Politics

SHIMOGA LOKSABHA; ಶಿವಮೊಗ್ಗದಲ್ಲಿ ಗೀತಾ ಗೆದ್ದರೆ ಮಾತ್ರ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಗಟ್ಟಿ!

ಶಿವಮೊಗ್ಗ; ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೂಡಾ ಈ ಬಾರಿ ಸಾಕಷ್ಟು ಕುತೂಹಲ ಕೆರಳಿಸಿದೆ.. ಇಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಮೂರನೇ ಬಾರಿ ಆಯ್ಕೆ ಬಯಸಿದ್ದಾರೆ.. ಈಗಾಗಲೇ ಅವರು ಮೊದಲ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.. ಇಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಅವರು ಸ್ಪರ್ಧೆ ಮಾಡಿದ್ದರೂ ಕೂಡಾ ರಾಘವೇಂದ್ರ ಅವರು ಹೆಚ್ಚಿನ ಮತಗಳನ್ನು ಪಡೆಯುತ್ತಿದ್ದಾರೆ.. ರಾಘವೇಂದ್ರ ಅವರ ಗೆಲುವು ಗ್ಯಾರೆಂಟಿ ಎಂಬ ಮಾತುಗಳು ಕೇಳಿಬರುತ್ತಿವೆ.. ಈ ನಡುವೆ ಕಾಂಗ್ರೆಸ್‌ನಿಂದ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್‌ ಕಣದಲ್ಲಿದ್ದಾರೆ.. ಸಚಿವ ಮಧುಬಂಗಾರಪ್ಪ ಅವರು ತಮ್ಮ ಸಹೋದರಿಯನ್ನು ಗೆಲ್ಲಿಸಿಕೊಂಡು ಬಂದೇ ತೀರುತ್ತೇನೆ ಎಂದು ಪಣ ತೊಟ್ಟಿದ್ದರು.. ಆದ್ರೆ, ಬಿ.ವೈ.ರಾಘವೇಂದ್ರದ ಪ್ರಾಬಲ್ಯ ಮುಂದೆ ಗೀತಾ ಅವರು ಗೆಲ್ಲುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ..

ಆರಂಭದಿಂದಲೂ ರಾಘವೇಂದ್ರ ಅವರೇ ಮುನ್ನಡೆ ಸಾಧಿಸುತ್ತಿದ್ದಾರೆ.. ಇದರ ನಡುವೆ ಗೀತಾ ಶಿವರಾಜ್‌ ಕುಮಾರ್‌ ಅವರ ಗೆಲುವು ಮಧು ಬಂಗಾರಪ್ಪ ಅವರಿಗೆ ಅಗತ್ಯವಾಗಿದೆ.. ಗೀತಾ ಶಿವರಾಜ್‌ ಕುಮಾರ್‌ ಈ ಕಾಳಗದಲ್ಲಿ ಗೆದ್ದರೆ ಮಧುಬಂಗಾರಪ್ಪ ಅವರ ಸಚಿವ ಸ್ಥಾನ ಗಟ್ಟಿಯಾಗಲಿದೆ.. ಒಂದು ಗೀತಾ ಸೋತರೆ, ಸಂಪುಟ ಪುನಾರಚನೆ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರಿಗೆ ಕಷ್ಟವಾಗಬಹುದು ಎಂದೇ ಹೇಳಲಾಗುತ್ತಿದೆ.. ಇಲ್ಲಿ ಈಡಿಗ ಮತಗಳು ಹೆಚ್ಚಿದ್ದು, ಅವುಗಳನ್ನು ಒಗ್ಗೂಡಿಸಲು ಮಧು ಬಂಗಾರಪ್ಪ ಸತತ ಪ್ರಯತ್ನ ಮಾಡಿದ್ದರು.. ಆದ್ರೆ ರಿಸಲ್ಟ್‌ ಏನಾಗುತ್ತೆ ಅನ್ನೋದು ಕಾದುನೋಡಬೇಕು..

Share Post