ಮಾಜಿ ಸಚಿವ ರೇವಣ್ಣಗೆ ಇವತ್ತು ಸಿಗುತ್ತಾ ಜಾಮೀನು..?; ಪ್ರಜ್ವಲ್ ಕಥೆ ಏನು..?
ಬೆಂಗಳೂರು; ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ಚಲ್ ರೇವಣ್ಣ ಇನ್ನೂ ವಿದೇಶದಲ್ಲೇ ಇದ್ದಾರೆ.. ಅವರು ಮೇ 15ರಂದು ಬೆಂಗಳೂರಿಗೆ ಬರುವುದಕ್ಕೆ ವಿಮಾನದ ಟಿಕೆಟ್ ಬುಕ್ ಆಗಿತ್ತು.. ಆದ್ರೆ ಅದೂ ಕೂಡಾ ಈಗ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಪ್ರಜ್ವಲ್ ಸದ್ಯಕ್ಕೆ ವಿದೇಶದಿಂದ ಬೆಂಗಳೂರಿಗೆ ಬರೋದು ಡೌಟು ಎಂದು ಹೇಳಲಾಗುತ್ತಿದೆ.. ಈ ನಡುವೆ ಬಂಧನವಾಗಿರುವ ಮಾಜಿ ಸಚಿವ ರೇವಣ್ಣ ಅವರು 5 ದಿನ ಜೈಲಿನಲ್ಲಿ ಕಳೆದಿದ್ದಾರೆ.. ಐಶಾರಾಮಿ ಜೀವನ ನಡೆಸಿದ್ದ ರೇವಣ್ಣಗೆ ಜೈಲು ಇನ್ನೂ ಒಗ್ಗಿದಂತೆ ಕಾಣುತ್ತಿಲ್ಲ.. ಈಗಲೂ ಜೈಲಿನ ಊಟ ತಿನ್ನಲಾಗದೆ ಒದ್ದಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..
ಇನ್ನು ರೇವಣ್ಣ ಅವರ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.. ಇಂದು ಜಾಮೀನು ಸಿಗುವ ವಿಶ್ವಾಸದಲ್ಲಿ ರೇವಣ್ಣ ಇದ್ದಾರೆ.. ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.. ಆದ್ರೆ ನಿನ್ನೆ ಮಾತನಾಡಿರುವ ಮಹಿಳೆ, ನನ್ನನ್ನು ಯಾರೂ ಅಪಹರಣ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.. ಈ ಹಿನ್ನೆಲೆಯಲ್ಲಿ ರೇವಣ್ಣ ಅವರಿಗೆ ಜಾಮೀನು ಸಿಗುವುದು ಸುಲಭವಾಗಬಹುದು ಎಂದು ಹೇಳಲಾಗುತ್ತಿದೆ.. ಒಂದು ವೇಳೆ ಇವತ್ತೂ ಜಾಮೀನು ಸಿಗದೇ ಹೋದರೆ ರೇವಣ್ಣ ಅವರು ಮತ್ತಷ್ಟು ದಿನ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ಬರಬಹುದು..
ಇತ್ತ ವಕೀಲ ದೇವರಾಜೇಗೌಡರ ಜಾಮೀನು ಅರ್ಜಿ ಕೂಡಾ ಇಂದೇ ವಿಚಾರಣೆಗೆ ಬರಲಿದೆ.. ಒಂದು ವೇಳೆ ಇಂದು ದೇವರಾಜೇಗೌಡ ಅವರಿಗೆ ಜಾಮೀನು ಸಿಕ್ಕರೆ ಅವರು ಒಂದಷ್ಟು ಮಹತ್ವದ ವಿಚಾರಗಳನ್ನು ಬಹಿರಂಗ ಮಾಡುವ ಸಾಧ್ಯತೆ ಇದೆ.. ಹೀಗಾಗಿ ಇಂದಿನ ವಿಚಾರಣೆ ಸಾಕಷ್ಟು ಕುತೂಹಲ ಕೆರಳಿಸಿದೆ..