18 ವರ್ಷಕ್ಕೇ ಯಶಸ್ವಿ ಉದ್ಯಮಿ; ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಆರ್ಯಮಾನ್!
ಬೆಂಗಳೂರು; ಬೆಂಗಳೂರಿಗ ಖ್ಯಾತ ಕೈಗಾರಿಕೋದ್ಯಮ ದಂಪತಿ ಸುನೀತಾ ತಿಮ್ಮೇಗೌಡ ಮತ್ತು ಅಶೋಕ್ ಶಂಕರ್ ಅವರ ಪುತ್ರ ಆರ್ಯಮಾನ್ ಅಶೋಕ್ ಶಂಕರ್ ಕೂಡಾ ತಮ್ಮ ಪೋಷಕರ ಹಾದಿಯಲ್ಲೇ ನಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಉದ್ಯಮ ಕಟ್ಟಿ ಬೆಳೆಸಿದ್ದಾರೆ. 18ರ ವಯಸ್ಸಿನಲ್ಲೇ ಸ್ನೀಕರ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿರುವ ಆರ್ಯಮಾನ್ ಅವರು, ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿ ಹಂಚಿಕೆ;
ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿ ಹಂಚಿಕೆ; ಸಿಂಗಾಪುರದಲ್ಲಿ ವ್ಯಾಸಂಗ ಮಾಡಿಯೇ ಅಲ್ಲಿಯೇ ಉದ್ಯಮ ನಡೆಸುತ್ತಿರುವ ಆರ್ಯಮಾನ್ ಅವರು ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಕೊಳ್ಳೆಗಾಲಕ್ಕೆ ಭೇಟಿ ನೀಡಿದ್ದರು.. ಅಲ್ಲಿ ಅವರು ಸೆವೆಂತ್ ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ವಾಕ್ ಮತ್ತು ಹಿಯರಿಂಗ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಅಲ್ಲದೆ ಆ ವಿದ್ಯಾರ್ಥಿಗಳಿಗೆ ಬೇಕಾದ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿ ಗಮನ ಸೆಳೆದಿದ್ದಾರೆ.
13 ವರ್ಷಕ್ಕೇ ಉದ್ಯಮ ಸ್ಥಾಪಿಸಿದ ಆರ್ಯಮಾನ್;
13 ವರ್ಷಕ್ಕೇ ಉದ್ಯಮ ಸ್ಥಾಪಿಸಿದ ಆರ್ಯಮಾನ್; ಸಿಂಗಾಪುರದ ಎಸಿಎಸ್ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ಅಧ್ಯಯನ ಮಾಡಿದ ಆರ್ಯಮನ್ 13 ನೇ ವಯಸ್ಸಿನಲ್ಲಿ ತಮ್ಮ ಉದ್ಯಮಶೀಲತೆಯ ಪ್ರಯಾಣವನ್ನು ಶುರು ಮಾಡಿದರು. ಚಿಕ್ಕ ವಯಸ್ಸಿನಲ್ಲೇ ತಮ್ಮ ಉದ್ಯಮವನ್ನು ಲಾಭದಾಯಕ ಉದ್ಯಮವಾಗಿ ಬೆಳೆಸಿದರು. ಗಣನೀಯ ಲಾಭದೊಂದಿಗೆ, ಅವರು ರೂ 1000 ಕೋಟಿಯ ಪ್ರಸಾರ ಉದ್ಯಮದಲ್ಲಿ ತೊಡಗಿದರು. ಈಗ 18 ವರ್ಷ ವಯಸ್ಸಿನ ಆರ್ಯಮನ್ ಅವರು ಸಿಂಗಾಪುರದಲ್ಲಿ ಗಮನಾರ್ಹ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.
ಅಜ್ಜಿ ಸಾವಿತ್ರಮ್ಮನವರ ಊರು ಕೊಳ್ಳೆಗಾಲದೊಂದಿಗೆ ಸಂಪರ್ಕ;
ಅಜ್ಜಿ ಸಾವಿತ್ರಮ್ಮನವರ ಊರು ಕೊಳ್ಳೆಗಾಲದೊಂದಿಗೆ ಸಂಪರ್ಕ; ಆರ್ಯಮಾನ್ ಅವರಿಗೆ ಅಜ್ಜಿ ಸಾವಿತ್ರಮ್ಮ ಅಂದರೆ ಪಂಚಪ್ರಾಣ. ಅವರ ಊರಾದ ಕೊಳ್ಳೆಗಾಲಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಬಯಕೆ ಆರ್ಯಮಾನ್ ಅವರದ್ದು. ಈ ಹಿನ್ನೆಲೆಯಲ್ಲಿ ಅವರು ತಮ್ಮ ತಂದೆ-ತಾಯಿಗಳ ಜೊತೆಗೆ ಶಾಲೆಗೆ ಭೇಟಿ ನೀಡಿ ಕ್ರೀಡಾ ಸಾಮಗ್ರಿಗಳನ್ನು ಹಂಚಿಕೆ ಮಾಡಿದ್ದಾರೆ.