Politics

ಚುನಾವಣಾ ಬಾಂಡ್‌ ಮೂಲಕ ದೇಣಿಗೆ; ಯಾವ ಪಕ್ಷಕ್ಕೆ ಎಷ್ಟು ಕೋಟಿ ಸಿಕ್ತು ಗೊತ್ತಾ..?

ನವದೆಹಲಿ; ಕೇಂದ್ರ ಸರ್ಕಾರ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು.. ಈ ಮೂಲಕ ಸಾವಿರಾರು ಕೋಟಿ ರೂಪಾಯಿ ದೇಣಿಗೆಯನ್ನು ರಾಜಕೀಯ ಪಕ್ಷಗಳು ಸಂಗ್ರಹ ಮಾಡಿದ್ದವು.. ಆದ್ರೆ ಇದು ಕಾನೂನು ಬಾಹಿರ ಎಂದು ಕೆಲವರು ಸುಪ್ರೀಂ ಮೊರೆಹೋಗಿದ್ದರಿಂದ ಈ ಯೋಜನೆ ರದ್ದು ಮಾಡಲಾಗಿತ್ತು. ಜೊತೆಗೆ ಇದುವರೆಗೆ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್‌ ಎಸ್‌ಬಿಐ ಬ್ಯಾಂಕ್‌ಗೆ ಸೂಚಿಸಿತ್ತು. ಎಸ್‌ಬಿಐ ನೀಡಿದ ಮಾಹಿತಿಯನ್ನು ಇದೀಗ ಚುನಾವಣಾ ಆಯೋಗ ಬಹಿರಂಗ ಮಾಡಿದೆ. ಕೋರ್ಟ್‌ ಸೂಚನೆಯಂತೆ, ತನ್ನ ವೆಬ್‌ ಸೈಟ್‌ ನಲ್ಲಿ ದೇಣಿಗೆ ನೀಡಿರುವವರ ಮಾಹಿತಿಯನ್ನು ಪ್ರಕಟ ಮಾಡಿದೆ.

ಏಪ್ರಿಲ್​ 2019ರಿಂದ ಜನವರಿ 2024ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲಾಗಿತ್ತು. ಎಸ್‌ಬಿಐ ಬ್ಯಾಂಕ್‌ ಮೂಲಕ ಮಾತ್ರ ಈ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಇದೀಗ ಅದರ ವಿವರ ಬಹಿರಂಗ ಮಾಡಲಾಗಿದೆ.

ಮಾಹಿತಿ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ..?

================================

ಭಾರತೀಯ ಜನತಾ ಪಕ್ಷ   -6,061 ಕೋಟಿ ರೂಪಾಯಿ

ಅಖಿಲ ಭಾರತ ತೃಣಮೂಲ ಕಾಂಗ್ರೆಸ್  – 1,610 ಕೋಟಿ ರೂಪಾಯಿ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  – 1,422 ಕೋಟಿ ರೂಪಾಯಿ

ಭಾರತ ರಾಷ್ಟ್ರ ಸಮಿತಿ    –  1,215 ಕೋಟಿ ರೂಪಾಯಿ

ಬಿಜು ಜನತಾ ದಳ       – 776 ಕೋಟಿ ರೂಪಾಯಿ

ಡಿಎಂಕೆ                    – 639 ಕೋಟಿ ರೂಪಾಯಿ

ವೈಎಸ್ಆರ್ ಕಾಂಗ್ರೆಸ್ ಪಕ್ಷ      – 337 ಕೋಟಿ ರೂಪಾಯಿ

ತೆಲುಗು ದೇಶಂ ಪಕ್ಷ                 – 219 ಕೋಟಿ ರೂಪಾಯಿ

ಶಿವಸೇನಾ (ರಾಜಕೀಯ ಪಕ್ಷ)       – 158 ಕೋಟಿ ರೂಪಾಯಿ

ರಾಷ್ಟ್ರೀಯ ಜನತಾದಳ                  – 73 ಕೋಟಿ ರೂಪಾಯಿ

ಆಮ್ ಆದ್ಮಿ ಪಕ್ಷ                           – 65   ಕೋಟಿ ರೂಪಾಯಿ

ಜನತಾ ದಳ (ಸೆಕ್ಯುಲರ್)                  – 44  ಕೋಟಿ ರೂಪಾಯಿ

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ           – 37   ಕೋಟಿ ರೂಪಾಯಿ

ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ        – 31   ಕೋಟಿ ರೂಪಾಯಿ

ಜನಸೇನಾ- ಪಕ್ಷ                                    – 21    ಕೋಟಿ ರೂಪಾಯಿ

ಅಧ್ಯಕ್ಷ ಸಮಾಜವಾದಿ ಪಕ್ಷ                – 14 ಕೋಟಿ ರೂಪಾಯಿ

ಬಿಹಾರ ಪ್ರದೇಶ ಜನತಾ ದಳ(ಯುನೈಟೆಡ್)    – 14  ಕೋಟಿ ರೂಪಾಯಿ

ಜಾರ್ಖಂಡ್ ಮುಕ್ತಿ ಮೋರ್ಚಾ                         – 14  ಕೋಟಿ ರೂಪಾಯಿ

ಶಿರೋಮಣಿ ಅಕಾಲಿ ದಳ                                   – 7   ಕೋಟಿ ರೂಪಾಯಿ

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ    – 6  ಕೋಟಿ ರೂಪಾಯಿ

ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್                                        – 6 ಕೋಟಿ ರೂಪಾಯಿ

ಶಿವಸೇನೆ                                                                          – 1  ಕೋಟಿ ರೂಪಾಯಿ

ರಾಷ್ಟ್ರೀಯ ಜನತಾದಳ                                                – 1  ಕೋಟಿ ರೂಪಾಯಿ

ಮಹಾರಾಷ್ಟ್ರವಾದಿ ಗೋಮ್ತಾಕ್ ಪಕ್ಷ                            – 1 ಕೋಟಿ ರೂಪಾಯಿ

ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್​ ಕಾನ್ಫರೆನ್ಸ್             – 1 ಕೋಟಿ ರೂಪಾಯಿ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಪ್ರದೇಶ   – 1 ಕೋಟಿ ರೂಪಾಯಿ

 

ಇವರೇ ನೋಡಿ ಅತಿಹೆಚ್ಚು ದೇಣಿಗೆ ಕೊಟ್ಟ ದಾನಿಗಳು;

==================================

  1. ಫ್ಯೂಚರ್​ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್​​ PR –  1,368 ಕೋಟಿ
  2. ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ –  966 ಕೋಟಿ
  3. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ –  410 ಕೋಟಿ
  4. ವೇದಾಂತ ಲಿಮಿಟೆಡ್ –  400 ಕೋಟಿ
  5. ಹಲ್ದಿಯಾ ಎನರ್ಜಿ ಲಿಮಿಟೆಡ್ –  377 ಕೋಟಿ
  6. ಭಾರ್ತಿ ಗ್ರೂಪ್ –  247 ಕೋಟಿ
  7. ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ –  224 ಕೋಟಿ
  8. ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ –  220 ಕೋಟಿ
  9. ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ –  195 ಕೋಟಿ
  10. ಮದನ್‌ಲಾಲ್ ಲಿಮಿಟೆಡ್ –  185 ಕೋಟಿ
Share Post