Districts

ಭಾರಿ ಗಾಳಿಗೆ ಪಲ್ಟಿ ಹೊಡೆಯಿತು ಕಾರು; ತುಮಕೂರು ಜಿಲ್ಲೆಯಲ್ಲಿ ಅವಾಂತರ

ತುಮಕೂರು; ಕಳೆದ ರಾತ್ರಿ ತುಮಕೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.. ಮಳೆಯ ಜೊತೆಗೆ ಭಾರಿ ಗಾಳಿ ಬೀಸಿದ್ದು, ಹಲವು ಕಡೆ ಮರಗಳು ಉರುಳಿಬಿದ್ದಿದೆ.. ಗುಬ್ಬಿ ತಾಲೂಕಿನ ಹೊಸಳ್ಳಿ ರಸ್ತೆಯಲ್ಲಿ ಬೃಹತ್ ಮರ ನೆಲಕ್ಕೆ ಉರುಳಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.. ಇನ್ನೊಂದೆಡೆ ಗಾಳಿಯಿಂದಾಗಿ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿದೆ..

ಭಾರಿ ಗಾಳಿ ಬೀಸುತ್ತಿತ್ತು.. ಈ ನಡುವೆ ಕಾರು ಓಡಿಸಲಾಗುತ್ತಿತ್ತು.. ಈ ವೇಳೆ ಕಾರು ನಿಯಂತ್ರಣ ತಪ್ಪಿದೆ.. ಡ್ರೈವರ್‌ ಬ್ರೇಕ್‌ ಹಾಕಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.. ಇದರಿಂದಾಗಿ ಕಾರು ಪಲ್ಟಿಯಾಗಿದೆ.. ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ..

ರಾಜ್ಯದಲ್ಲಿ ಇನ್ನೂ ಕೆಲದಿನ ಮಳೆ ಮುಂದುವರೆಯಲಿದ್ದು, ಹವಾಮಾನ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಿದೆ..

Share Post