ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧಾರ
ಕೇರಳ : ಮಲಯಾಳಂ ಚಿತ್ರದ ನಿರ್ದೇಶಕ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದಾರೆ. ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದಂತೆ ಕೆಲವು ಮುಸ್ಲಿಮರು ಖುಷಿಯನ್ನು ವ್ಯಕ್ತಪಡಿಸಿದ್ದೇ ಇದಕ್ಕೆ ಕಾರಣವಾಗಿದೆ.
ಕೆಲವು ಮುಸ್ಲಿಮರು ಮಾಡಿದ ಹೀನ ಕೃತ್ಯವನ್ನು ಯಾವ ಮುಸ್ಲಿಂ ನಾಯಕರೂ ಖಂಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಮತ್ತು ನನ್ನ ಹೆಂಡ್ತಿ ಯಾವುದೇ ಕಾರಣಕ್ಕೂ ಮುಸ್ಲಿಂ ಧರ್ಮದವರಾಗಿ ಮುಂದುವರೆಯುವುದಿಲ್ಲ ಎಂದು ಫೇಸ್ಬುಕ್ ಅಲ್ಲಿ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಭಾರತದ ವಿರುದ್ಧ ನಗುವ ಎಮೋಜಿಗಳನ್ನು ಪೋಸ್ಟ್ ಮಾಡುವವರಿಗೆ ಇದೇ ನನ್ನ ಉತ್ತರ ಎಂದು ಆಕ್ರೋಶ ಹೊರಹಾಕಿದ್ದಾರೆ.