ಘಾಟ್ ರಸ್ತೆಯಲ್ಲಿ ಪಲ್ಟಿ ಹೊಡೆದ ಸರ್ಕಾರಿ ಬಸ್; ನಾಲ್ವರ ದುರ್ಮರಣ!
ಶಿಮ್ಲಾ; ಸರ್ಕಾರಿ ಬಸ್ಸೊಂದು ಘಾಟ್ ರಸ್ತೆಯಲ್ಲಿ ಪಲ್ಟಿ ಹೊಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಜುಬ್ಬಲ್ ಉಪವಿಭಾಗದಲ್ಲಿ ಈ ದುರ್ಘಟನೆ ನಡೆದಿದೆ.. ಇಂದು ಬೆಳಗ್ಗೆ 6.45ರ ಸುಮಾರಿಗೆ ಈ ದುರ್ಘಟನೆ ನಡೆದಿದೆ..
ಕುದ್ದುವಿನಿಂದ ಜುಬ್ಬಲ್ನ ಗಿಲ್ತಾರಿ ಗ್ರಾಮಕ್ಕೆ ಸರ್ಕಾರಿ ಬಸ್ ತೆರಳುತ್ತಿತ್ತು.. ಈ ವೇಳೆ ಬಸ್ ಚೌರಿಯನ್ ಗ್ರಾಮದ ಬಳಿ ಬಂದಾಗ ಪಲ್ಟಿ ಹೊಡೆದಿದೆ ಎಂದು ತಿಳಿದುಬಂದಿದೆ.. ಬಸ್ ಚಾಲಕ ಕರಮ್ ದಾಸ್, ನಿರ್ವಾಹಕ ರಾಕೇಶ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ನೇಪಾಳ ಮೂಲದ ಬಿರ್ಮಾ ದೇವಿ ಮತ್ತು ಧನ್ ಶಾ ಎಂಬ ಪ್ರಯಾಣಿಕರು ಕೂಡಾ ಇಹಲೋಕ ತ್ಯಜಿಸಿದ್ದಾರೆ..
ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಜಿಯೇಂದರ್ ರಂಗ್ತಾ, ದೀಪಿಕಾ ಠಾಕೂರ್ ಮತ್ತು ಹಸ್ತ್ ಬಹದ್ದೂರ್ ಎಂಬುವವರೇ ಗಾಯಾಳುಗಳು.. ಇವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..