ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವುದು ಅಂದ್ರೆ ಏನು?
ಬೆಂಗಳೂರು; ಚುನಾವಣೆಯಲ್ಲಿ ಠೇವಣಿ ಕೂಡ ಬರಲಿಲ್ಲ ಅಂತ ಹೇಳುತ್ತಾರೆ. ಹಾಗಾದರೆ ಠೇವಣಿ ಕಳೆದುಕೊಳ್ಳುವುದು ಅಂದ್ರೆ ಏನು? ಯಾಕೆ ಈ ವ್ಯವಸ್ಥೆ ಇದೆ.?. ನೋಡೋಣ ಬನ್ನಿ..
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಪ್ರತಿ ಅಭ್ಯರ್ಥಿ 25 ಸಾವಿರ ರೂಪಾಯಿ ಭದ್ರತಾ ಠೇವಣಿ ಇಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಸುವ ಅಭ್ಯರ್ಥಿಗಳು 10 ಸಾವಿರ ಠೇವಣಿ ಇಡಬೇಕು.. ಯಾಕಂದ್ರೆ, ಯೋಗ್ಯ ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣಕ್ಕಿಳಿಯಬೇಕು ಅನ್ನೋ ಉದ್ದೇಶ.. ಉಚಿತವಾದರೆ ಸುಮ್ಮನೆ ಇರಲಿ ಅಂತ ನಾಮಪತ್ರ ಸಲ್ಲಿಸ್ತಾರೆ.. ಹೀಗಾಗಿ ಚುನಾವಣೆ ಸ್ಪರ್ಧೆ ಮಾಡೋದಕ್ಕೆ ಸೀರಿಯಸ್ನೆಸ್ ಇರಬೇಕು ಅಂತ ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ಭದ್ರತಾ ಠೇವಣಿ ಪಡೆಯುತ್ತದೆ.
ಅಭ್ಯರ್ಥಿ ತನ್ನ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳಲ್ಲಿ 1/6 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಬೇಕು. ಆಗ ಠೇವಣಿ ವಾಪಾಸ್ ಪಡೆಯಬಹುದು. ಒಂದು ವೇಳೆ ಅಭ್ಯರ್ಥಿ 1/6 ಕ್ಕಿಂತ ಕಡಿಮೆ ಮತ ಗಳಿಸಿದರೆ ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ.
ಉದಾಹರಣೆಗೆ ಕ್ಷೇತ್ರದಲ್ಲಿ ಒಟ್ಟು 120000 ಮತಗಳು ಅರ್ಹವಾದರೆ ಠೇವಣಿ ಪಡೆಯಲು 20000 ಸಾವಿರ ಮತ ಪಡೆಯಬೇಕು.