Rameshwaram cafe blast; ಬಾಂಬ್ ಸ್ಫೋಟ ಪ್ರಕರಣ; ಶಂಕಿತನ ಚಹರೆ ಪತ್ತೆ!
ಬೆಂಗಳೂರು; ನಿನ್ನೆ ಮಧ್ಯಾಹ್ನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಸಿಟಿವಿಯಲ್ಲಿ ಅನುಮಾನಾಸ್ಪದ ವ್ಯಕ್ತಿಯ ಚಹರೆ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಧರಿಸಿ, ತಲೆಗೆ ಕ್ಯಾಪ್ ಹಾಕಿಕೊಂಡು ಆತುರಾತುರವಾಗಿ ಕೆಫೆ ಬಳಿಯ ರಸ್ತೆಯಲ್ಲಿ ಹೋಗುತ್ತಿರುವುದು ಪತ್ತೆಯಾಗಿದ್ದು, ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿದೆ.
ಇದನ್ನೂ ಓದಿ; ಪಾಕ್ ಪರ ಘೋಷಣೆ ಕೂಗಿದ್ದು ನಿಜ; ಆರೋಪಿ ಪತ್ತೆಗೆ ತಯಾರಿ
1 ಗಂಟೆ ಕಾಲ ಕೆಫೆಯಲ್ಲಿದ್ದ ಅನುಮಾನಿತ ವ್ಯಕ್ತಿ;
1 ಗಂಟೆ ಕಾಲ ಕೆಫೆಯಲ್ಲಿದ್ದ ಅನುಮಾನಿತ ವ್ಯಕ್ತಿ; ರಾಮೇಶ್ವರಂ ಕೆಫೆಗೆ ಶಂಕಿತ ವ್ಯಕ್ತಿ ಶುಕ್ರವಾರ ಬೆಳಗ್ಗೆ 11.15ಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಒಳ್ಳ ಪ್ರವೇಶ ಮಾಡಿದ ಮೇಲೆ ಅಲ್ಲಿ ಇಡ್ಲಿ ತಿಂದಿರುವ ಆತ ಸುಮಾರು 12.10ರವರೆಗೂ ಅಲ್ಲಿಯೇ ತಿರುಗಾಡಿದ್ದಾನೆ. ಆತ ಸೈಡ್ ಬ್ಯಾಗ್ ಒಂದನ್ನು ಭುಜಕ್ಕೆ ನೇತು ಹಾಕಿಕೊಂಡಿದ್ದಾನೆ. ಅದರ ಒಳಗೆ ಇನ್ನೊಂದು ಬ್ಯಾಗ್ ತಂದಿರಬಹುದು ಎಂದು ಹೇಳಲಾಗುತ್ತಿದೆ. ಕೆಫೆಯಲ್ಲಿನ ಸಿಸಿಟಿವಿಗಳು ಎಲ್ಲೆಲ್ಲಿ ಇವೆ ಎಂದು ಪರಿಶೀಲನೆ ಮಾಡಿರುವ ಆತ, ಸಿಸಿಟಿವಿ ಮರೆಯಾಗಿರುವ ವಾಸ್ ಬೇಸಿನ್ ಬಳಿಯ ಡಸ್ಟ್ ಬಿನ್‌ನಲ್ಲಿ ಸ್ಫೋಟಕವಿದ್ದ ಬ್ಯಾಗ್ ಎಸೆದು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಕುಂಬಳಕಾಯಿ ಹೂವು ಸೇವಿಸಿದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಾ..?
ರಸ್ತೆಯಲ್ಲಿ ಆತುರರಾತುರವಾಗಿ ಹೋದ ವ್ಯಕ್ತಿ;
ರಸ್ತೆಯಲ್ಲಿ ಆತುರರಾತುರವಾಗಿ ಹೋದ ವ್ಯಕ್ತಿ; ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪ್ರಕಾರ, ಕೆಫೆಯಲ್ಲಿ ಸ್ಫೋಟಕ್ಕೂ ಕೆಲ ಸಮಯಕ್ಕೆ ಮುಂಚೆ ವ್ಯಕ್ತಿಯೊಬ್ಬ ಕೆಫೆ ಬಳಿಯ ರಸ್ತೆಯಲ್ಲಿ ಆತುರಾತುರವಾಗಿ ನಡೆದುಕೊಂಡು ಹೋಗಿದ್ದಾನೆ. ಆತ ಮುಖಕ್ಕೆ ಮಾಸ್ಕ್ ಧರಿಸಿದ್ದು, ತಲೆ ಮೇಲೆ ಟೋಪಿ ಧರಿಸಿದ್ದಾರೆ. ಗುರುತು ಸಿಗದಿರಲು ಹೀಗೆ ಮಾಡಿರುವ ಸಾಧ್ಯತೆ ಇದೆ. ಕೆಫೆಗೆ ಬಂದು ಒಂದು ಗಂಟೆ ಕಳೆದಿರುವ ವ್ಯಕ್ತಿಗೂ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ವ್ಯಕ್ತಿಗೂ ಸಾಮ್ಯತೆ ಕಾಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಅನುಮಾನಿತ ವ್ಯಕ್ತಿ ಮಧ್ಯಾಹ್ನ 12.10ರ ಸುಮಾರಿಗೆ ಕೆಫೆಯಿಂದ ಹೊರಹೋಗಿದ್ದಾನೆ. ಅದಾದ ಒಂದು ಗಂಟೆಗೆ ಸರಿಯಾಗಿ ಸ್ಫೋಟವಾಗಿದೆ. ಟೈಮರ್ ಬಳಸಿ ಸ್ಫೋಟಕ ತಯಾರಿಸಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; Palav Leaf; ಪಲಾವ್ ಎಲೆಗಳಿಂದ ಮಧುಮೇಹ ನಿಯಂತ್ರಿಸಬಹುದಂತೆ!
ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಇದಕ್ಕೂ ಸಾಮ್ಯತೆ;
ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಇದಕ್ಕೂ ಸಾಮ್ಯತೆ; ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ಫೋಟ ಸಂಭವಿಸಿತ್ತು. ಕುಕ್ಕರ್‌ನಲ್ಲಿ ಸ್ಪೋಟಕವಿಟ್ಟುಕೊಂಡು ಆಟೋದಲ್ಲಿ ತೆರಳುತ್ತಿದ್ದಾಗ ಸ್ಫೋಟವಾಗಿತ್ತು. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದು, ಎಲ್ಲರೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ.. ಆ ಸ್ಫೋಟಕ್ಕೆ ಬಳಸಲಾದ ವಸ್ತುಗಳನ್ನೇ ಈ ಸ್ಫೋಟಕ್ಕೂ ಬಳಸಲಾಗಿದೆ. ಸ್ಫೋಟದ ತೀವ್ರತೆ ಕೂಡಾ ಅದೇ ರೀತಿ ಇದೆ. ಹೀಗಾಗಿ, ಅದೇ ಗ್ಯಾಂಗ್‌ಗೆ ಸಂಬಂಧಿಸಿದ ವ್ಯಕ್ತಿಗಳಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಈ ಸಂಬಂಧವೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ; Bomb Blast; ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ; ಐಜಿಪಿ ಅಲೋಕ್ ಮೋಹನ್
ಆರೋಪಿ ಪತ್ತೆಗಾಗಿ 8 ತಂಡಗಳ ರಚನೆ;
ಆರೋಪಿ ಪತ್ತೆಗಾಗಿ 8 ತಂಡಗಳ ರಚನೆ; ಇನ್ನು ಸರ್ಕಾರ ಹಾಗೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಯ ಪತ್ತೆಯಾಗಿ 8 ತಂಡಗಳ ರಚನೆ ಮಾಡಿದ್ದು, ಬೇರೆಬೇರೆ ಕಡೆ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಆರೋಪಿ ಬಸ್‌ನಲ್ಲಿ ಬಂದು ಸ್ಫೋಟಕ ಇಟ್ಟುಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಆತ ಎಲ್ಲಿ ಹೋಗಿದ್ದಾನೆ. ಹೋಗುವಾಗ ಯಾವ ವಾಹನವನ್ನು ಬಳಸಿದ್ದಾನೆ. ಇತ್ಯಾದಿಗಳ ಬಗ್ಗೆ ಸ್ಥಳೀಯ ಸಿಸಿಟಿವಿಗಳ ಮೂಲಕ ಪರಿಶೀಲಸಿ ಆರೋಪಿಯ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ; Big Breaking; ಬ್ಯಾಗ್‌ನಿಂದ ಸ್ಫೋಟ; ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ಹೇಳಿಕೆ