Politics

ಆ ಮೂರು ಗ್ಯಾರೆಂಟಿಗಳು ರದ್ದಾಗುತ್ತವಾ..?; ಬಿಟ್ಟಿ ಭಾಗ್ಯಗಳು ಅನ್ನುತ್ತಿದ್ದವರು ಇದನ್ನ ಸ್ವಾಗತಿಸ್ತಾರಾ..?

ಒಂದು ವರ್ಷದ ಹಿಂದೆ ನಡೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಐದು ಗ್ಯಾರೆಂಟಿ ಆಶ್ವಾಸನೆಗಳನ್ನು ನೀಡಿತ್ತು.. ಇದಕ್ಕೆ ಮನ್ನಣೆ ಕೊಟ್ಟಿದ್ದ ರಾಜ್ಯದ ಮತದಾರ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದ.. ಕಾಂಗ್ರೆಸ್‌ ಸರ್ಕಾರ ಕೂಡಾ ಕೊಟ್ಟ ಮಾತನ್ನು ಉಳಿಸಿಕೊಂಡು ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡಿದೆ.. ಸುಮಾರು ಒಂದೂವರೆ ಕೋಟಿಗೂ ಹೆಚ್ಚುನ ಈ ಗ್ಯಾರೆಂಟಿಗಳ ಫಲಾನುಭವಿಗಳಾಗಿದ್ದಾರೆ.. ಇದಕ್ಕಾಗಿ ರಾಜ್ಯ ಸರ್ಕಾರ ತಿಂಗಳಿಗೆ 59 ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯಿಸುತ್ತಿದೆ..

ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕಾಂಗ್ರೆಸ್‌ ಜನರ ಮುಂದೆ ಹೋಗಿತ್ತು.. ಆದ್ರೆ, ರಾಜ್ಯದಲ್ಲಿ ಕೇವಲ 9 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.. ಆದ್ರೆ ಕಾಂಗ್ರೆಸ್‌ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನಾದರೂ ಗೆಲ್ಲಬೇಕೆಂದು ಬಯಸಿತ್ತು.. ಆದ್ರೆ, ಮತದಾರ 9 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದಾನೆ.. ಹೀಗಾಗಿ, ಜನ ಕಾಂಗ್ರೆಸ್‌ನ ಈ ಐದು ಗ್ಯಾರೆಂಟಿಗಳು ಮನ್ನಣೆ ಕೊಟ್ಟಿಲ್ಲ ಅನ್ನೋದು ಸಾಬೀತಾಗಿದೆ.. ಹೀಗಾಗಿ, ಜನಕ್ಕೆ ಗ್ಯಾರೆಂಟಿಗಳು ಬೇಡ ಅನ್ನಿಸಿರಬೇಕು, ಅದಕ್ಕೇ ಕಾಂಗ್ರೆಸ್‌ ವಿರುದ್ಧ ಮತ ಹಾಕಿದ್ದಾರೆ.. ಸರ್ಕಾರಕ್ಕೆ ಹೊರೆಯಾಗುವ ಗ್ಯಾರೆಂಟಿ ಮತ್ಯಾಕೆ ಬೇಕು ಅನ್ನೋ ಅಭಿಪ್ರಾಯವನ್ನು ಕಾಂಗ್ರೆಸ್‌ನ ಕೆಲ ಶಾಸಕರು ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇದಕ್ಕೆ ಪುಷ್ಠಿ ಎಂಬಂತೆ, ಸಚಿವ ಚಲುವರಾಯಸ್ವಾಮಿ ಅವರು ಇತ್ತೀಚೆಗೆ ಮಾತನಾಡುತ್ತಾ, ರಾಜ್ಯದ ಜನರಿಗೆ ನಮ್ಮ ಗ್ಯಾರೆಂಟಿಗಳು ಬೇಡ ಅನ್ನಿದೆಯೇನೋ ಎಂಬ ಅನುಮಾನ ವ್ಯಕ್ತಪಡಿಸಿದ್ದರು…

ಗ್ಯಾರೆಂಟಿಗಳ ಹಣ ಹೊಂದಿಸುವ ಕಾರಣದಿಂದ ಶಾಸಕರಿಗೆ ಅನುದಾನಕ್ಕೆ ಕೊಕ್ಕೆ ಹಾಕಲಾಗಿದೆ.. ಒಂದು ವರ್ಷದಿಂದ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಇತರೆ ಅಭಿವೃದ್ಧಿ ಕೆಲಸಗಳು ನಡೆದಿಲ್ಲ.. ಜನ ಕೂಡಾ ಗ್ಯಾರೆಂಟಿಗಳ ವಿರುದ್ಧ ಇದ್ದಾರೆ.. ಹೀಗಾಗಿ ಸರ್ಕಾರಕ್ಕೆ ಹೊರೆಯಾಗಿರುವ ಮೂರು ಗ್ಯಾರೆಂಟಿಗಳನ್ನು ರದ್ದು ಮಾಡಿ ಎಂದು ಕೆಲ ಕಾಂಗ್ರೆಸ್‌ ಶಾಸಕರು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಕೂಡಾ ಮಾತನಾಡಿಲ್ಲ.. ಸಿಎಂ ಸಿದ್ದರಾಮಯ್ಯ ಕೂಡಾ ಈ ಗ್ಯಾರೆಂಟಿಗಳನ್ನು ನಿಲ್ಲಿಸೋದಕ್ಕೆ ಒಪ್ಪಿಗೆ ಕೊಡೋದು ಕೂಡಾ ಕಷ್ಟ.. ಆದರೂ ಕೂಡಾ ಇಂತಹದ್ದೊಂದು ಬೇಡಿಕೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ..

ಇನ್ನು ವಿಪಕ್ಷಗಳಾದ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಗ್ಯಾರೆಂಟಿಗಳನ್ನು ಬಿಟ್ಟಿ ಭಾಗ್ಯಗಳು ಎಂದೇ ಕರೆಯುತ್ತಾ ಬಂದಿದೆ.. ಗ್ಯಾರೆಂಟಿಗಳಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದೂ ಹೇಳುತ್ತಿದ್ದಾರೆ.. ಹಾಗಂತ ಗ್ಯಾರೆಂಟಿಗಳನ್ನು ನಿಲ್ಲಿಸಿದರೆ ಅದನ್ನು ಯಾವ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸ್ವಾಗತಿಸೋದಿಲ್ಲ.. ಲೋಕಸಭಾ ಚುನಾವಣೆಯ ನಂತರ ಗ್ಯಾರೆಂಟಿಗಳು ನಿಲ್ಲಿಸ್ತಾರೆ ಎಂದು ನಾವು ಹೇಳಿದ್ದೆವು.. ಅದರಂತೆಯೇ ಮಾಡಿದ್ದಾರೆ ಎಂದು ಲೇವಡಿ ಮಾಡುತ್ತವೆ.. ಗ್ಯಾರೆಂಟಿಗಳು ನಿಲ್ಲಿಸಿದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟವನ್ನೂ ಮಾಡುತ್ತವೆ.. ಹೀಗಾಗಿ ಸರ್ಕಾರ ಗ್ಯಾರೆಂಟಿಗಳನ್ನು ನಿಲ್ಲಿಸೋದು ಡೌಟು..

ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಯೋಜನೆಗಳು ಸರ್ಕಾರಕ್ಕೆ ಭಾರಿ ಹೊರೆಯಾಗುತ್ತಿವೆ.. ಉಳಿದಂತೆ ವಿದ್ಯಾನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳಿಂದ ಹೆಚ್ಚಿನ ನಷ್ಟವೇನೂ ಆಗುವುದಿಲ್ಲ.. ಹೀಗಾಗಿ ಮೊದಲ ಮೂರು ಯೋಜನೆಗಳನ್ನು ಕೈಬಿಡುವಂತೆ ಕೆಲವರು ಕೇಳುತ್ತಿದ್ದಾರೆ ಎನ್ನಲಾಗಿದೆ.. ಆದ್ರೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಡೌಟು.. ಒಂದು ವೇಳೆ ಅಂತ ನಿರ್ಧಾರ ತೆಗೆದುಕೊಂಡರೆ ಸಿಎಂ ಸಿದ್ದರಾಮಯ್ಯ ಮಾತ ತಪ್ಪಿದವರಾಗುತ್ತಾರೆ.. ಇನ್ನು ಸಿದ್ದರಾಮಯ್ಯ ಅವರು ಐದು ವರ್ಷದ ಕಾಲವೂ ಗ್ಯಾರೆಂಟಿಗಳು ಮುಂದೆವರೆಯುತ್ತವೆ ಎಂದು ಮೊದಲೇ ಸ್ಪಷ್ಟವಾಗಿ ಹೇಳಿರುವುದರಿಂದ ಅವುಗಳನ್ನು ರದ್ದುಪಡಿಸುವಂತಹ ಯೋಚನೆ ಮಾಡೋದು ತೀರಾ ಅನುಮಾನ..

 

Share Post