CrimeEconomy

ಚಿನ್ನದ ಅಂಗಡಿಯಲ್ಲಿ 26 ಕೋಟಿ ನಗದು ಪತ್ತೆ!; ಚೀಲಗಳಲ್ಲಿತ್ತು ಹಣ!

ಮುಂಬೈ; ಇದು ಚಿನ್ನದ ಅಂಗಡಿಯೋ ಅಥವಾ ಹಣದ ಅಂಗಡಿಯೋ ಒಂದೂ ಅರ್ಥವಾಗುತ್ತಿಲ್ಲ.. ಯಾಕಂದ್ರೆ ಈ ಅಂಗಡಿಯಲ್ಲಿ ಬರೋಬ್ಬರಿ 26 ಕೋಟಿ ರೂಪಾಯಿ ನಗದು ಸಿಕ್ಕಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಸುರಾನ ಜುವೇಲರಿ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಈ ಹಣ ಸಿಕ್ಕಿದೆ.

  ಈ ಅಂಗಡಿಯಲ್ಲಿ ಹಣವನ್ನು ಅಕ್ಕಿ, ರಾಗಿ ತುಂಬಿಸಿಡುವಂತೆ ಚೀಲಗಳಲ್ಲಿ ತುಂಬಿಸಿಡಲಾಗಿತ್ತು.. ಇದನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

  ತೆರಿಗೆ ಸರಿಯಾಗಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.. 26 ಕೋಟಿ ರೂಪಾಯಿ ನಗದು ಸೇರಿ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ..

 

Share Post