ಹೆಚ್ಚು ಕಾಲ ಬದುಕಬೇಕೇ..?; ಸಿಂಪಲ್.. ಇಷ್ಟು ಮಾಡಿ ಸಾಕು..!
ಹೆಚ್ಚು ಕಾಲ ಬದುಕ ಬೇಕು ಅಂತ ಯಾರಿಗೆ ಇಷ್ಟ ಇರೋದಿಲ್ಲ.. ಎಲ್ಲರಿಗೂ ದೀರ್ಘಾಯುಷಿಗಳಾಗುವ ಆಸೆ.. ಅದಕ್ಕಾಗಿ ಹಲವರು ತಮ್ಮ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿರುತ್ತಾರೆ.. ಆದರೂ ಕೂಡಾ, ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ಅಥವಾ ಅನಿವಾರ್ಯ ಕಾರಣಕ್ಕಾಗಿ ಮಾಡುವ ತಪ್ಪುಗಳು ನಮ್ಮ ಆರೋವನ್ನು ಕೆಡಿಸುತ್ತವೆ.. ತಜ್ಞರು ಹೇಳುವ ಪ್ರಕಾರ ನಡೆದರೆ ನಿಜವಾಗಿಯೂ ನಾವು ಹೆಚ್ಚು ಕಾಲ ಬದುಕಬಹುದು.. ಶತಾಯುಷಿಗಳೂ ಆಗಬಹುದು.. ಇದಕ್ಕಾಗಿ ನೀವು ಕೆಲವು ಅಭ್ಯಾಸಗಳನ್ನು ತ್ಯಜಿಸಬೇಕಾಗುತ್ತದೆ ಅಷ್ಟೆ.. ನಾವು ಹೇಳುವ ಈ ಅಭ್ಯಾಸಗಳನ್ನು ತ್ಯಜಿಸಿದರೆ ಖಂಡಿತವಾಗಿಯೂ ದೀರ್ಘ ಕಾಲದ ಬದುಕು ನಿಮ್ಮದಾಗುತ್ತದೆ.
ಯಾವುದೇ ಕಾರಣಕ್ಕೂ ಸಂಸ್ಕರಿಸಿದ ಆಹಾರ ಬೇಡ;
ಸಂಸ್ಕರಿಸಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇವುಗಳಲ್ಲಿ ಹೆಚ್ಚಾದ ಉಪ್ಪು ಮತ್ತು ಕೊಬ್ಬು ಆರೋಗ್ಯಕ್ಕೆ ಹಾನಿಕಾರಕ. ಕಾಲಾನಂತರದಲ್ಲಿ ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ತಜ್ಞರು ದೀರ್ಘಕಾಲ ಆರೋಗ್ಯವಾಗಿರಲು, ನೀವು ಸಂಸ್ಕರಿಸಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಹೇಳುತ್ತಾರೆ.
ಮದ್ಯಪಾನದಿಂದ ದೂರವಿರುವುದು ಒಳ್ಳೆಯದು;
ಹೆಚ್ಚು ಕಾಲ ಬದುಕಬೇಕೆಂದರೆ ಮದ್ಯಪಾನದಿಂದ ದೂರವಿರಬೇಕು ಎನ್ನುತ್ತಾರೆ ತಜ್ಞರು. ಮದ್ಯಪಾನವು ಯಕೃತ್ತಿನಿಂದ ಪ್ರಾರಂಭಿಸಿ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಧೂಮಪಾನವು ಆರೋಗ್ಯವನ್ನು ತ್ವರಿತವಾಗಿ ಹಾಳುಮಾಡುವ ಅಂಶವಾಗಿದೆ. ಧೂಮಪಾನವು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದಲೇ ಹೆಚ್ಚು ಕಾಲ ಬದುಕಬೇಕೆಂದರೆ ಧೂಮಪಾನವನ್ನು ಖಂಡಿತ ಬಿಡಬೇಕು ಎನ್ನುತ್ತಾರೆ ತಜ್ಞರು.
ಗಂಟೆಗಟ್ಟಲೆ ಒಂದೇ ಕಡೆ ಕೂರುವುದು ತಪ್ಪು;
ಒಂದೇ ಕಡೆ ಗಂಟೆಗಟ್ಟಲೆ ಕೂರುವುದನ್ನು ಬಿಡಬೇಕು ಎನ್ನುತ್ತಾರೆ ತಜ್ಞರು. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದಲೂ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಪ್ರತಿ ಎರಡು ಗಂಟೆಗೆ ಒಮ್ಮೆಯಾದರೂ ಎದ್ದು ನಡೆಯಿರಿ ಎನ್ನುತ್ತಾರೆ ತಜ್ಞರು.
ನಿದ್ದೆಗೆಡುವುದು ಕುಡಾ ತಪ್ಪು;
ಯಾವುದೇ ಸಂದರ್ಭದಲ್ಲೂ ನಿದ್ರೆಯನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ತಜ್ಞರು. ನಿದ್ರಾಹೀನತೆಯು ಅನಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು.
ಮಾನಸಿಕ ಒತ್ತಡ ಇರಬಾರದು;
ಒತ್ತಡದ ಜೀವನವೂ ಅನಾರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ಸಮಸ್ಯೆಗಳನ್ನೂ ಉಂಟುಮಾಡಬಹುದು. ಅದಕ್ಕಾಗಿಯೇ ಒತ್ತಡವನ್ನು ಕಡಿಮೆ ಮಾಡುವ ಯೋಗ ಮತ್ತು ಧ್ಯಾನದಂತಹವುಗಳಿಗೆ ನೀವು ಒಗ್ಗಿಕೊಳ್ಳಬೇಕು.
ಎಣ್ಣೆ ಪದಾರ್ಥಗಳಿಂದ ದೂರವಿರಿ;
ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಎಣ್ಣೆ ಹೆಚ್ಚಿರುವ ಆಹಾರಗಳನ್ನು ತ್ಯಜಿಸಿ ಮತ್ತು ನಾರಿನಂಶವಿರುವ ಆಹಾರವನ್ನು ಸೇವಿಸಿ.