7 ವರ್ಷದ ಬಾಲಕನಿಗೆ ಒಮಿಕ್ರಾನ್ ಸೋಂಕು
ಹೈದರಾಬಾದ್: ಕೋಲ್ಕತ್ತಾ ಮೂಲಕ ಏಳು ವರ್ಷದ ಬಾಲಕನೊಬ್ಬನಿಗೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಏಳು ವರ್ಷದ ಬಾಲಕ ತಮ್ಮ ಪೋಷಕರೊಂದಿಗೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಂದ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದ. ಈ ವೇಳೆ ಪರೀಕ್ಷೆ ನಡೆಸಲಾಗಿತ್ತು. ಅದರ ವರದಿ ಈಗ ಬಂದಿದ್ದು, ಬಾಲಕನಿಗೆ ಒಮಿಕ್ರಾನ್ ಇರುವುದು ಪತ್ತೆಯಾಗಿದೆ.
ಈಗಾಗಲೇ ಬಾಲಕ ಹಾಗೂ ಆತನ ಪೋಷಕರು ಕೋಲ್ಕತ್ತಾಗೆ ಹೋಗಿದ್ದಾರೆ. ಈಗ ಅವರನ್ನು ಪತ್ತೆ ಹಚ್ಚಿ ಕ್ವಾರಂಟೀನ್ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಬಂದಿಳಿದ ಬಾಕಲನ ಫ್ಯಾಮಿಲಿ, ಹೊರಗೆ ಹೋಗಿರಲಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣದಿಂದ ನೇರವಾಗಿ ಕೋಲ್ಕತ್ತಾಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.