Health

ರಣ ಬಿಸಿಲಿಗೆ ಬಲಿಯಾಯ್ತಾ ಬಡ ಜೀವ..?; ಕೂಲಿ ಕೆಲಸದ ವೇಳೆ ಕುಸಿದುಬಿದ್ದು ಸಾವು!

ಕಲಬುರಗಿ; ಬಿಸಿಲ ಬೇಗೆ ಹೆಚ್ಚುತ್ತಿದೆ.. ಅದರಲ್ಲೂ ಕೂಡಾ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ 40 ಡಿಗ್ರಿಗೂ ಹೆಚ್ಚಾಗಿದೆ.. ಇದರಿಂದಾಗಿ ಜನ ಆಚೆಗೆ ಬರೋದಕ್ಕೂ ಹೆಸರುವಂತಹ ಪರಿಸ್ಥಿತಿ.. ಇಂತಹ ಸ್ಥಿತಿಯಲ್ಲೇ ಕೂಲಿ ಕಾರ್ಮಿಕನೊಬ್ಬ ಕುಸಿದುಬಿದ್ದ ಸಾವನ್ನಪ್ಪಿದ್ದಾನೆ.. ಬಿಸಿಲ ಬೇಗೆ ತಾಳದೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ..

ಇದನ್ನೂ ಓದಿ; ಮೀನು ಅಡುಗೆ ಮಾಡುವಾಗ ವಾಸನೆ ಬರ್ತಿದೆಯಾ..?; ಹಾಗಾದ್ರೆ ಹೀಗೆ ಮಾಡಿ..

ನರೇಗಾ ಕೆಲಸ ಮಾಡುವಾಗ ಸಾವು;

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರು ಗ್ರಾಮದಲ್ಲಿ ಇಂತದ್ದೊಂದು ದಾರುಣ ಘಟನೆ ನಡೆದಿದೆ.. ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಲಾಗುತ್ತಿತ್ತು.. ಈ ವೇಳೆ 42 ವರ್ಷದ ಶರಣಪ್ಪ ಸಮಗಾರ ಎಂಬುವವರು ಕುಸಿದುಬಿದ್ದಿದ್ದಾರೆ.. ಅಲ್ಲೇ ಸಾವನ್ನಪ್ಪಿದ್ದಾನೆ.. ಈ ಭಾಗದಲ್ಲಿ ಬಿಸಿಲ ಧಗೆ ಹೆಚ್ಚಾಗಿದೆ.. ಇದರ ನಡುವೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಕೂಲಿ ಕೆಲಸ ಮಾಡಲೇಬೇಕಾಗಿದೆ.. ಹೀಗಾಗಿ ಶರಣಪ್ಪ ಸಮಗಾರ ಬಿಸಿಲ ನಡುವೆಯೂ ಕೂಲಿ ಕೆಲಸ ಮಾಡುತ್ತಿದ್ದರು.. ಈ ವೇಳೆ ಆಯಾಸವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ; ಬಾಡಿಗೆ ವಿಲ್ಲಾದಲ್ಲಿ ನೀಲಿ ಚಿತ್ರ ಚಿತ್ರೀಕರಣ; ಬಲೆಗೆ ಬಿತ್ತು ಖತರ್ನಾಕ್‌ ಗ್ಯಾಂಗ್‌

ಆಯಾಸದಿಂದ ಹೃದಯಾಘಾತವಾಗಿ ಸಾವು;

ಬಿಸಿಲಿನ ತಾಪ ಹೆಚ್ಚಾಗಿ ಶರಣಪ್ಪ ಸಮಗಾರ ಅವರಿಗೆ ಹೃದಯಾಘಾತವಾಗಿದೆ.. ಎಲ್ಲರೂ ನೋಡನೋಡುತ್ತಿದ್ದಂತೆ ಅವರು ಕುಸಿದುಬಿದ್ದಿದ್ದಾರೆ.. ಅತಿಯಾದ ಬಿಸಿಲೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.. ನರೋಣಾ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ ; ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!

 

Share Post