BengaluruCrime

ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಬಳ್ಳಾರಿ ಮಾಡ್ಯೂಲ್‌; ಶಂಕಿತ ನಾಲ್ವರು ಹೇಳಿದ್ದೇನು..?

ಬೆಂಗಳೂರು; ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಹಿಂದೆ ಐಸಿಸ್‌ ಬಳ್ಳಾರಿ ಮಾಡ್ಯೂಲ್‌ ಇದೆ ಅನ್ನೋದು ಬಹುತೇಕ ಕನ್ಫರ್ಮ್‌ ಆಗಿದೆ. ಶಂಕಿತ ಉಗ್ರ ಬಳ್ಳಾರಿ ಅಥವಾ ಪುಣೆಯಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಬಳ್ಳಾರಿ ಹಾಗೂ ಪುಣೆಯಲ್ಲಿ ಎನ್‌ಐಎ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. 2023 ಡಿಸೆಂಬರ್ 14ರಂದು ಕರ್ನಾಟಕದ ಬಳ್ಳಾರಿ ಸೇರಿ ವಿವಿಧ ಕಡೆ ಎನ್‌ಐಎ ದಾಳಿ ಮಾಡಿತ್ತು. ಈ ವೇಳೆ ಎಂಟು ಮಂದಿಯನ್ನು ಬಂಧಿಸಿ, ದೇಶದ ವಿವಿಧ ಜೈಲುಗಳಲ್ಲಿಡಲಾಗಿತ್ತು. ಅನುಮಾನದ ಮೇರೆಗೆ ಇವರಲ್ಲಿ ನಾಲ್ವರ ಬಾಡಿ ವಾರಂಟ್‌ ಪಡೆದು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಐಸಿಸ್‌ ನಂಟಿರುವ ಬಳ್ಳಾರಿ ಮಾಡ್ಯೂಲ್‌ ತಂಡದಿಂದ ಈ ಕೃತ್ಯ ನಡೆದಿರುವ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ದಿನ ಶಂಕಿತ ಉಗ್ರ ಪುಣೆಗೆ ಹೋಗುವ ಬಸ್‌ ಹತ್ತಿದ್ದ. ಆತ ಬಳ್ಳಾರಿಯ ಬಸ್ ನಿಲ್ದಾಣದಲ್ಲಿ ಅಂದು ರಾತ್ರಿ 8.58ಕ್ಕೆ ಕಾಣಿಸಿಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮುಂದೆ ಎಲ್ಲಿಗೆ ಪ್ರಯಾಣ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಿರುವಾಗಲೇ 2023 ಡಿಸೆಂಬರ್ 14ರಂದು ಬಳ್ಳಾರಿಯಲ್ಲಿ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದ ಶಂಕಿತ ಉಗ್ರ ಮಿನಾಜ್‌ ಅಲಿಯಾಸ್‌ ಸುಲೈಮಾನ್‌ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಬಾಡಿ ವಾರಂಟ್‌ ಪಡೆದು ಬಳ್ಳಾರಿ ಜೈಲಿನಲ್ಲಿದ್ದ ಮೀನಾಜ್‌ ಅಲಿಯಾಸ್‌ ಸುಲೈಮಾನ್‌ನನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನಿಂದ ಸಿಕ್ಕ ಮಾಹಿತಿ ಮೇರೆಗೆ ಬೆಂಗಳೂರು, ಮುಂಬೈ, ದೆಹಲಿ ಜೈಲುಗಳಲ್ಲಿದ್ದ ಮೂವರು ಶಂಕಿತ ಉಗ್ರರನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಐಸಿಸ್‌ ಬಳ್ಳಾರಿ ಮಾಡ್ಯೂಲ್‌ ಮುಖ್ಯಸ್ಥನಾಗಿದ್ದ ಮೀನಾಜ್‌ ಅಲಿಯಾಸ್‌ ಸುಲೈಮಾನ್‌ ಹಾಗೂ ಬೆಂಗಳೂರು ಜೈಲಿನಲ್ಲಿದ್ದ ಬಳ್ಳಾರಿಯ ಸೈಯದ್ ಸಮೀರ್, ಮುಂಬೈ ಜೈಲಿನಲ್ಲಿದ್ದ ಅನಾಸ್ ಇಕ್ಬಾಲ್ ಶೇಕ್ ಮತ್ತು ದೆಹಲಿಯ ಜೈಲಿನಲ್ಲಿ ಶ್ಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಎಂಬುವವರನ್ನು ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಐಸಿಸ್‌ ಬಳ್ಳಾರಿ ಮಾಡ್ಯೂಲ್‌ ಮುಖ್ಯಸ್ಥನಾಗಿದ್ದ ಮೀನಾಜ್‌ ಅಲಿಯಾಸ್‌ ಸುಲೈಮಾನ್‌ ಬಳ್ಳಾರಿಯಲ್ಲಿ ಐಸಿಸ್‌ ಗ್ಯಾಂಗ್‌ ಕಟ್ಟಿದ್ದ.. ಬಡ ಮುಸ್ಲಿಂ ಯುವಕರನ್ನು ಟಾರ್ಗೆಟ್ ಮಾಡಿ ಅವರ ಬ್ರೈನ್‌ ವಾಶ್‌ ಮಾಡುತ್ತಿದ್ದ. ಇದಕ್ಕೂ ಮೊದಲು ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯನಾಗಿ ಕೆಲಸ ಮಾಡಿದ್ದ ಮೀನಾಜ್‌, ಭಾರತದಲ್ಲಿ ಪಿಎಫ್ಐ ನಿಷೇಧದ ಬಳಿಕ ಐಸಿಎಸ್ ಜೊತೆ ಸಂಪರ್ಕ ಬೆಳೆಸಿದ್ದ. ಐಸಿಸ್‌ ಬಳ್ಳಾರಿ ಮಾಡ್ಯೂಲ್‌ ನಾಯಕ ಎಂದೇ ಗುರುತಿಸಿಕೊಂಡಿದ್ದ ಮೀನಾಜ್‌, ಯುವಕರನ್ನು ಐಸಿಸ್‌ಗೆ ಸೇರಿಸುವ ಹೊಣೆ ಹೊತ್ತುಕೊಂಡಿದ್ದ. ಇದರಿಂದಾಗಿಯೇ ಮಿನಾಜ್​ಗೆ ಐಎಸ್​ನಲ್ಲಿ ಬಳ್ಳಾರಿಯ ಮಾಡ್ಯೂಲ್ ಅಧ್ಯಕ್ಷನ ಪಟ್ಟ ನೀಡಲಾಗಿತ್ತು. ಕೇವಲ 26 ವರ್ಷಕ್ಕೆ ಉಗ್ರ ಸಂಘಟನೆ ಕಟ್ಟಿದ್ದ ಮೀನಾಜ್,​ ನಮಾಜ್ ಮಾಡಲು ಮಸೀದಿಗೆ ಬರುತ್ತಿದ್ದ ಅಮಾಯಕ ಹುಡುಗರ ತಲೆಗೆ ಹುಳ ಬಿಡುತ್ತಿದ್ದ. ಅಜಾದಿ ಹೆಸರಲ್ಲಿ ಬ್ರೈನ್ ವಾಷ್ ಮಾಡುತ್ತಿದ್ದ. ಇದರಲ್ಲಿ ಪ್ರಮುಖವಾಗಿ ಪಿಎಫ್‌ಐ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದ್ದ. ಈಗಾಗಲೇ ಶಂಕಿ ನೂರಾರು ಮಂದಿಯ ಬ್ರೈನ್ ವಾಷ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

2023 ಡಿಸೆಂಬರ್ 14ರಂದು ಬಳ್ಳಾರಿಯಲ್ಲಿ ದಾಳಿ ಮಾಡಿದ ವೇಳೆ ಒಂದಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಜೈಲಿನಲ್ಲಿದ್ದ ಮೀನಾಜ್‌ ಸುಲೈಮಾನ್‌ ಸೂಚನೆ ಮೇರೆಗೆ ತಪ್ಪಿಸಿಕೊಂಡಿದ್ದವರೇ ರಾಮೇಶ್ವರಂ ಕೆಫೆ ಮೇಲೆ ದಾಳಿ ಮಾಡರಬಹುದು ಎಂದು ಶಂಕಿಸಲಾಗಿದೆ. ಅಂದಹಾಗೆ, ಐಸಿಸಿ ಬಳ್ಳಾರಿ ಮಾಡ್ಯೂಲ್‌ ಮುಖ್ಯಸ್ಥ ಮೀನಾಜ್‌ ಅಲಿಯಾಸ್‌ ಸುಲೈಮಾನ್ ತಂದೆ ಬಳ್ಳಾರಿಯಲ್ಲಿ ಬಟ್ಟೆ ಅಂಗಡಿ ನಡೆಸ್ತಿದ್ದಾರೆ. ತಾಯಿಯೂ, ತಂದೆಯ ಜೊತೆಗೆ ಅಂಗಡಿಯಲ್ಲಿ ಕೆಲಸಕ್ಕೆ ನೆರವಾಗುತ್ತಿದ್ದಾರೆ. ಮೀನಾಜ್‌ ಅಲಿಯಾಸ್‌ ಸುಲೈಮಾನ್ ಅಣ್ಣ ಗೋವಾಗೆ ಕೆಲಸಕ್ಕೆ ಹೋಗಿದ್ದ. ಅಲ್ಲಿದ್ದಾಗ ಅಪಘಾತವಾಗಿ ಗಾಯಗೊಂಡು ವಾಪಾಸ್ ಊರಿಗೆ ಬಂದಿದ್ದ. ಬಳಿಕ ತಂದೆಗೆ ಸಹಾಯ ಮಾಡ್ತಾ ಬಳ್ಳಾರಿಯಲ್ಲೇ ಇದ್ದಾನೆ. ಸುಲೈಮಾನ್ ತಂಗಿ ತುಮಕೂರಿನಲ್ಲಿ MBBS ವ್ಯಾಸಂಗ ಮಾಡ್ತಿದ್ದಾಳೆ ಎಂದು ತಿಳಿದುಬಂದಿದೆ.

Share Post