Politics

2021ರ ಕರ್ನಾಟಕ ವಿಧಾನಪರಿಷತ್‌ ಚುನಾವಣೆಗೆ ತೆರೆ

ಬೆಂಗಳೂರು: 2021ರ ಕರ್ನಾಟಕ ರಾಜ್ಯ ವಿಧಾನಪರಿಷತ್‌ ಮತದಾನಕ್ಕೆ ತೆರೆಬಿದ್ದಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೂ ಮತದಾನ ಕಾರ್ಯ ಸುಗಮವಾಗಿ ನಡೆದಿದೆ. ರಾಜ್ಯದ 25 ಕ್ಷೇತ್ರಗಳಲ್ಲಿ 6.073 ಮತಗಟ್ಟೆಗಳಲ್ಲಿ ಹಕ್ಕುಚಲಾವಣೆ ನಡೆದಿದೆ.  90 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಪ್ರಭು ನಿರ್ಧಾರ ಮಾಡಿದ್ದಾನೆ.  ಒಟ್ಟು 98,846 ಮತದಾರರಿದ್ದು, ಶಾಸಕರು,  ಸಂಸದರು, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಿದ್ದಾರೆ. ಡಿಸೆಂಬರ್ 14ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲಾ ಮತಗಟ್ಟೆಗಳಲ್ಲು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

Share Post