10 ವರ್ಷ, ಪ್ರತಿ ತಿಂಗಳೂ 10 ಸಾವಿರ ಹೂಡಿಕೆ; 12 ಕೋಟಿ ರೂ. ಗಳಿಸುವ ಅದ್ಭುತ ಸ್ಕೀಂ!
ಪ್ರತಿಯೊಬ್ಬರೂ ಶ್ರೀಮಂತರಾಗಬೇಕೆಂದು ಕನಸು ಕಾಣುತ್ತಾರೆ.. ಆದ್ರೆ ನಮ್ಮಂತ ಸಣ್ಣ ಉದ್ಯೋಗ ಮಾಡೋರು ಶ್ರೀಮಂತರಾಗೋಕೆ ಹೇಗೆ ಸಾಧ್ಯ..? ಅಂತ ಪ್ರಶ್ನೆ ಕೂಡಾ ಮಾಡಿಕೊಳ್ಳುತ್ತಾರೆ.. ನಿಜ ಹೇಳಬೇಕಂದ್ರೆ ಶ್ರೀಮಂತರಾಗೋಕೆ ಹೆಚ್ಚು ಹಣ ಸಂಪಾದನೆ ಮಾಡಬೇಕು ಅಂತೇನೂ ಇಲ್ಲ.. ನಾವು ಸಂಪಾದಿಸುತ್ತಿರುವ ಹಣದಲ್ಲೇ ಕೊಂಚ ಹಣ ಹೂಡಿಕೆ ಸರಿಯಾದ ಸಮಯದಲ್ಲಿ, ಸರಿಯಾದ ಕಡೆ ಹೂಡಿಕೆ ಮಾಡಿದರೆ ಸಾಕು, ಎಲ್ಲರೂ ಕೋಟ್ಯಧೀಶರಾಗಬಹುದು… ಹತ್ತು ವರ್ಷಗಳ ಕಾಲ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡುವ ಶಕ್ತಿ ಹೊಂದಿದವರೆಲ್ಲಾ ಯಾವುದೇ ಶ್ರಮವಿಲ್ಲದೆ ಕೋಟ್ಯಧಿಪತಿಗಳಾಗಬಹುದು.. ನಿವೃತ್ತಿಯ ಜೀವನವನ್ನು ಹಾಯಾಗಿ ಕಳೆಯಬಹುದು… ನೀವು ಎಷ್ಟು ಸಣ್ಣ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡುತ್ತೀರೋ ಅಷ್ಟು ಲಾಭ ನಿಮಗಾಗುತ್ತೆ..
ನೀವು ಒಂದು ವೇಳೆ 21 ವರ್ಷಕ್ಕೆಲ್ಲಾ ಕೆಲಸಕ್ಕೆ ಸೇರಿದಿರಿ ಎಂದಿಟ್ಟುಕೊಳ್ಳಿ… ಶುರುವಿನಲ್ಲೇ ನೀವು ಉಳಿತಾಯಕ್ಕೆ ಒತ್ತು ಕೊಟ್ಟು ತಿಂಗಳಿಗೆ 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಸಾಕು.. ಹತ್ತು ವರ್ಷಗಳ ಕಾಲ ನೀವು ಪ್ರತಿ ತಿಂಗಳು ಸಿಸ್ಟಮೇಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಬಹುದು.. ಇದರಲ್ಲಿ ಕನಿಷ್ಠ ಎಂದರೂ ವರ್ಷಕ್ಕೆ ಶೇಕಡಾ 12ರಷ್ಟು ಬಡ್ಡಿ ಸಿಗುತ್ತದೆ… ಇದರ ಆಧಾರದಲ್ಲಿ ಲೆಕ್ಕ ಹಾಕೋದಾದರೆ ಹತ್ತು ವರ್ಷದಲ್ಲಿ ನಿಮಗೆ 23 ಲಕ್ಷ 23 ಸಾವಿರದ 391 ರೂಪಾಯಿ ನಿಮ್ಮ ಕೈಸೇರುತ್ತದೆ.. ಅಂದರೆ ನೀವು 30ನೇ ವರ್ಷಕ್ಕೆ ಕಾಲಿಟ್ಟಾಗ ಇಷ್ಟು ದೊಡ್ಡ ಮೊತ್ತದ ಹಣ ನಿಮ್ಮ ಕೈಗೆ ಸಿಗುತ್ತದೆ.. ಈ ಪೂರ್ತಿ ಹಣವನ್ನು ನೀವು ಮ್ಯೂಚ್ಯುಯಲ್ ಫಂಡ್ನಲ್ಲಿ ಹಾಗೇಯೇ ನಿಮ್ಮ ವಯಸ್ಸು 65 ಆಗುವವರೆಗೂ ಬಿಡಿ.. ಆಗ ನಿಮಗೆ ಬರೋಬ್ಬರಿ 12 ಕೋಟಿ 26 ಲಕ್ಷದ 74 ಸಾವಿರದ 161 ರೂಪಾಯಿ ಸಿಗಲಿದೆ.. ಅಂದರೆ ನೀವು ಕೇವಲ ಹತ್ತು ವರ್ಷ ಹೂಡಿಕೆ ಮಾಡಿದರೆ, ನಿವೃತ್ತಿಯ ಸಮಯದಲ್ಲಿ ನಿಮಗೆ 12 ಕೋಟಿ ರೂಪಾಯಿ ಸಿಗುತ್ತದೆ..
ಅದೇ ನೀವು ನಿಮ್ಮ ವಯಸ್ಸು 31 ವರ್ಷವಿದ್ದಾಗ ತಿಂಗಳಿಗೆ 10 ಸಾವಿರ ರೂಪಾಯಿಯಂತೆ 10 ವರ್ಷ ಅಂದರೆ ನಿಮ್ಮ ವಯಸ್ಸು 40 ಆಗುವವರೆಗೂ ಹೂಡಿಕೆ ಮಾಡಿದರೆ ನಿಮಗೆ ಆಗ 23 ಲಕ್ಷದ 23 ಸಾವಿರದ 391 ರೂಪಾಯಿ ಸಿಗಲಿದೆ.. ಬರುವ ಅಷ್ಟೂ ಹಣವನ್ನು ನಿಮ್ಮ ವಯಸ್ಸು 65 ಆಗುವವರೆಗೂ ಮ್ಯೂಚ್ಯುಯಲ್ ಫಂಡ್ನಲ್ಲಿ ಹಾಗೆಯೇ ಬಿಟ್ಟರೆ, ವಾರ್ಷಿಕ ಕನಿಷ್ಠ ಶೇಕಡಾ 12 ರಷ್ಟು ರಿಟರ್ನ್ಸ್ ಬಂದರೂ ನಿಮಗೆ 65 ವರ್ಷವಾದಾಗ ನಿಮ್ಮ ಕೈಗೆ 3 ಕೋಟಿ 94 ಲಕ್ಷದ 97 ಸಾವಿರದ 797 ರೂಪಾಯಿ ಸಿಗಲಿದೆ..
ಆದ್ರೆ ಸಂಸಾರದ ಜಂಜಾಟದ ನಡುವೆ ನಿಮಗೆ 40 ವರ್ಷದವರೆಗೆ ಹೂಡಿಕೆ ಮಾಡೋದಕ್ಕೆ ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳಿ.. ಈಗಲಾದರೂ ನೀವು ಹೂಡಿಕೆ ಮಾಡಬಹುದು.. ಆದ್ರೆ ವಯಸ್ಸು ಹೆಚ್ಚಾದಷ್ಟೂ ನಮಗೆ ರಿಟರ್ನ್ಸ್ ಕಡಿಮೆ ಬರುತ್ತದೆ.. ಒಂದು ವೇಳೆ ನೀವು 41ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಶುರು ಮಾಡಿದಿರಿ ಎಂದಿಟ್ಟುಕೊಳ್ಳಿ.. ತಿಂಗಳಿಗೆ 10 ಸಾವಿರ ರೂಪಾಯಿಯಂತೆ ನೀವು 65 ವಯಸ್ಸು ಬರುವವರೆಗೂ ಹೂಡಿಕೆ ಮಾಡುತ್ತೀರಿ.. ಆಗ ನಿಮಗೆ ಸಿಗೋದು 6 ಕೋಟಿ 95 ಲಕ್ಷದ 26 ಸಾವಿರದ 691 ರೂಪಾಯಿ.. ಹೀಗಾಗಿ ಕಡಿಮೆ ವಯಸ್ಸಿನಲ್ಲೊಇ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು..
ಮದುವೆಗೂ ಮುಂಚೆ ಕೆಲಸಕ್ಕೆ ಸೇರಿದಾಗ ಹೆಚ್ಚು ಖರ್ಚು ಇರೋದಿಲ್ಲ.. ಆದ್ರೆ ಸ್ನೇಹಿತರ ಜೊತೆಗೂಡಿ ಅನಗತ್ಯ ಖರ್ಚು ಮಾಡುವವರೇ ಹೆಚ್ಚು.. ಆದ್ರೆ ಮದುವೆಗೂ ಮುಂಚಿನ ಹತ್ತು ವರ್ಷಗಳಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿಯಂತೆ ಹತ್ತು ವರ್ಷ ಹೂಡಿಕೆ ಮಾಡಿ, ಬಂದ ಆ ಹಣವನ್ನು ಹಾಗೆಯೇ ಡೆಪಾಸಿಟ್ ಮಾಡಿದರೆ ನಿವೃತ್ತಿ ಸಮಯದಲ್ಲಿ ಹಾಯಾಗಿ ಜೀವಿಸಬಹುದು…