CrimeInternational

ರೈಲಿನ ಎದುರು ಸೆಲ್ಫಿ ಹುಚ್ಚಾಟ!; ಸ್ನೇಹಿತ ಎದುರೇ ಪ್ರಾಣ ಕಳೆದುಕೊಂಡ ಯುವತಿ..!

ಮೆಕ್ಸಿಕೋ; ರೈಲಿನ ಮುಂದೆ ಸೆಲ್ಫಿ, ರೀಲ್ಸ್‌ ಮಾಡಲು ಹೋಗಿ ಅನೇಕರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.. ಆದರೂ ಇಂತಹ ಹುಚ್ಚಾಟಗಳು ನಿಂತಿಲ್ಲ.. ಅದೇ ರೀತಿ ಮೆಕ್ಸಿಕೋದಲ್ಲಿ ವೇಗವಾಗಿ ಬರುತ್ತಿದ್ದ ರೈಲಿನ ಜೊತೆ ಸೆಲ್ಫಿ ಹಾಗೂ ರೀಲ್ಸ್‌ ಮಾಡಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ.. ಆ ಭಯಾನಕ ದೃಶ್ಯಗಳು ಬೇರೊಂದು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.. ನೆಟ್ಟಿಗರು ಇಂತಹ ಹುಚ್ಚು ಸಾಹಸ ಮಾಡಬೇಡಿ ಎಂದು ಇತರರಿಗೆ ಸಲಹೆ ನೀಡುತ್ತಿದ್ದಾರೆ..

ಮೆಕ್ಸಿಕೋದ ಹಿಡಾಲ್ಗೋದ ಬಳಿ ಚಲಿಸುತ್ತಿದ್ದ ರೈಲಿನ ಜೊತೆ ರೀಲ್ಸ್‌ ಮಾಡಲು 28 ವರ್ಷದ ಯುವತಿ ಮುಂದಾಗಿದ್ದಾಳೆ.. ಈ ವೇಳೆ ಆ ರೈಲು ಆಕೆಗೆ ಟಚ್‌ ಆಗಿದ್ದು, ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.. ಟ್ರೈನ್​ ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುವ ಸ್ಟೀಮ್​​ ಇಂಜಿನ್​ ಆಗಿದೆ.. ಇದನ್ನು ನೋಡಲೆಂದು ಹಲವಾರು ಜನ ರೈಲ್ವೆ ಟ್ರ್ಯಾಕ್‌ ಬಳಿ ಕಾಯುತ್ತಿದ್ದರು.. ರೈಲು ಸ್ವಲ್ಪ ದೂರದಲ್ಲಿ ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಯುವತಿ, ಟ್ರ್ಯಾಕ್‌ ಹತ್ತಿರ ನಿಂತು ಅದರ ಜೊತೆ ರೀಲ್‌ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ..

ಡುಲ್ಸೆ ಅಲೋಂಡ್ರಾ (28) ಎಂಬಾಕೆಯೇ ಸಾವನ್ನಪ್ಪಿದ ಮಹಿಳೆ ಎಂದು ತಿಳಿದುಬಂದಿದೆ..

 

Share Post