ಇಂಡಿಗೊ ವಿಮಾನ ಸಿಬ್ಬಂದಿ ವಿರುದ್ಧ ನಟಿ ರೋಜಾ ಆಕ್ರೋಶ
ಬೆಂಗಳೂರು: ಇಂಡಿಗೊ ವಿಮಾನ ತುರ್ತು ಲ್ಯಾಂಡಿಂಗ್ ಮಾಡುವುದಕ್ಕಾಗಿ ಪ್ರಯಾಣಿಕರ ಬಳಿ ವಿಮಾನ ಸಿಬ್ಬಂದಿ ಐದು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ನಟಿ ರೋಜಾ ಕಿಡಿ ಕಾರಿದ್ದಾರೆ. ರಾಜಮಂಡ್ರಿಯಿಂದ ತಿರುಪತಿಗೆ 50ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಡಿಗೊ ವಿಮಾನ ನಿನ್ನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಮುಂಜಾಗ್ರತಾ ಕ್ರಮದ ಕಾರಣ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ ಎಂದು ವಿಮಾನ ಸಿಬ್ಬಂದಿ ತಿಳಿಸಿದ್ರು. ಆದ್ರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ನಟಿಯಾಗಿರುವ ರೋಜಾ ಮಂಗಳವಾರ 10.30ಕ್ಕೆ ವಿಮಾನ ತಿರುಪತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ತಾಂತ್ರಿಕ ಸಮಸ್ಯೆ ಎಂದು ಪ್ರಯಾಣಿಕರನ್ನು ವಿಮಾನದಲ್ಲೇ ನಾಲ್ಕು ಗಂಟೆ ಕಾಲ ಕೂರಿಸಿದ್ದಾರೆ. ಜೊತೆಗೆ ಭದ್ರತಾ ಶುಲ್ಕವೆಂದು ಐದು ಸಾವಿರಕ್ಕೆ ಇಂಡಿಗೊ ವಿಮಾನ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆಂದು ರೋಜಾ ಗುಡುಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.