Politics

BJP List; 12 ಹಾಲಿ ಸಂಸದರಿಗೆ ಟಿಕೆಟ್‌ ಸಿಗೋದಿಲ್ಲ?; ಹೊಸ ಮುಖಗಳು ಯಾರು..?

ಬೆಂಗಳೂರು; ನಿನ್ನೆ ದೆಹಲಿಯಲ್ಲಿ ತಡರಾತ್ರಿಯವರೆಗೂ ಬಿಜೆಪಿ ನಾಯಕರ ಸಭೆ ನಡೆದಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಸಿದ್ಧಪಡಿಸುವ ಸಂಬಂಧ ಈ ಸಭೆ ನಡೆಸಲಾಗಿದೆ. ಅದರಲ್ಲೂ ಕೂಡಾ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ರಾಜ್ಯದಿಂದ ಆರ್‌.ಅಶೋಕ್‌, ವಿಜಯೇಂದ್ರ, ಯಡಿಯೂರಪ್ಪ ಪಾಲ್ಗೊಂಡಿದ್ದರು. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ. ರಾಜ್ಯದಲ್ಲಿ ಹಾಲಿ 25 ಬಿಜೆಪಿ ಸಂಸದರಿದ್ದಾರೆ. ಈ ಬಾರಿ ಮೈತ್ರಿಕೂಟದಿಂದ 28ಕ್ಕೆ 28ಸ್ಥಾನಗಳಲ್ಲೂ ಗೆಲ್ಲಲು ಕಸರತ್ತು ನಡೆಯುತ್ತಿವೆ.

ಹಾಲಿ ಸಂಸದರಿಗೆ ಟಿಕೆಟ್‌ ಸಿಗೋದಿಲ್ಲವೇ..?;

ಹಾಲಿ ಸಂಸದರಿಗೆ ಟಿಕೆಟ್‌ ಸಿಗೋದಿಲ್ಲವೇ..?; ರಾಜ್ಯದಲ್ಲಿ ಈಗ 25 ಹಾಲಿ ಬಿಜೆಪಿ ಸಂಸದರಿದ್ದಾರೆ. ಇದರಲ್ಲಿ ಕೆಲವರು ಸ್ವ ಇಚ್ಛೆಯಿಂದ ಚುನಾವಣಾ ಕಣದಿಂದ ದೂರ ಉಳಿಯುತ್ತಿದ್ದಾರೆ. ಇನ್ನು ಕೆಲ ಸಂಸದರ ಸ್ಪರ್ಧೆಗೆ ವಿರೋದ ವ್ಯಕ್ತವಾಗುತ್ತಿದೆ. ಕೆಲವರಿಗೆ ವಯಸ್ಸಾಗಿದೆ. ಇನ್ನು ಕೋಲಾರದಂತಹ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಧದಷ್ಟು ಹಾಲಿ ಸಂಸದರಿಗೆ ಟಿಕೆಟ್‌ ಕೈತಪ್ಪಬಹುದು ಎಂದು ಹೇಳಲಾಗುತ್ತಿದೆ.

ಯಾರಿಗೆ ಟಿಕೆಟ್‌ ಕೈತಪ್ಪಬಹುದು..?

ಬೀದರ್‌ – ಭಗವಂತ ಖೂಬಾ
ದಾವಣಗೆರೆ – ಜಿ.ಎಂ.ಸಿದ್ದೇಶ್ವರ್‌
ವಿಜಯಪುರ – ರಮೇಶ್‌ ಜಿಗಜಿಗಣಿ
ಬೆಳಗಾವಿ – ಮಂಗಳಾ ಅಂಗಡಿ
ಬೆಂಗಳೂರು ಉತ್ತರ – ಡಿ.ವಿ.ಸದಾನಂದಗೌಡ
ಉತ್ತರ ಕನ್ನಡ – ಅನಂತ್‌ಕುಮಾರ್‌ ಹೆಗ್ಡೆ
ಬಾಲಗಕೋಟೆ – ಪಿ.ಸಿ.ಗದ್ದಿಗೌಡರ್‌
ದಕ್ಷಿಣ ಕನ್ನಡ – ನಳಿನ್‌ ಕುಮಾರ್‌ ಕಟೀಲ್‌
ಕೊಪ್ಪಳ – ಹರಡಿ ಸಂಗಣ್ಣ
ಚಿತ್ರದುರ್ಗ – ಎ.ನಾರಾಯಣಸ್ವಾಮಿ
ಕೋಲಾರ – ಮುನಿಸ್ವಾಮಿ
ಚಿಕ್ಕಬಳ್ಳಾಪುರ – ಬಚ್ಚೇಗೌಡ
ತುಮಕೂರು – ಜಿ.ಎಸ್‌.ಬಸವರಾಜು
ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ಕೆಲ ಕ್ಷೇತ್ರಗಳಲ್ಲಿ ಟಿಕೆಟ್‌ ಫೈಟ್‌ ಜೋರು..!

ಬೆಂಗಳೂರು ಉತ್ತರ – ಸಪ್ತಗಿರಿ ಗೌಡ, ಮುನಿರಾಜುಗೌಡ, ಸದಾನಂದಗೌಡ, ವಿವೇಕ್‌ ಸುಬ್ಬಾರೆಡ್ಡಿ
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್‌, ಅಲೋಕ್‌ ವಿಶ್ವನಾಥ್‌
ರಾಯಚೂರು – ರಾಜಾ ಅಮರೇಶ್‌ ನಾಯಕ್‌, ಬಿ.ವಿ.ನಾಯಕ್‌
ತುಮಕೂರು – ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ
ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್‌.ಮಂಜುನಾಥ್‌, ಸಿ.ಪಿ.ಯೋಗೇಶ್ವರ್‌

ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಲ್ಲರೂ ಕೂಡಾ ಗೆಲ್ಲಲು ಸಮರ್ಥರಿದ್ದಾರೆ. ಹೀಗಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಹೈಕಮಾಂಡ್‌ ನಾಯಕರಿಗೆ ಗೊಂದಲವಿದೆ. ಹೀಗಾಗಿ ಅಳೆದೂತೂಗಿ ಅಭ್ಯರ್ಥಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಮಾಜಿ ಸಿಎಂಗಳಿಗೆ ಸಿಗುತ್ತಾ ಟಿಕೆಟ್‌..?;

ಮಾಜಿ ಸಿಎಂಗಳಿಗೆ ಸಿಗುತ್ತಾ ಟಿಕೆಟ್‌..?; ಇನ್ನು ಬಿಜೆಪಿ ನಾಯಕರು ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಂಗಳಾ ಅಂಗಡಿಗೆ ಬದಲಾಗಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿಯವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ.

Share Post