ಬಹುತೇಕ ಇವರಿಗೇ ಕಾಂಗ್ರೆಸ್ ಟಿಕೆಟ್ ಫೈನಲ್; 21 ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಟಿಕೆಟ್..?
ಬೆಂಗಳೂರು; ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ.. ಕಾಂಗ್ರೆಸ್ನ ಮೂರನೇ ಪಟ್ಟಿ ಅಂತಿಮಗೊಳಿಸುವುದಕ್ಕಾಗಿ ಈ ಸಭೆ ನಡೆಸಲಾಗುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಉಳಿದ 21 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿತ್ತು. ಇದೀಗ ಆ ಕ್ಷೇತ್ರಗಳಿಗೂ ರಾಜ್ಯ ನಾಯಕರು ಸಂಭಾವ್ಯರನ್ನು ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ನೀಡಿದ್ದಾರೆ. ಇಂದು ಎಲ್ಲಾ 21 ಕ್ಷೇತ್ರಗಳಿಗೂ ಅಂತಿಮ ಮುದ್ರೆ ಬೀಳಲಿದೆ.. ಇಂದು ಅಥವಾ ನಾಳೆಯೊಳಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು ಇವರೇ ನೋಡಿ;
ಬೆಂಗಳೂರು ಉತ್ತರ – ಪ್ರೊ.ರಾಜೀವ್ಗೌಡ
ಬೆಂಗಳೂರು ಸೆಂಟ್ರಲ್ -ಮನ್ಸೂರ್ ಆಲಿ ಖಾನ್
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಕಲಬುರಗಿ -ರಾಧಾಕೃಷ್ಣ ದೊಡ್ಡಮನಿ
ಕೋಲಾರ -ಕೆ.ಎಚ್.ಮುನಿಯಪ್ಪ/ ಡಾ.ಎಲ್.ಹನುಮಂತಯ್ಯ
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಮೈಸೂರು -ಎಂ.ಲಕ್ಷ್ಮಣ್
ಚಾಮರಾಜನಗರ -ಸುನಿಲ್ ಬೋಸ್
ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
ಉತ್ತರಕನ್ನಡ -ಅಂಜಲಿ ನಿಂಬಾಳ್ಕರ್
ದಕ್ಷಿಣ ಕನ್ನಡ -ಪದ್ಮರಾಜ್
ಚಿಕ್ಕಮಗಳೂರು- ಉಡುಪಿ -ಜಯಪ್ರಕಾಶ್ ಹೆಗ್ಡೆ
ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ -ಪ್ರಿಯಾಂಕಾ ಜಾರಕಿಹೊಳಿ
ಹುಬ್ಬಳ್ಳಿ -ಧಾರವಾಡ -ವಿನೋದ್ ಅಸೂಟಿ
ಬಾಗಲಕೋಟೆ -ಸಂಯುಕ್ತ ಪಾಟೀಲ್
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಕೊಪ್ಪಳ -ರಾಜಶೇಖರ ಹಿಟ್ನಾಳ/ ಅಮರೇಗೌಡ ಬಯ್ಯಾಪುರ
ರಾಯಚೂರು -ಜಿ. ಕುಮಾರ ನಾಯ್ಕ್
ಬೀದರ್ – ರಾಜಶೇಖರ ಪಾಟೀಲ/ ಸಾಗರ್ ಬಿ. ಖಂಡ್ರೆ
ಬಳ್ಳಾರಿ -ವೆಂಕಟೇಶ ಪ್ರಸಾದ್
ಕೊನೆಗೂ ಒಪ್ಪಿದ ಸೌಮ್ಯಾ ರೆಡ್ಡಿ;
ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿತ್ತು.. ಆದ್ರೆ ಮೊದಲಿಗೆ ಸೌಮ್ಯಾರೆಡ್ಡಿ ಹಾಗೂ ರಾಮಲಿಂಗಾರೆಡ್ಡಿ ಇಬ್ಬರೂ ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ.. ಅಂತಿಮವಾಗಿ ಈಗ ಸೌಮ್ಯಾ ರೆಡ್ಡಿಯವರನ್ನು ಒಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ಸೌಮ್ಯಾರೆಡ್ಡಿಗೆ ಟಿಕೆಟ್ ಅಂತಿಮವಾಗೋದು ಬಹುತೇಕ ಪಕ್ಕಾ ಆಗಿದೆ.
ಚಾಮರಾಜನಗರಕ್ಕೆ ಮಹದೇವಪ್ಪ ಪುತ್ರ;
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಚಿವ ಮಹಾದೇವಪ್ಪ ಅವರಿಗೆ ಸೂಚಿಸಲಾಗಿತ್ತು. ಆದ್ರೆ ಅವರು ನನ್ನ ಪುತ್ರ ಸುನಿಲ್ ಬೋಸ್ಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದರು. ಕೊನೆಗೆ ಮಹಾದೇವಪ್ಪ ಅವರ ಮನವಿಗೆ ಓಗೊಟ್ಟು ಸುನಿಲ್ ಬೋಸ್ ಹೆಸರನ್ನು ಶಿಫಾರಸು ಮಾಡಲಾಗಿದೆ.
ಸತೀಶ್ ಹಾಗೂ ಹೆಬ್ಬಾಳ್ಕರ್ ನಡುವಿನ ತಿಕ್ಕಾಟಕ್ಕೆ ಬ್ರೇಕ್;
ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬೇರೆ ಬೇರೆ ಹೆಸರುಗಳನ್ನು ಸೂಚಿಸಿದ್ದರು. ಇಬ್ಬರೂ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕೊನೆಗೆ ನಾಯಕರು ಇಬ್ಬರಿಗೂ ಸಮಾಧಾನವಾಗುವ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಬೆಳಗಾವಿ ಕ್ಷೇತ್ರದಿಂದ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಆಗಿದೆ.
ಬೆಂಗಳೂರು ಉತ್ತರಕ್ಕೆ ಪ್ರೊ.ರಾಜೀವ್ಗೌಡ;
ಬೆಂಗಳೂರು ಉತ್ತರ ಕ್ಷೇತ್ರದಿಂದ ಪ್ರಿಯ ಕೃಷ್ಣ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿತ್ತು. ಆದ್ರೆ ಅದಕ್ಕೆ ಪ್ರಿಯಕೃಷ್ಣ ಹಾಗೂ ಕೃಷ್ಣಪ್ಪ ಇಬ್ಬರು ಒಪ್ಪಿಲ್ಲ.. ಹೀಗಾಗಿ ನಾಯಕರು ಪ್ರೊ.ರಾಜೀವ್ ಗೌಡರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಇದರ ಜೊತೆಗೆ ಬೆಂಗಳೂರು ಸೆಂಟ್ರಲ್ ಕೇತ್ರದಿಂದ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಲು ಶಿಫಾರಸು ಮಾಡಲಾಗಿದೆ.