Bengaluru

ರಾಜ್ಯದ ಹಲವೆಡೆ ವರುಣನ ಸಿಂಚನ; ಗಾಳಿ ಸಹಿತ ಮಳೆಯ ಅಬ್ಬರ!

ಬೆಂಗಳೂರು; ರಾಜ್ಯದ ಹಲವು ಭಾಗಗಳಲ್ಲಿ ರಾತ್ರಿ ಮಳೆರಾಯ ಆರ್ಭಟಿಸಿದ್ದಾನೆ.. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಕೊಂಚ ನಿರಾಳ ಭಾವನೆ ಮೂಡಿದೆ.. ವರುಣರಾಯ ಭೂಮಿಗೆ ತಂಪೆರೆದಿದ್ದಾನೆ.. ಬೆಂಗಳೂರಿನಲ್ಲಿ ಅಲ್ಲಲ್ಲಿ ತುಂತುರು ಮಳೆ ಬಿಟ್ಟರೆ ಹೆಚ್ಚಿನ ಮಳೆಯಾಗಿಲ್ಲ.. ಆದ್ರೆ ಹಾಸನ, ಗದಗ, ಬೆಳಗಾವಿ, ದಾವಣಗೆರೆ, ಬೀದರ್‌ ಹಾಗೂ ಕೊಪ್ಪಳದಲ್ಲಿ ಮಳೆಯ ಆರ್ಭಟ ಜೋರಾಗಿದೆ..

ಕಲುಬುರಗಿ ಜಿಲ್ಲೆಯ ಹಲವು ಕಡೆ ಭಾರೀ ಮಳೆಯಾಗಿದೆ.. ಭಾಗರೀ ಗಾಳಿಯೊಂದಿಗೆ ಮಳೆಯಾಗಿದ್ದರಿಂದ ದೊಡ್ಡ ಅನಾಹುತ ಆಗಿದೆ.. ಆಳಂದ ತಾಲ್ಲೂಕಿನ ಹೆಚ್ಚು ಮಳೆಯಾಗಿದೆ.. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಜೋರಾಗಿ ಹರಿದಿದ್ದು, ಬೈಕ್‌ಗಳೆಲ್ಲಾ ಕೊಚ್ಚಿಹೋಗಿವೆ.. ಕಜೂರಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದೆ..

ಇನ್ನು ಕಲಬುರಗಿ ಜಿಲ್ಲೆ ನರೋಣ ಗ್ರಾಮದಲ್ಲಿ ಸಿಡಿಲು ಬಡಿದು ಹತ್ತು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕ ಮಹೇಶ್‌ ಎತ್ತಿನ ಬಂಡಿಯಲ್ಲಿ ಮನೆಗೆ ಹೋಗುತ್ತಿದ್ದ. ಈ ವೇಳೆ ಸಿಡಿಲು ಬಡಿದು ದುರಂತ ನಡೆದಿದೆ.. ಬಾಗಲಕೋಟೆ, ತುಮಕೂರು ಮುಂತಾದ ಕಡೆಗಳಲ್ಲಿ ಕೂಡಾ ನಿನ್ನೆ ಮಳೆಯಾಗಿದೆ. ಬೆಂಗಳೂರಿನ ಹಲವು ಕಡೆ ಸಾಧಾರಾಣ ಮಳೆಯಾಗಿದೆ.. ಇವತ್ತು ಕೂಡಾ ಮಳೆಯಾಗುವ ಸಾಧ್ಯತೆ ಇದೆ..

Share Post