LifestyleNational

Marriage Problem; ಸಿಗದ ವಧು – ಬೈಕ್‌ ಮೇಲೆ ಗೊಂಬೆ ಕೂರಿಸಿಕೊಂಡು ಓಡಾಡಿದ ಯುವಕ!

ಇತ್ತೀಚೆಗೆ ಮಂಡ್ಯದ ಕೃಷಿ ಮಾಡುವ ಯುವಕರು ಮದುವೆ ಮಾಡಿಕೊಳ್ಳು ಹುಡುಗಿ ಸಿಗುತ್ತಿಲ್ಲ ಎಂದು ಪ್ರತಿಭಟನೆ ಮಾಡಿದ್ದನ್ನು ನೀವು ನೋಡಿರುತ್ತೀರಿ. ಅದೇ ರೀತಿಯ ಘಟನೆಗಳು ದೇಶದಾದ್ಯಂತ ನಡೆಯುತ್ತಿವೆ. ಎಷ್ಟೋ ಯುವಕರು ಮದುವೆಯಾಗುವುದಕ್ಕೆ ಹುಡುಗಿ ಸಿಗದೇ ಒದ್ದಾಡುತ್ತಿದ್ದಾರೆ. ಇಲ್ಲಿ ಇಬ್ಬರು ಯುವಕರು ಮದುವೆಗೆ ಹುಡುಗಿ ಸಿಗದಿದ್ದಕ್ಕಾಗಿ ವಿಭಿನ್ನ ರೀತಿಯಲ್ಲಿ ಹೋರಾಟ ಶುರು ಮಾಡಿದ್ದಾರೆ. ಅವರ ಬಗ್ಗೆ ತಿಳಿಯೋಣ ಬನ್ನಿ..

 ಬೈಕ್‌ನಲ್ಲಿ ಗೊಂಬೆ ಕೂರಿಸಿಕೊಂಡು ತಿರುಗಾಡಿದ ಯುವಕ;

ಬೈಕ್‌ನಲ್ಲಿ ಗೊಂಬೆ ಕೂರಿಸಿಕೊಂಡು ತಿರುಗಾಡಿದ ಯುವಕ; ಮಧ್ಯಪ್ರದೇಶದ ಇಂಧೋರ್‌ನ ಯುವಕನೊಬ್ಬನಿಗೆ ಮದುವೆಗೆ ಹುಡುಗಿಯೇ ಸಿಕ್ಕಿರಲಿಲ್ಲ. ವ್ಯಾಲೆಂಟೈನ್ಸ್‌ ಡೇ ದಿನವಾದರೂ ಹುಡುಗಿ ಸಿಗುತ್ತಾಳೆ ಎಂದು ಆತ ಬಯಸಿದ್ದ. ಆದ್ರೆ ಅಂದೂ ಕೂಡಾ ಯಾವುದೇ ಹುಡುಗಿ ಸಿಗಲಿಲ್ಲ. ಹೀಗಾಗಿ ಬಟ್ಟೆ ಅಂಗಡಿ ಬಳಿ ನಿಲ್ಲಿಸಿದ ಗೊಂಬೆಯೊಂದನ್ನು ಬೈಕ್‌ ಮೇಲೆ ಇಟ್ಟುಕೊಂಡು ಆತ ಸುತ್ತಾಡಿದ್ದಾನೆ. ಈ ಮೂಲಕ ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದಾನೆ.

ಮೂರು ದಿಗಳ ಹಿಂದೆ ಈ ವಿಡಿಯೋವನ್ನು ಆತನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ಸಾಕಷ್ಟು ವೈರಲ್‌ ಆಗುತ್ತಿದೆ. ಈತ ಗೊಂಬೆ ಕೂರಿಸಿಕೊಂಡು ಓಡಾಡುತ್ತಿರುವುದನ್ನು ನೋಡಿ ಜನ ನಗಾಡಿದ್ದಾರೆ. ವಿಚಿತ್ರವಾಗಿ ನೋಡಿದ್ದಾರೆ. ಈ ವಿಡಿಯೋ ನೋಡಿ ಕೆಲವರು ಇದು ಸಿಂಗಲ್ ಹುಡುಗರ ಲಾಸ್ಟ್ ಆಪ್ಷನ್ ಎಂದು ಕಮೆಂಟ್‌ ಮಾಡಿದ್ದಾರೆ.

ಆಟೋ ಮೇಲೆ ವಧು ಬೇಕು ಎಂದು ಬೋರ್ಡ್‌;

ಆಟೋ ಮೇಲೆ ವಧು ಬೇಕು ಎಂದು ಬೋರ್ಡ್‌; ಇನ್ನು  ಮಧ್ಯಪ್ರದೇಶದ ದಾಮೋಹ್ ನಗರದ ಯುವಕನ ವಿಡಿಯೋ ಕೂಡಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾಮೋಹ್‌ನ 29 ವರ್ಷದ ದೀಪೇಂದ್ರ ರಾಥೋಡ್ ಇ-ರಿಕ್ಷಾ ಓಡಿಸುತ್ತಿದ್ದಾರೆ. ರಾಥೋಡ್ ಹಲವಾರು ವರ್ಷಗಳಿಂದ ಸೂಕ್ತ ಹುಡುಗಿಯನ್ನು ಹುಡುಕುತ್ತಿದ್ದನು. ಮದುವೆ ಬ್ಯೂರೋವನ್ನು ಸಂಪರ್ಕಿಸಿದರೂ ವಧು ಆಯ್ಕೆ ಮಾಡಲು ವಿಫಲವಾಗಿದೆ. ಆದ್ದರಿಂದ ಅವನು ತಾನೇ ವಧುವನ್ನು ಹುಡುಕಲು ನಿರ್ಧರಿಸಿದನು. ಇದಕ್ಕಾಗಿ ಅವನು ವಿನೂತನವಾಗಿ ಯೋಚಿಸಿದನು. ತಾವು ಓಡಿಸುವ ಇ-ರಿಕ್ಷಾದಲ್ಲಿ ‘ವಧು ಬೇಕು’ ಎಂಬ ಹೋರ್ಡಿಂಗ್ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಅದರ ಮೇಲೆ ತನ್ನ ಭಾವಚಿತ್ರ ಮತ್ತು ಜನ್ಮ ದಿನಾಂಕ ಸೇರಿದಂತೆ ವೈಯಕ್ತಿಕ ವಿವರಗಳೊಂದಿಗೆ ಬಯೋ-ಡೇಟಾವನ್ನು ಬರೆದಿದ್ದಾನೆ. ಮೇಲಾಗಿ ಜಾತಿ, ಧರ್ಮ ಮುಖ್ಯವಲ್ಲ, ಸ್ಥಳೀಯರ ಅಭ್ಯಂತರವಿಲ್ಲ ಎಂದು ಬರೆದುಕೊಂಡಿದ್ದಾನೆ.

ನಗರದಲ್ಲಿ ನೀವು ರಿಕ್ಷಾದಲ್ಲಿ ಎಲ್ಲಿಗೆ ಹೋದರೂ, ಹೋರ್ಡಿಂಗ್‌ಗಳಲ್ಲಿರುವ ಬಯೋ ಡೇಟಾವನ್ನು ಜನರು ಕುತೂಹಲದಿಂದ ಓದುತ್ತಿದ್ದಾರೆ. ಈ ಕುರಿತು ದೀಪೇಂದ್ರ ರಾಥೋಡ್ ಮಾತನಾಡಿ.. ‘ನನ್ನ ಪೂರ್ವಜರು ಗುಲ್ಲುಗೋಪುರ ಸುತ್ತಿ ಪೂಜೆ ಸಲ್ಲಿಸುವುದರಲ್ಲಿ ನಿರತರಾಗಿದ್ದಾರೆ. ನನಗೆ ಮದುವೆಯ ವಯಸ್ಸು ಮೀರಿದೆ. ಸಮಾಜದಲ್ಲಿ ಹೆಣ್ಣುಮಕ್ಕಳು ಕಡಿಮೆಯಾಗಿದ್ದಾರೆ.. ಆರಂಭದಲ್ಲಿ ಮದುವೆ ಗುಂಪನ್ನು ಸಂಪರ್ಕಿಸಿದ್ದೆ.. ಆದರೆ ಲಾಭವಾಗಲಿಲ್ಲ. ತಂದೆ-ತಾಯಿಯ ಅನುಮತಿ ಪಡೆದು ಈ ರೀತಿ ತಿರುಗಾಡುತ್ತಿದ್ದೇನೆ ಎಂದರು. ಅವರು ಯಾವಾಗಲೂ ತಮ್ಮ ಸಂಗಾತಿಯು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.

 

Share Post