವರು ಆಸ್ತಿ ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ದೀಪಾ ಸಿದ್ನಾಳ ಆರೋಪ ಮಾಡಿದ್ದಾರೆ.. ಶಶಿಕಾಂತ್ ಸಿದ್ನಾಳ್, ಪತ್ನಿ ವಾಣಿ, ಪುತ್ರ ದಿಗ್ವಿಜಯ್ ವಿರುದ್ಧ ದೂರು ದಾಖಲಾಗಿದೆ.. ಪೊಲೀಸರು BNS 1860, ಸೆಕ್ಷನ್ 120ಬಿ, 506, 307, ಮಾಟ ಮಂತ್ರ ಕಾಯ್ದೆ 2007 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ..
ಬೆಳಗಾವಿ ಮಾಜಿ ಸಂಸದರಾಗಿರುವ ಎಸ್.ಬಿ.ಸಿದ್ನಾಳರ ಕಿರಿಯ ಮಗನಿಗೆ ವಿಜಯ ಸಂಕೇಶ್ವರ ಅವರ ಮಗಳು ದೀಪಾಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.. 2002ರಲ್ಲಿ ಈ ಮದುವೆ ನಡೆದಿದ್ದು, 2006ರಲ್ಲಿ ವಿಜಯಕಾಂತ್ ಡೇರಿ ಸ್ಥಾಪನೆ, ಆದಿತ್ಯ ಬ್ರಾಂಡ್ ಅಡಿ ಮಾರಾಟ ಮಾಡಲಾಗುತ್ತಿತ್ತು. ದಿನವೂ 1.20 ಲಕ್ಷ ಲೀಟರ್ ಹಾಲು ಇಲ್ಲಿ ಈಗಲೂ ಮಾರಾಟ ಮಾಡಲಾಗುತ್ತದೆ.. ಈ ಡೇರಿಯ ಸಂಸ್ಥಾಪಕರು ದೀಪಾ ಅವರ ಪತಿ ಶಿವಕಾಂತ್ ಸಿದ್ನಾಳ್ ಆಗಿದ್ದರೆ, ವಿಜಯ ಸಂಕೇಶ್ವರ ಅವರು ಚೇರ್ಮನ್ ಆಗಿದ್ದಾರೆ..
ಇತ್ತೀಚೆಗೆ ಶಿವಕಾಂತ್ ಸಿದ್ನಾಳ್ ಅವರು ಮೃತಪಟ್ಟಿದ್ದರು.. ಅದಾದ ಮೇಲೆ ಆಸ್ತಿ ಹೊಡೆಯಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ.. ಜೊತೆಗೆ ಇದಕ್ಕಾಗಿ ಮಾಟ-ಮಂತ್ರ ಮಾಡಲಾಗುತ್ತಿದೆ.. ನನ್ನ ಪತಿಯ ಸಾವಿಗೂ ಮಾಟ-ಮಂತ್ರ ಕಾರಣವಾಗಿದ್ದು, ಪತಿಯ ಸಮಾಧಿ ಸುತ್ತ ಈಗಲೂ ಮಾಟ-ಮಂತ್ರ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ..