Lifestyle

ಮಕ್ಕಳು ಯಾಕೆ ಪದೇ ಪದೇ ಸುಳ್ಳು ಹೇಳುತ್ತಾರೆ ಗೊತ್ತಾ..?; ಅದಕ್ಕೆ ಕಾರಣ ನೀವೇನಾ..?

ಬೆಳೆಯುತ್ತಿರುವ ಮಕ್ಕಳು ಮಾತನಾಡುವ ಕೆಲ ಮಾತುಗಳು ನಮಗೇ ಅಚ್ಚರಿ ತರಿಸುತ್ತವೆ.. ಇದನ್ನೆಲ್ಲಾ ಮಗುವಿಗೆ ಯಾರು ಕಲಿಸಿದರು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ.. ಈ ವಿಷಯ ಇವನಿಗೆ ಹೇಗೆ ಗೊತ್ತಾಯ್ತು ಅಂತ ನಾವು ಮಾತನಾಡಿಕೊಳ್ಳುತ್ತೇವೆ.. ಆ ಮಟ್ಟಿಗೆ ಮಕ್ಕಳು ಈಗ ಬುದ್ಧವಂತರಿದ್ದಾರೆ.. ನಮ್ಮೆಲ್ಲಾ ಚಲನವಲನಗಳೆಲ್ಲಾ ಮಕ್ಕಳು ಗಮನಿಸುತ್ತವೆ.. ಚಿಕ್ಕ ಮಕ್ಕಳಾದರೂ ನಮ್ಮ ಚಟುವಟಿಕೆಗಳು, ನಮ್ಮ ಮಾತುಗಳನ್ನು ನೋಡಿ ಏನು ನಡೀತಿದೆ ಎಂದು ಗ್ರಹಿಸುತ್ತವೆ.. ಅದರಂತೆ ಮಾತುಗಳನ್ನೂ ಕಲಿಯುತ್ತವೆ.. ಹೀಗೆ ಮಾತನಾಡುವಾಗ ಮಕ್ಕಳು ತುಂಬಾ ಸಂದರ್ಭದಲ್ಲಿ ನಾವು ಏನಾದರೂ ಕೇಳಿದರೆ ಅವು ಸುಳ್ಳು ಹೇಳುತ್ತವೆ..

ನಾವು ಏನನ್ನಾದರೂ ಹೆಚ್ಚು ಪ್ರಶ್ನೆ ಮಾಡಿದಷ್ಟೂ ಮಕ್ಕಳು ಸುಳ್ಳು ಹೇಳುವುದನ್ನು ಜಾಸ್ತಿ ಮಾಡುತ್ತವೆ.. ಅಷ್ಟಕ್ಕೂ ಮಕ್ಕಳು ಯಾಕೆ ಸುಳ್ಳು ಹೇಳುತ್ತಾರೆ..? ಇದಕ್ಕೆ ಕಾರಣ ಏನು..? ಮಕ್ಕಳು ಸುಳ್ಳು ಹೇಳುವುದಕ್ಕೆ ನಮ್ಮ ವರ್ತನೆಯೇ ಕಾರಣವೇ..? ಈ ಬಗ್ಗೆ ತಿಳಿಯೋಣ ಬನ್ನಿ..

ಹೊಡೆಯುತ್ತಾರೆ ಎಂಬ ಭಯ;

ಬಹುತೇಕ ಮಕ್ಕಳು ಹೆಚ್ಚು ತೀಟೆ ಮಾಡುತ್ತವೆ.. ಏನೋ ಒಂದು ತಪ್ಪು ಮಾಡಿರುತ್ತವೆ.. ಪೋಷಕರು ಕೇಳಿದರೆ ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ.. ಆದ್ರೆ ಮಕ್ಕಳಿಗೆ ಸುಳ್ಳು ಹೇಳಬೇಕು ಎಂದೇನೂ ಇರೋದಿಲ್ಲ.. ಸತ್ಯ ಹೇಳಿದರೆ ಏನಂತಾರೋ ಎಂಬ ಭಯ ಮಕ್ಕಳನ್ನು ಕಾಡುತ್ತದೆ.. ಹೀಗಾಗಿ ಮಕ್ಕಳು ಸತ್ಯವನ್ನು ಹೇಳೋದಕ್ಕೆ ಹಿಂದೆ ಮುಂದೆ ನೋಡುತ್ತಾರೆ.. ಎಲ್ಲಿ ಪೋಷಕರು ಹೊಡೆಯುತತಾರೋ ಎಂಬ ಭಯದಿಂದ ಸುಳ್ಳು ಹೇಳಿ ಮಕ್ಕಳು ತಪ್ಪಿಸಿಕೊಳ್ಳುತ್ತಾರೆ..

ನಿಮ್ಮ ಮೇಲೆ ಮಕ್ಕಳಿಗೆ ವಿಶ್ವಾಸವಿರಲಿ;

ಪೋಷಕರು ನಮಗೆ ಬೆಂಬಲವಾಗಿ ನಿಲ್ಲುತ್ತಾರೆ.. ಯಾವುದೇ ತೊಂದರೆ ಕೊಡದೇ ಮಾಡಿದ ತಪ್ಪನ್ನು ಅರ್ಥ ಮಾಡಿಸುತ್ತಾರೆ ಎಂಬ ಧೈರ್ಯ ಮಕ್ಕಳಿಗೆ ಬರಬೇಕು.. ಆಗ ಯಾವ ಮಕ್ಕಳೂ ಸುಳ್ಳು ಹೇಳುವುದಕ್ಕೆ ಹೋಗುವುದಿಲ್ಲ.. ನಿಮ್ಮ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳುತ್ತಾರೆ.. ಏನಾದರೂ ತಪ್ಪು ಮಾಡಿದರೂ ಕೂಡಾ ಸತ್ಯವನ್ನೇ ನಿಮ್ಮ ಬಳಿ ಹೇಳುತ್ತಾರೆ.. ನಿಮ್ಮನ್ನು ನಂಬುತ್ತಾರೆ.. ನಿಮ್ಮ ಮೇಲೆ ವಿಶ್ವಾಸ ಇಡುತ್ತಾರೆ..

ಮುಜುಗರ;

ಕೆಲವೊಮ್ಮೆ ಏನಾದರೂ ಪೋಷಕರು ಕೇಳಿದಾಗ ಅದಕ್ಕೆ ಉತ್ತರ ಮಕ್ಕಳಿಗೆ ಗೊತ್ತಿರುತ್ತದೆ.. ಆದ್ರೆ ಹೇಳುವುದಕ್ಕೆ ಅವಕ್ಕೆ ಭಯ.. ಯಾಕಂದ್ರೆ, ಅದು ತಪ್ಪಾದರೆ ಎಲ್ಲರೂ ಅಪಹಾಸ್ಯ ಮಾಡಿದರೆ ಕಷ್ಟ ಅನ್ನೋ ಭಯ.. ಹೀಗಾಗಿ ಮಕ್ಕಳು ಮುಗುಗರದಿಂದ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಹೆಚ್ಚು.. ಹೀಗಾಗಿ, ಮಕ್ಕಳನ್ನು ಅಪಹಾಸ್ಯ ಮಾಡುವುದನ್ನು ನಾವು ನಿಲ್ಲಿಸಬೇಕು..

ಸುಳ್ಳಿನ ಬಗ್ಗೆ ಮಕ್ಕಳ ಗ್ರಹಿಕೆ;

ಮಕ್ಕಳಿಗೆ ದೊಡ್ಡದಾಗಿ ಯೋಚಿಸುವುದು ಗೊತ್ತಿಲ್ಲ. ಅವರು ಏನು ಮಾಡಬೇಕೆಂದು ಅನಿಸುತ್ತದೋ ಅದನ್ನು ಮಾಡುತ್ತಾರೆ. ಆದುದರಿಂದಲೇ ಎಷ್ಟೋ ಜನ ದೊಡ್ಡವರಾದ ಮೇಲೆ ಮಕ್ಕಳಾಗಿದ್ದರೇನೇ ಚೆನ್ನಾಗಿರುತ್ತಿತ್ತು ಎಂದು ಕೊರಗುತ್ತಾರೆ. ಆದರೆ ಬಾಲ್ಯದಲ್ಲಿ ಇದು ಎಷ್ಟು ಸಮಸ್ಯೆ ಎಂದು ನಿಮಗೆ ತಿಳಿದಿದೆಯೇ? ಚಿಕ್ಕವರಿರುವಾಗ ಮಕ್ಕಳಿಗೆ ಇದು ದೊಡ್ಡ ವಿಷಯ ಎಂದು ತಿಳಿದಿರುವುದಿಲ್ಲ. ಅವರು ಸುಳ್ಳು ಹೇಳಲು ಅಭ್ಯಾಸ ಮಾಡುತ್ತಾರೆ. ಆದರೆ ಇದು ಹೆಚ್ಚು ಸುಳ್ಳುಗಳಿಗೆ ಕಾರಣವಾಗುತ್ತದೆ.

Share Post