ಯುವಕರಿಗೆ ಭಯೋತ್ಪಾದನೆ ಟ್ರೈನಿಂಗ್; ಇಬ್ಬರು ಶಂಕಿತರ ಅರೆಸ್ಟ್!
ದಿಸ್ಪುರ್; ಬಾಂಗ್ಲಾದೇಶದಿಂದ ಬಂದು ಯುವಕರ ಮನವೊಲಿಸಿ ಉಗ್ರ ಚಟುವಟಿಕೆಗೆ ಬಳಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.. ಇವರು ನಿಷೇಧಿತ ಅಲ್‌ಖೈದಾ ಸಂಘಟನೆಯ ನಂಟು ಹೊಂದಿದ್ದಾರೆ ಎಂದು ತಿಳಿದುಬಂದಿದೆ..
ಬಹರ್ ಮಿಯಾ (30) ಮತ್ತು ರಾಸೆಲ್ ಮಿಯಾ (40) ಎಂಬುವವರೇ ಬಂಧಿತ ಶಂಕಿತ ಉಗ್ರರು.. ಇವರು ಬಾಂಗ್ಲಾದೇಶದವರಾಗಿದ್ದು, ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಲೆಂದೇ ಗುವಾಹಟಿಗೆ ಬಂದಿದ್ದರು ಎಂದು ತಿಳಿದುಬಂದಿದೆ.. ಆರೋಪಿಗಳು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ಗೆ ಸೇರಿದವರು. ಅವರು ಭಾರತದಲ್ಲಿ ನಿಷೇಧಿತ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದಾರೆ..
ಬಂಧಿತ ಶಂಕಿತ ಉಗ್ರರು ಪಾಸ್‍ಪೋರ್ಟ್ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಾರೆ… ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು, ಅಕ್ರಮವಾಗಿ ಭಾರತೀಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.. ಅವರ ಬಳಿ ಆಧಾರ್ ಮತ್ತು ಪಾನ್ ಕಾರ್ಡ್‍ಗಳು ಸಿಕ್ಕಿವೆ..