ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ; ಎಲ್ಲವೂ ಸುಳ್ಳು ಸುದ್ದಿ ಎಂದ ಸುರೇಶ್ ಗೋಪಿ
ಕೇರಳ; ಕೇರಳದಿಂದ ಆಯ್ಕೆಯಾದ ಬಿಜೆಪಿ ಏಕೈಕ ಸಂಸದ ಸುರೇಶ್ ಗೋಪಿ ನಿನ್ನೆಯಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.. ಆದ್ರೆ, ಇಂದು ಸಚಿವ ಸ್ಥಾನ ಬೇಡ ಎನ್ನುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.. ಆದ್ರೆ ಇದನ್ನು ಸ್ವತಃ ಸಂಸದ ಸುರೇಶ್ ಗೋಪಿಯವರೇ ಅಲ್ಲಗೆಳೆದಿದ್ದಾರೆ.. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡೋದಿಲ್ಲ.. ಕೇರಳ ಅಭಿವೃದ್ಧಿ ಶ್ರಮಿಸುವುದಾಗಿ ಹೇಳಿದ್ದಾರೆ..
ಇಂದು ಬೆಳಗ್ಗೆ ಪ್ರಚಾರವಾಗಿದ್ದ ಸುದ್ದಿ ಈ ರೀತಿ ಇತ್ತು:
ಈ ಬಾರಿ ಕೇರಳದಿಂದ ಬಿಜೆಪಿಯ ಒಬ್ಬರು ಸಂಸದರು ಆಯ್ಕೆಯಾಗಿದ್ದಾರೆ.. ಅವರೇ ಸುರೇಶ್ ಗೋಪಿ.. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸುರೇಶ್ ಗೋಪಿಗೆ ಸಚಿವ ಸ್ಥಾನ ನೀಡಲಾಗಿದ್ದು, ನಿನ್ನೆಯಷ್ಟೇ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು.. ಆದ್ರೆ ಇದೀಗ ಸಚಿವ ಸ್ಥಾನ ನನಗೆ ಬೇಡವಾಗಿತ್ತು.. ಆದಷ್ಟು ಬೇಗ ಈ ಸ್ಥಾನದಿಂದ ಮುಕ್ತನಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿಕೊಂಡಿದ್ದಾರೆ..
ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ.. ಈ ಹಿನ್ನೆಲೆಯಲ್ಲಿ ಸುರೇಶ್ ಗೋಪಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ.. ಆದ್ರೆ ಈ ಹಿಂದೆ ರಾಜ್ಯಸಭಾ ಸದಸ್ಯರೂ ಆಗಿದ್ದ ಸುರೇಶ್ ಗೋಪಿ, ಕೇರಳದಲ್ಲಿ ಸಿನಿಮಾ ನಟರೂ ಹೌದು.. ಅವರು ಈಗಾಗಲೇ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ.. ಅವುಗಳನ್ನು ಮುಗಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ.. ಹೀಗಾಗಿ ಸಚಿವ ಸ್ಥಾನದಲ್ಲಿದ್ದರೆ ಆ ಹುದ್ದೆಗೆ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ..
ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ.. ಸಚಿವ ಸ್ಥಾನ ಕೊಟ್ಟಾಗ ಸದ್ಯಕ್ಕೆ ಅದು ನನಗೆ ಅಗತ್ಯವಿಲ್ಲ ಎಂದೇ ಹೇಳಿದ್ದೆ.. ಸಂಸದನಾಗಿ ನಾನು ನನ್ನ ಕಾರ್ಯ ಮಾಡುತ್ತೇನೆ.. ಜೊತೆ ಚಿತ್ರರಂಗದಲ್ಲಿ ಬಾಕಿ ಉಳಿದ ಕೆಲಸಗಳನ್ನು ಮಾಡುತ್ತೇನೆ ಎಂದೂ ಸುರೇಶ್ ಗೋಪಿ ಹೇಳಿದ್ದಾರೆ.. ಈ ಮೂಲಕ ಅವರು ಆದಷ್ಟು ಬೇಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನ್ನಾಗಿದ್ದಾರೆ..