ಡ್ರೈವರ್ ಕಾರ್ತೀಕ್ಗೆ ವಿಡಿಯೋ ಹೇಗೆ ಸಿಕ್ತು..?; ವಕೀಲ ದೇವರಾಜೇಗೌಡ ಹೇಳೋದೇನು..?
ಬೆಂಗಳೂರು; ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಈಗ ದೊಡ್ಡ ಸದ್ದು ಮಾಡುತ್ತಿದೆ.. ಇಂದು ಬೆಳಗ್ಗೆ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದ ಪ್ರಜ್ವಲ್ ಮಾಜಿ ಕಾರು ಡ್ರೈವರ್, ನಾನು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ವಿಡಿಯೋಗಳಿದ್ದ ಪೆನ್ಡ್ರೈವ್ ಕೊಟ್ಟಿದ್ದೆ.. ಅವರಿಗೆ ಬಿಟ್ಟು ನಾನು ಯಾರಿಗೂ ವಿಡಿಯೋ ಕೊಟ್ಟಿರಲಿಲ್ಲ ಎಂದು ಹೇಳಿದ್ದರು.. ಇದೀಗ ಅದಕ್ಕೆ ವಕೀಲ ದೇವರಾಜೇಗೌಡ ಟಾಂಗ್ ಕೊಟ್ಟಿದ್ದಾರೆ.. ಕಾರ್ತೀಕ್ ನನಗೆ ವಿಡಿಯೋ ಕಾಪಿ ಮಾಡಿಕೊಟ್ಟ ದಿನದ ಸಿಸಿಟಿವಿ ವಿಡಿಯೋ ನನ್ನ ಬಳಿ ಇದೆ. ಅದನ್ನು ಬೇಕಾದರೆ ರಿಲೀಸ್ ಮಾಡ್ತೀನಿ ಎಂದಿದ್ದಾರೆ..
ಕಾರ್ತೀಕ್ ನನ್ನ ಬಳಿ ಬಂದು ಕಾಂಗ್ರೆಸ್ ನಾಯಕರ ಬಳಿ ಹೋಗಿದ್ದೆ ನನಗೆ ನ್ಯಾಯ ಸಿಗಲಿಲ್ಲ ಎಂದು ಹೇಳಿಕೊಂಡಿದ್ದರು.. ಈಗಲೂ ಅದನ್ನೇ ಹೇಳಿಕೊಂಡಿದ್ದಾರೆ.. ನಾನು ಯಾವುದೇ ಕಾರಣಕ್ಕೂ ವಿಡಿಯೋ ರಿಲೀಸ್ ಮಾಡಿಲ್ಲ.. ನನಗೆ ಅದರಿಂದ ಯಾವ ಲಾಭವೂ ಇಲ್ಲ.. ಹಾಸನದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಇರಲಿಲ್ಲ.. ನಮ್ಮ ಪಕ್ಷದ ಅಭ್ಯರ್ಥಿ ಇದ್ದಿದ್ದರೆ ನನ್ನ ವಿರುದ್ಧ ಆರೋಪ ಮಾಡಬಹುದಿತ್ತು ಎಂದು ದೇವರಾಜೇಗೌಡ ಹೇಳಿದ್ದಾರೆ..
ಕಾರ್ತೀಕ್ ನನಗೆ ಪೆನ್ಡ್ರೈವ್ ಕೊಟ್ಟಿದ್ದು ನಿಜ.. ನಾನು ವಕೀಲನಾಗಿ ಸತ್ಯಾಸತ್ಯತೆ ಪರಿಶೀಲಿಸಲು ವಿಡಿಯೋ ಪಡೆದಿದ್ದೆ.. ಆದ್ರೆ, ಅದಕ್ಕೂ ಮೊದಲೇ ಕಾಂಗ್ರೆಸ್ ನಾಯಕರನ್ನು ಕಾರ್ತೀಕ್ ಭೇಟಿಯಾಗಿದ್ದ.. ಇದನ್ನು ಕಾರ್ತೀಕ್ ಹಲವು ಬಾರಿ ಹೇಳಿದ್ದಾನೆ.. ಅಷ್ಟೇ ಅಲ್ಲ, ಒಂದು ವಿಡಿಯೋವನ್ನು ಪ್ರಜ್ವಲ್ಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನವನ್ನೂ ಮಾಡಿದ್ದಾನೆ.. ಅದಾದ ಮೇಲೆ ಪ್ರಜ್ವಲ್ ಕೋರ್ಟ್ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದರು ಎಂದು ದೇವರಾಜೇಗೌಡ ಹೇಳಿದ್ದಾರೆ..
ಕಾರ್ತೀಕ್ ನನಗೆ ಪೆನ್ ಡ್ರೈವ್ ಪೂರ್ತಿ ಕೊಟ್ಟಿಲ್ಲ.. ಆತನ ಪೆನ್ಡ್ರೈವ್ನಲ್ಲಿದ್ದ ವಿಡಿಯೋಗಳನ್ನು ನಾನು ಕಾಪಿ ಮಾಡಿಕೊಂಡಿದ್ದೇನೆ.. ಆತನ ಪೆನ್ಡ್ರೈವ್ ವಾಪಸ್ ಕೊಟ್ಟಿದ್ದೇವೆ.. ನಾನು ಕಾಪಿ ಮಾಡಿಕೊಂಡಿದ್ದ ವಿಡಿಯೋಗಳನ್ನು ಜಡ್ಜ್ ಮುಂದೆ ಪ್ರಸೆಂಟ್ ಮಾಡ್ತೀನಿ ಎಂದು ಹೇಳಿದ್ದೆ.. ನನ್ನ ಉದ್ದೇಶ ಅಷ್ಟೇ ಇತ್ತು.. ಹೆಣ್ಣು ಮಕ್ಕಳ ಮಾನ ಹರಾಜು ಮಾಡೋ ಕೆಲಸ ನಾನು ಮಾಡಿಲ್ಲ, ಮಾಡೋದೂ ಇಲ್ಲ ಎಂದು ದೇವರಾಜೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.. ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಇದ್ದ ವಿಡಿಯೋಗಳು ಕಾರ್ತಿಕ್ಗೆ ಹೇಗೆ ಸಿಕ್ಕಿದವು..? ಆತನಿಗೆ ಪೆನ್ ಡ್ರೈವ್ ಎಲ್ಲಿಂದ ಬಂತು..? ಎಂದೂ ದೇವರಾಜೇಗೌಡ ಪ್ರಶ್ನೆ ಮಾಡಿದ್ದಾರೆ..