ಇಲ್ಲಿ ಪ್ರತಿ ಪುರುಷ ಎರಡು ಮದುವೆ ಆಗಲೇಬೇಕು; ಒಂದೇ ಮನೆಯಲ್ಲಿ ಇಬ್ಬರ ಜೊತೆ ಸಂಸಾರ!
ರಾಜಸ್ಥಾನ; ಭಾರತದಲ್ಲಿ ಹಲವಾರು ರೀತಿಯ ಕಟ್ಟುಪಾಡುಗಳು, ಹಲವಾರು ಸಂಸ್ಕೃತಿಗಳಿವೆ.. ಹಲವಾರು ಮೂಢನಂಬಿಕೆಗಳೂ ಅಸ್ತಿತ್ವದಲ್ಲಿವೆ.. ಕೆಲವೊಂದು ಪದ್ಧತಿಗಳು ನಮಗೆ ವಿಚಿತ್ರ ಎನಿಸುತ್ತವೆ.. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಏಕಪತ್ನಿತ್ವಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.. ಆದ್ರೆ ರಾಜಸ್ಥಾನದ ಒಂದು ಹಳ್ಳಿಯಲ್ಲಿ ಮಾತ್ರ ಬಹುಪತ್ನಿತ್ವ.. ಈ ಗ್ರಾಮದ ಪ್ರತಿಯೊಬ್ಬ ಗಂಡೂ ಎರಡು ಮದುವೆಯಾಗಬೇಕು.. ಈ ಗ್ರಾಮದಲ್ಲಿರುವ ಎಲ್ಲಾ ಗಂಡಸರೂ ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ.. ಇಲ್ಲಿ ಇದೊಂದು ಸಂಪ್ರದಾಯ..
ಎಲ್ಲರ ಒಪ್ಪಿಗೆಯಂತೆಯೇ ಇಲ್ಲಿ ಗಂಡಸರು ಎರಡು ಮದುವೆ ಮಾಡಿಕೊಳ್ಳುತ್ತಾರೆ.. ಒಂದೇ ಮನೆಯಲ್ಲಿ ಇಬ್ಬರೂ ಪತ್ನಿಯರ ಜೊತೆ ಸಂಸಾರ ನಡೆಸುತ್ತಾರೆ.. ಮೊದಲ ಪತ್ನಿ ಕೂಡಾ ಗಂಡ ಎರಡನೇ ಮಡುವೆಯಾಗುವುದನ್ನು ಯಾವುದೇ ಕಾರಣಕ್ಕೂ ತಡೆಯುವುದಿಲ್ಲ.. ಆಕೆಯೇ ಖುಷಿಯಿಂದ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆ ಮಾಡಿಸುತ್ತಾಳೆ.. ಅನಾದಿ ಕಾಲದಿಂದಲೂ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ..
ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದ ಬರ್ಮಾರ್ ಜಿಲ್ಲೆಯ ಒಂದು ಹಳ್ಳಿಯ ಸಂಪ್ರದಾಯವಿದು.. ಈ ಹಳ್ಳಿಯ ಹೆಸರು ತೇರಾಸರ್.. ಈ ಗ್ರಾಮದಲ್ಲಿ 600 ಜನ ವಾಸವಿದ್ದಾರೆ.. ಯಾವ ಮನೆಯಲ್ಲಿ ಹೋಗಿ ನೋಡಿದರೂ ಒಬ್ಬ ಗಂಡಸಿಗೆ ಇಬ್ಬರು ಹೆಂಡತಿಯರು ಇರುತ್ತಾರೆ..
ಅಂದಹಾಗೆ ಪದ್ಧತಿಗೆ ಒಂದು ಕಾರಣವೂ ಇದೆ.. ಮೊದಲು ಈ ಗ್ರಾಮದ ಗಂಡಸರು ಮದುವೆಯಾದಾಗ ಮೊದಲ ಪತ್ನಿಗೆ ಮಕ್ಕಳು ಆಗುತ್ತಿರಲಿಲ್ಲವಂತೆ.. ಹೀಗಾಗಿ ಮೊದಲ ಪತ್ನಿಯ ಒಪ್ಪಿಗೆ ಮೇರೆಗೆ ಎರಡನೇ ಮದುವೆ ನಡೆಯುತ್ತಿತ್ತು.. ಎರಡನೇ ಪತ್ನಿಗೆ ಮಕ್ಕಳಾಗುತ್ತಿದ್ದವು.. ಈಗಲೂ ಸಹಾ ಜನ ಇದನ್ನೇ ನಂಬಿದ್ದಾರೆ.. ಮೊದಲ ಪತ್ನಿಗೆ ಮಕ್ಕಳಾಗುವುದಿಲ್ಲ.. ಹೀಗಾಗಿ ಅವರು ಎರಡನೇ ಮದುವೆಯಾಗಬೇಕು ಎಂದೇ ನಂಬಿದ್ದಾರೆ.. ವಿಚಿತ್ರ ಅಂದ್ರೆ ಇಲ್ಲಿನ ಬಹುತೇಕ ಮನೆಯಲ್ಲಿ ಮೊದಲ ಪತ್ನಿಯರಿಗೆ ಮಕ್ಕಳಾಗಿಲ್ಲ..
ಇದರ ಹಿಂದೆ ಒಂದು ಕಥೆ ಇದೆ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ, ಈ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಮಕ್ಕಳಾಗಿರಲಿಲ್ಲ. ಆತನಿಗೆ ಎರಡನೇ ಮದುವೆ ಮಾಡಿಸಿದ ಮೇಲೆ ಮಕ್ಕಳಾಯಿತಂತೆ.. ಅನಂತರದಲ್ಲೂ ಹಳ್ಳಿಯಲ್ಲಿ ಹಲವರಿಗೆ ಇಂತಹದೇ ಅನುಭವ ಆಗಿದೆಯಂತೆ.. ಹೀಗಾಗಿ, ಪ್ರತಿ ಗಂಡಸೂ ಇಲ್ಲಿ ಎರಡು ಮದುವೆಯಾಗುತ್ತಾನೆ..