National

Farmers Protest; ದೆಹಲಿಯತ್ತ ರೈತರ ಲಗ್ಗೆ; ಮುಳ್ಳಿನ ಕೋಟೆ ನಿರ್ಮಿಸಿದ ಪೊಲೀಸರು!

ನವದೆಹಲಿ: ತಮ್ಮ ಬೇಡಿಕೆ ಈಡೇರಿಸಲು ರಾಷ್ಟ್ರ ರಾಜಧಾನಿಗೆ ಸಾವಿರಾರು ರೈತರು ಮತ್ತೆ ಲಗ್ಗೆ ಇಡುತ್ತಿದ್ದಾರೆ. ಕೆಲ ವರ್ಷದ ಹಿಂದೆ ದೊಡ್ಡ ಹೋರಾಟ ಮಾಡಿದ್ದ ರೈತರು ಇದೀಗ ಮತ್ತೆ ಸಕಲ ತಯಾರಿಯೊಂದಿಗೆ ದೆಹಲಿಗೆ ಆಗಮಿಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಕರ್ನಾಟಕ, ಕೇರಳದಿಂದ ರೈತರ ದಂಡು ದೆಹಲಿಯ ಗಡಿ ಭಾಗಕ್ಕೆ ಬಂದಿದೆ. ಅವರನ್ನು ತಡೆಯಲು ಪೊಲೀಸರು ಕೂಡಾ ಸಕಲ ಸನ್ನದ್ಧರಾಗಿದ್ದಾರೆ.

ಇದನ್ನೂ ಓದಿ; Poster War; ಉದ್ಯೋಗ ಮೇಳದ ನಾಟಕ, `Show’cialist ಸಿಎಂ; ಏನಿದು ಪೋಸ್ಟರ್‌ ವಾರ್‌..?

ಅಶ್ರುವಾಯು ಪ್ರಯೋಗಿಸಿದ ಪೊಲೀಸರು;

ಅಶ್ರುವಾಯು ಪ್ರಯೋಗಿಸಿದ ಪೊಲೀಸರು; ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಗೆ ಕೆಲವು ಕಿಲೋಮೀಟರ್ ಮೊದಲು, ದೆಹಲಿಯತ್ತ ಬರುತ್ತಿದ್ದ ರೈತರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಈ ಪ್ರದೇಶವು ಅಂಬಾಲಾ ಸಮೀಪದಲ್ಲಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ರೈತರು ದೆಹಲಿ ಪ್ರವೇಶಿಸದಂತೆ ಗಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬ್ಯಾರಿಕೇಡ್‌ಗಳು, ತಂತಿಬೇಲಿ ಹಾಕಲಾಗಿದೆ. ಇದರ ನಡುವೆಯೂ ಸಾವಿರಾರು ರೈತರು ದೆಹಲಿಯತ್ತ ಹೊರಟಿದ್ದಾರೆ.

ರೈತರನ್ನು ತಡೆಯಲು ಪೊಲೀಸರಿಂದ ಮುಳ್ಳಿನ ಕೋಟೆ;

ರೈತರನ್ನು ತಡೆಯಲು ಪೊಲೀಸರಿಂದ ಮುಳ್ಳಿನ ಕೋಟೆ; ಸಾವಿರಾರು ರೈತರು ದೆಹಲಿ ಗಡಿ ಪ್ರವೇಶ ಮಾಡಿದ್ದಾರೆ. ಆದ್ರೆ ಅಲ್ಲಿಂದ ಒಳ ಹೋಗಲು ಪೊಲೀಸರು ಬಿಡುತ್ತಿಲ್ಲ. ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪೊಲೀಸರು ರೈತರನ್ನ ತಡೆಯಲು ಮುಳ್ಳಿನ ಕೋಟೆಯನ್ನೇ ನಿರ್ಮಿಸಿದ್ದಾರೆ. ರಸ್ತೆಗೆ ಮುಳ್ಳುತಂತಿಯಿಂದ ಬೇಲಿ ಹಾಕಲಾಗಿದೆ. ರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಗೋಡೆಗಳನ್ನು ಕೂಡಾ ಕಟ್ಟಲಾಗಿದೆ. ಅಲ್ಲಿ ಸಾವಿರಾರು ರೈತರು ಜಮಾಯಿಸ್ತಿದ್ದಾರೆ. ದೆಹಲಿ-ನೋಯ್ಡಾ ಗಡಿಯ ಡಿಎನ್‌ಡಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ‘ಚಲೋ ದೆಹಲಿ’ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಬದಲಾಯಿಸಲಾಗಿತ್ತು. ದೆಹಲಿಯ ಯುಪಿ ಭಾಗದಿಂದ ಗಾಜಿಪುರ ಗಡಿ, ಸೋನಿಪತ್, ಪಾಣಿಪತ್, ಕರ್ನಾಲ್, ಬಹದ್ದೂರ್‌ಗಢ್ ಮತ್ತು ರೋಹ್ಟಕ್‌ಗೆ ಹೋಗುವ ಹಲವು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ; Congress Clash; ಕೋಲಾರದಲ್ಲಿ ಕೊತ್ತೂರು-ಕೆ.ಹೆಚ್‌.ಮುನಿಯಪ್ಪ ಬೆಂಬಲಿಗರ ಜಟಾಪಟಿ!

ದೆಹಲಿಯಿಂದ ಗಾಜಿಪುರದ ಮೂಲಕ ಗಾಜಿಯಾಬಾದ್‌ಗೆ ಹೋಗಲು, ಅಕ್ಷರಧಾಮ ಅಥವಾ ಪತ್ಪರ್‌ಗಂಜ್/ಮದರ್ ಡೈರಿ ರಸ್ತೆ ಅಥವಾ ಚೌಧರಿ ಚರಣ್ ಸಿಂಗ್ ಮಾರ್ಗವನ್ನು ಪುಷ್ಟ ರಸ್ತೆಯ ಮೂಲಕ ಐಎಸ್‌ಬಿಟಿ ಆನಂದ್ ವಿಹಾರ್ ಮೂಲಕ ತೆಗೆದುಕೊಂಡು ಮಹಾರಾಜಪುರ ಅಥವಾ ಅಪ್ಸರಾ ಕಡೆಗೆ ಮುಂದುವರಿಯಿರಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, NH-44 ಮೂಲಕ ಹರಿಯಾಣಕ್ಕೆ ಹೋಗುವ ರಸ್ತೆಯಲ್ಲಿ ಕೆಲವು ತಿರುವುಗಳನ್ನು ಸಹ ಮಾಡಲಾಗಿದೆ. ದೆಹಲಿಯಲ್ಲಿ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿರುತ್ತದೆ ಎಂದು ದೆಹಲಿ ಪೊಲೀಸರು ಈ ಹಿಂದೆ ಹೊರಡಿಸಿದ ಆದೇಶಗಳಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ನಿತ್ಯಾನಂದ ರಾಯ್ ಮತ್ತು ಅರ್ಜುನ್ ಮುಂಡಾ ರೈತರೊಂದಿಗೆ ತಡರಾತ್ರಿ ನಡೆಸಿದ ಮಾತುಕತೆ ವಿಫಲವಾಗಿದೆ. ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಘೋಷಿಸಿದ್ದಾರೆ.

ಇದನ್ನೂ ಓದಿ; Sleep Divorce; ದಂಪತಿಗಳೇ.. ಆದ್ರೆ ಬೇರೆ ಮಲಗ್ತಾರೆ..!; ಕೊವಿಡ್‌ ನಂತರ ಇದೆಂಥಾ ಅಭ್ಯಾಸ..?

Share Post