CrimeNational

ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ನಡು ರಸ್ತೆಯಲ್ಲೇ ಪ್ರೇಯಸಿಯ ಕೊಲೆ!

ಮುಂಬೈ; ಹಾಡಹಗಲೇ, ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.. ಕಬ್ಬಿಣದ ಸಲಾಖೆಯಿಂದ ಹದಿನೈದಕ್ಕೂ ಹೆಚ್ಚು ಬಾರಿ ಹೊಡೆದು ಭೀಕರವಾಗಿ ಸಾಯಿಸಲಾಗಿದೆ.. ಮುಂಬೈನಲ್ಲಿ ಇಂತಹದ್ದೊಂದು ದಾರುಣ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ..

ಮುಂಬೈ ವಸಾಯಿ ಎಂಬಲ್ಲಿ ಈ ಕೃತ್ಯೆ ಎಸಗಲಾಗಿದೆ.. ಯುವತಿಯನ್ನು ರಸ್ತೆಗೆ ತಳ್ಳಿರುವ ವ್ಯಕ್ತಿ ಆಕೆ ಮೇಲೆ ಕಬ್ಬಿಣದ ಸಲಾಖೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.. ಇದನ್ನು ರಸ್ತೆಯಲ್ಲಿ ಹೋಗುವವರು ವಿಡಿಯೋ ಮಾಡಿದ್ದಾರೆ.. ಆದ್ರೆ ಯಾರೂ ಕೂಡಾ ರಕ್ಷಣೆಗೆ ಬಂದಿಲ್ಲ..

ಆರೋಪಿ ಹಾಗೂ ಕೊಲೆಯಾದ ಯುವತಿ ಇಬ್ಬರೂ ಇನ್ನೂ ಯಾರೆಂದು ಗೊತ್ತಾಗಿಲ್ಲ.. ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

 

Share Post