ಬೆನ್ನುನೋವಿಗೆ ಇದಕ್ಕಿಂತ ಸುಲಭ ಪರಿಹಾರ ಮತ್ತೊಂದಿಲ್ಲ!
ಎಲ್ಲರ ಜೀವನ ಶೈಲಿ ಬದಲಾಗಿದೆ.. ವರ್ಕ್ ಕಲ್ಚರ್ ಹೆಚ್ಚುತ್ತಿದೆ.. ಇದರಿಂದಾಗಿ ಅನೇಕ ಜನ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.. ಅದೂ ಕೂಡಾ ಗಂಟೆಗಟ್ಟಲೆ ಒಂದೇ ಕಡೆ ಕೂತು ಕೆಲಸ ಮಾಡುವವರು ಈ ಬೆನ್ನುನೋವಿನಿಂದ ಹೆಚ್ಚು ಬಳಲುತ್ತಿದ್ದಾರೆ.. ಹೀಗಾಗಿ ಇವರೆಲ್ಲಾ ವ್ಯಾಯಾಮ ಅಥವಾ ಫಿಸಿಯೋ ಥೆರಪಿ ಮೊರೆಹೋಗುತ್ತಿದ್ದಾರೆ.. ಆದ್ರೆ ಸುಲಭ ಪರಿಹಾರದ ಮೂಲಕ ಬೆನ್ನುನೋವನ್ನು ದೂರ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ..
ಬೆನ್ನುನೋವಿಗೆ ವಾಕಿಂಗ್ ಉತ್ತಮ ಪರಿಹಾರ;
ಬೆನ್ನು ನೋವಿನ ಸಮಸ್ಯೆಗೆ ನಡಿಗೆಯೇ ಉತ್ತಮ ಪರಿಹಾರ ಎನ್ನುತ್ತಾರೆ ತಜ್ಞರು. ಕೆಳ ಬೆನ್ನು ನೋವನ್ನು ಗುಣಪಡಿಸಲು ವಾಕಿಂಗ್ ಮಾಡಬೇಕು.. ಇದೊಂದೇ ಉತ್ತಮ ಮಾರ್ಗ ಎಂದು ತಜ್ಞರು ಹೇಳುತ್ತಿದ್ದಾರೆ.. ಇದನ್ನು ಸುಮ್ಮನೆ ಹೇಳುತ್ತಿಲ್ಲ.. ಅನೇಕ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿ ಹೇಳಿದ್ದಾರೆ.. ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಈ ಕುತೂಹಲಕಾರಿ ವಿಷಯ ಬಹಿರಂಗವಾಗಿದೆ. ಇದಕ್ಕಾಗಿ ಹಲವಾರು ಮಂದಿಯನ್ನು ಆಯ್ಕೆ ಮಾಡಿ, ಅವರ ಬಗ್ಗೆ ಅಧ್ಯಯನ ನಡೆಸಿ ಈ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಈ ವರದಿಯನ್ನು ಪ್ರಸಿದ್ಧ ಆರೋಗ್ಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯ ಭಾಗವಾಗಿ ಒಟ್ಟು 700 ವಯಸ್ಕರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿಗೆ ವಾಕಿಂಗ್ ಮಾಡಲು ಸೂಚಿಸಲಾಯಿತು. ಎರಡನೇ ಗುಂಪಿನವರಿಗೆ ಆರು ತಿಂಗಳ ಕಾಲ ಫಿಸಿಯೋಥೆರಪಿ ಮಾಡಲು ಹೇಳಲಾಗಿತ್ತು. ಮೂರನೇ ಗುಂಪಿಗೆ ಯಾವುದೇ ಚಿಕಿತ್ಸೆ ಅಥವಾ ಸೂಚನೆ ನೀಡಲಾಗಿರಲಿಲ್ಲ. ಕೆಲವು ದಿನಗಳ ನಂತರ ಸಂಗ್ರಹಿಸಿದ ಎಲ್ಲಾ ವಿವರಗಳನ್ನು ನೋಡಿದ ಮೇಲೆ ಬೆನ್ನುನೋವಿಗೆ ವಾಕಿಂಗ್ ಅತ್ಯುತ್ತಮ ಆಯ್ಕೆ ಎಂದು ದೃಢದವಾಗಿದೆ..
ಯಾವುದೇ ವೆಚ್ಚ ಮತ್ತು ಅಪಾಯವಿಲ್ಲದೆ ಬೆನ್ನು ನೋವನ್ನು ಕಡಿಮೆ ಮಾಡಲು ವಾಕಿಂಗ್ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತದೆ. ವಾಕಿಂಗ್ ಬೆನ್ನು ನೋವನ್ನು ನಿವಾರಿಸುವುದಲ್ಲದೆ, ಹೃದಯರಕ್ತನಾಳದ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ತೂಕವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.