ಚಂದ್ರಬಾಬು, ನಿತೀಶ್ ಮೇಲೆ ನಿಂತಿದೆ ಮೋದಿ ಸರ್ಕಾರದ ಭವಿಷ್ಯ..?; ಅಧಿಕಾರ ಕಳೆದುಕೊಳುತ್ತಾ ಬಿಜೆಪಿ..?
ನವದೆಹಲಿ; ಈಗ ಮೋದಿ ಸರ್ಕಾರದ ಭವಿಷ್ಯ ಟಿಡಿಪಿ ಹಾಗೂ ಜೆಡಿಯು ಪಕ್ಷದ ನಾಯಕರ ನಿರ್ಧಾರದ ಮೇಲೆ ನಿಂತಿದೆ.. ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರಬಂದರೆ ಮೋದಿ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.. ಈಗಾಗಲೇ 232 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಜೆಡಿಯುನ ನಿತೀಶ್ ಕುಮಾರ್ ಜೊತೆ ಮಾತುಕತೆಗಳು ಶುರು ಮಾಡಿದೆ.. ನಿತೀಶ್ ಕುಮಾರ್ ಒಪ್ಪಿದರೆ, ಚಂದ್ರಬಾಬು ನಾಯ್ಡು ಕೂಡಾ ಒಪ್ಪುವ ಸಾಧ್ಯತೆ.. ಹಾಗೇನಾದರೂ ಆದ್ರೆ INDIA ಮೈತ್ರಿಕೂಟ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ..
ಸರಳ ಬಹುಮತಕ್ಕೆ 272 ಸ್ಥಾನಗಳು ಬೇಕು.. ಈಗ INDIA ಮೈತ್ರಿಕೂಟ 232 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಂದು ವೇಳೆ ಮುನ್ನಡೆಯಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದರೆ, ಸರ್ಕಾರ ರಚಿಸಲು 40 ಸೀಟುಗಳು ಮಾತ್ರ ಬೇಕಾಗುತ್ತದೆ.. ಸದ್ಯ NDA ಮೈತ್ರಿಕೂಟದಲ್ಲಿರುವ ಜೆಡಿಯುವ ನಿತೀಶ್ ಕುಮಾರ್ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನೊಂದೆಡೆ ಕೊನೇ ಕ್ಷಣದಲ್ಲಿ NDA ಮೈತ್ರಿಕೂಟ ಸೇರಿರುವ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.. ಈ ಎರಡೂ ಪಕ್ಷಗಳು INDIA ಒಕ್ಕೂಟಕ್ಕೆ ಬೆಂಬಲ ಕೊಟ್ಟರೆ, 290 ಸ್ಥಾನಗಳ ಮುನ್ನಡೆಯಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಬಲ 260 ಸ್ಥಾನಗಳಿಗೆ ಕುಸಿಯಲಿದೆ.. INDIA ಮೈತ್ರಿಕೂಟದ ಬಲ 262 ಸ್ಥಾನಗಳಿಗೆ ಜಂಪ್ ಆಗಲಿದೆ.. ಇನ್ನೂ ಕೆಲ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಬಹುದೇ ಎಂದು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಚಿಂತನೆ ನಡೆಸಿದೆ..
ಜೆಡಿಯುನ ನಿತೀಶ್ ಕುಮಾರ್ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಾರೆ.. ಅವರು ಒಮ್ಮೆ ಕಾಂಗ್ರೆಸ್ ಪರವಾಗಿದ್ದರೆ, ಮತ್ತೊಮ್ಮೆ ಜೆಡಿಎಸ್ ಪರವಾಗಿರುತ್ತಾರೆ.. ಲೋಕಸಭಾ ಚುನಾವಣೆಗೂ ಮುಂದೆ ನಿತೀಶ್ ಅವರು ಕಾಂಗ್ರೆಸ್ ಜೊತೆ ಸಖ್ಯ ಬೆಳೆಸಿ ಸರ್ಕಾರ ರಚನೆ ಮಾಡಿದ್ದರು.. INDIA ಒಕ್ಕೂಟದಲ್ಲಿ ಒಮ್ಮತ ಮೂಡದ ಕಾರಣಕ್ಕಾಗಿ ಅವರು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದರು.. ಇದು ಈಗಾಗಲೇ ಎರಡು ಮೂರು ಬಾರಿ ಆಗಿದೆ.. ಹೀಗಾಗಿ ಮತ್ತೆ ಅವರು ಮನಸ್ಸು ಬದಲಿಸಿದರೂ ಅಚ್ಚರಿಪಡಬೇಕಾದ ಅವಶ್ಯಕತೆ ಇಲ್ಲ..
ಇನ್ನು ಚಂದ್ರಬಾಬು ನಾಯ್ಡು ಅವರು ಈ ಹಿಂದೆ ಮೋದಿ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.. ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಜೊತೆ ಸ್ನೇಹ ಹೊಂದಿದ್ದಾರೆ.. ಹೀಗಾಗಿ ಅವರೂ ಕೂಡಾ ಮೈತ್ರಿಕೂಟದಿಂದ ಹೊರಬಂದರೂ ಅಚ್ಚರಿ ಇಲ್ಲ.. ಈ ಹಿನ್ನೆಲೆಯಲ್ಲಿ ಈಗಾಗಲೇ ಚರ್ಚೆಗಳು ಶುರುವಾಗಿದೆ.. ಒಂದು ವೇಳೆ INDIA ಮೈತ್ರಿಕೂಟ 230ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ರಾಜಕೀಯ ಮೇಲಾಟಗಳು ಜೋರಾಗುವ ಎಲ್ಲಾ ಸಾಧ್ಯತೆಗಳೂ ಇವೆ..