CrimeDistricts

ಅಕ್ಕಿ ಮೂಟೆ ತುಂಬಿದ ಲಾರಿ ಪಲ್ಟಿ; ರಸ್ತೆಯಲ್ಲೆಲ್ಲಾ ಅಕ್ಕಿ ಮೂಟೆಗಳು!

ರಾಯಚೂರು; ಅಕ್ಕಿ ಮೂಟೆಗಳನ್ನು ತುಂಬಿದ ಲಾರಿಯೊಂದು ಉರುಳಿಬಿದ್ದಿದ್ದು, ಮೂಟೆಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.. ರಾಯಚೂರು ಜಿಲ್ಲೆ ಸಿಂಧನೂರು ಬಳಿ ಈ ದುರ್ಘಟನೆ ನಡೆದಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ..

ಇದನ್ನೂ ಓದಿ; ಸಚಿವನ ಅತ್ಯಾಪ್ತನ ಮನೆಯಲ್ಲಿ 18 ಕೋಟಿ ರೂ. ಪತ್ತೆ!; ಏನೋ ಹುಡುಕಲು ಹೋದಾಗ..

ಸಿಂಧನೂರಿನ ರಾಯವೂರು ಮುಖ್ಯರಸ್ತೆಯ ಹಳ್ಳದಲ್ಲಿ ಅಕ್ಕಿ ಲಾರಿ ಪಲ್ಟಿಯಾಗಿದೆ.. ಲಾರಿ ನಡು ರಸ್ತೆಯಲ್ಲೇ ಬಿದ್ದಿದೆ.. ಇದರಿಂದಾಗಿ ಕೆಲಕಾಲ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು.. ಅನಂತರ ಕ್ರೇನ್‌ ಮೂಲಕ ಲಾರಿಯನ್ನು ಎತ್ತಿ ಪಕ್ಕಕ್ಕಿಡಲಾಯಿತು..

ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿವೆ.. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; ಈ ಹಾಲು ಕುಡಿದರೆ‌‌ ಬೇಗ ನಿದ್ದೆ ಬರುತ್ತೆ; ಆರೋಗ್ಯಕ್ಕೂ ಸಂಜೀವಿನಿ

 

Share Post