CrimeNational

ಹಾಡಹಗಲೇ ಮಹಿಳೆಯ ಕಿಡ್ನ್ಯಾಪ್‌!; ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದೆಲ್ಲಿಗೆ..?

ಮುಂಬೈ; ಹಾಡಹಗಲೇ ಅದೂ ಕೂಡಾ ನಡು ರಸ್ತೆಯಲ್ಲೇ ಮಹಿಳೆಯನ್ನು ಎಳೆದುಕೊಂಡು ಹೋಗಿ, ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿರುವ ಘಟನೆ ನಡೆದಿದೆ.. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.. ಮಹಿಳೆಯ ಪತಿಯೇ ಈ ಕಿಡ್ನ್ಯಾಪ್‌ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ..

ಮಹಿಳೆಯ ಮನೆಯಕಲ್ಲಿ ಕೌಟುಂಬಿಕ ಕಲಹವಿತ್ತು.. ಹೀಗಾಗಿ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆ ಪುಣೆಯಲ್ಲಿ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದಳು.. ಹೀಗಾಗಿ ಕಾರಿನಲ್ಲಿ ಬಂದಿದ್ದ ಗಂಡ, ಬಲವಂತವಾಗಿ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.. ಅನಂತರ ನಿದ್ರೆ ಮಾತ್ರ ಕೊಟ್ಟು, ಆಕೆಯನ್ನು ಕಿಡ್ನ್ಯಾಪ್‌ ಮಾಡಿದ್ದಾನೆ..

ಮಹಿಳೆಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು.. ಆದ್ರೆ ಕೆಲ ದಿನಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳವಾಗಿದೆ.. ಹಿರಿಯರು ಮಧ್ಯಸ್ಥಿಕೆ ವಹಿಸಿದರೂ ಮನಸ್ತಾಪ ಮುಂದುವರೆದಿದೆ.. ಮಹಿಳೆಗೆ ಪೋಷಕರಿಲ್ಲ.. ಹೀಗಾಗಿ ಆಕೆ ಚಿಕ್ಕಪ್ಪನ ಮನೆಗೆ ಬಂದು ನೆಲೆಸಿದ್ದಳು..

Share Post