CrimeInternational

ಸಾಲ ಪಡೆಯಲು ಚಿಕ್ಕಪ್ಪನ‌ ಹೆಣ ಬ್ಯಾಂಕಿಗೆ ತಂದ ಮಹಿಳೆ

ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ‌ ಕಣ್ಣ ಮುಂದೆ ಸಿಗುತ್ತವೆ. ಅದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಮಹಿಳೆಯೊಬ್ಬರು‌ ಬ್ಯಾಂಕಿನಿಂದ ಸಾಲ ಪಡೆಯಲು ತನ್ನ ಚಿಕ್ಕಪ್ಪನ ಮೃತದೇಹವನ್ನೇ ಬ್ಯಾಂಕಿಗೆ ತಂದಿದ್ದಾಳೆ.

  ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ತನ್ನ‌‌‌ ಚಿಕ್ಕಪ್ಪನ‌ ಹೆಸರಲ್ಲಿ ಬ್ಯಾಂಕ್ ಸಾಲ ಪಡೆಯಲು ಮುಂದಾಗಿದ್ದರು.. ಅದೇ ಸಮಯಕ್ಕೆ‌‌‌ ಅನಾರೋಗ್ಯ ಪೀಡಿತ ಚಿಕ್ಕಪ್ಪ ಸಾವನ್ನಪ್ಪಿದ್ದಾರೆ.. ಆದ್ರೆ ಅದನ್ನು ತೋರಿಸಿಕೊಳ್ಳದೆ ಚಿಕ್ಕಪ್ಪನ ಮೃತದೇಹವನ್ನು ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ತಂದಿದ್ದಾಳೆ. ತೀವ್ರ ಜ್ವರ ಇರುವುದರಿಂದ ಮಾತನಾಡಲು ಅವರಿಗೆ ಕಷ್ಟವಾಗುತ್ತಿದೆ ಎಂದು ಬ್ಯಾಂಕ್ ಸಿಬ್ಬಂದಿಗೆ ಹೇಳಿದ್ದಾಳೆ.

ನಂತರ ದಾಖಲೆಗಳಿಗೆ ಮೃತದೇಹದಿಂದ ಸಹಿ ಹಾಕಿಸಲು ಯತ್ನಿಸಿದ್ದಾಳೆ. ಈ ವೇಳೆ ಮಹಿಳೆಯ ವರ್ತನೆಯಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ, ವೈದ್ಯರನ್ನು ಕರೆಸಿದ್ದಾರೆ. ಆಗ ವೀಲ್ ಚೇರ್ ನಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದು ಖಾತ್ರಿಯಾಗಿದೆ. ಕೂಡಲೇ ಆ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

 

Share Post