Health

ಬೆಂಗಳೂರಲ್ಲಿ ಮತ್ತೊಂದು ರೋಗದ ಗಂಡಾಂತರ; ಏನಿದು ಗ್ಲಾಂಡರ್ಸ್?

ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಲರಾ ಸೋಂಕು‌ ಹೆಚ್ಚಾಗಿ ಹರಡುತ್ತಿದೆ.. ಇದು ಭೀತಿಗೆ ಕಾರಣವಾಗಿದೆ.. ಹೀಗಿರುವಾಗಲೇ ಮತ್ತೊಂದು ಸೋಂಕು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ. ಗ್ಲಾಂಡರ್ಸ ಎಂಬ ಸೋಂಕು ಹರಡುವ ಭೀತಿ ಇದ್ದು, ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ.

  ಗ್ಲಾಂಡರ್ಸ್ ಕಾಯಿಲೆಯಿಂದ ಬೆಂಗಳೂರಿನಲ್ಲಿ ಎರಡು ಕುದುರೆಗಳ ಸಾವನ್ನಪ್ಪಿವೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಮನುಷ್ಯರಿಗೂ ಹರಡುವ ಭೀತಿ ಇದೆ..

  ಬೆಂಗಳೂರಿನ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಗ್ಲಾಂಡರ್ಸ್ ರೋಗಕ್ಕೆ ಎರಡು ಕುದುರೆಗಳು ಸಾವನ್ನಪ್ಪಿವೆ.. ಅದರ ಮಾಲೀಕ ಮಹಾರಾಷ್ಟ್ರದಿಂದ ಆ ಕುದುರೆಗಳನ್ನು ತಂದಿದ್ದ. ಮತ್ತೊಂದು ಕುದುರೆಗೂ ಅದೇ ರೋಗ ಲಕ್ಷಣಗಳಿದ್ದು, ಅದನ್ನು ಕ್ವಾರಂಟೀನ್ ಮಾಡಲಾಗಿದೆ. ಇದರ ಸುತ್ತಮತ್ತಲ 5 ಕಿಲೋ ಮೀಟರ್ ಪ್ರದೇಶವನ್ನು ಸೋಂಕಿತ ಏರಿಯಾ ಎಂದು ಘೋಷಣೆ ಮಾಡಲಾಗಿದೆ.

  ಸೋಂಕು ಹರಡುವ ಭೀತಿ‌‌ ಹಿನ್ನೆಲೆಯಲ್ಲಿ ಕುದುರೆ ಮಾಲೀಕ ಹಾಗೂ ಅವರ ಕುಟುಂಬದವರನ್ನು ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗಿದೆ. ಈ ಕಾಯಿಲೆ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ.. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ.

 

Share Post